ಸರ್ಕಾರಿ ನೌಕರರ ವೇತನ ಹೆಚ್ಚಳ ಫಿಕ್ಸ್ !ಈ ದಿನ ಸರ್ಕಾರದ ಅಧಿಕೃತ ಅನುಮೋದನೆ ! ಏರಿಕೆ ಕಂಡು ಖಾತೆ ಸೇರುವ ಸ್ಯಾಲರಿ ಲೆಕ್ಕಾಚಾರ ಇಲ್ಲಿದೆ!
ಯುಪಿಎಸ್ ಅಂದರೆ ಏಕೀಕೃತ ಪಿಂಚಣಿ ಯೋಜನೆ ಜಾರಿಗೆ ಬಂದ ನಂತರ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಸಂತಸದ ಸುದ್ದಿ ಬಂದಿದೆ.ತುಟ್ಟಿಭತ್ಯೆ ಹೆಚ್ಚಳದ ಕುರಿತು ಶೀಘ್ರದಲ್ಲೇ ಪ್ರಕಟಣೆ ಹೊರಬೀಳಲಿದೆ.ಸೆಪ್ಟೆಂಬರ್ ಮೂರನೇ ವಾರದಲ್ಲಿ ಕೇಂದ್ರ ಸರ್ಕಾರವು 3-4 ಡಿಎ ಹೆಚ್ಚಳವನ್ನು ಘೋಷಿಸುವ ನಿರೀಕ್ಷೆಯಿದೆ.
7ನೇ ವೇತನ ಆಯೋಗದ ಶಿಫಾರಸ್ಸಿನ ಪ್ರಕಾರ ಕೇಂದ್ರ ನೌಕರರ ವೇತನ ಗಣನೀಯವಾಗಿ ಏರಿಕೆಯಾಗಲಿದೆ ಎನ್ನಲಾಗಿದೆ.ಸರ್ಕಾರ ಶೀಘ್ರದಲ್ಲೇ ತುಟ್ಟಿಭತ್ಯೆಯನ್ನು 3 ಅಥವಾ 4 ಪ್ರತಿಶತದಷ್ಟು ಹೆಚ್ಚಿಸಲಿದೆ.
ಜೂನ್ 2024 ರಿಂದ ತುಟ್ಟಿಭತ್ಯೆಯಲ್ಲಿ 3% ಹೆಚ್ಚಳವಾದರೆ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಮತ್ತು ಪಿಂಚಣಿದಾರರ ಒಟ್ಟು ತುಟ್ಟಿ ಪರಿಹಾರವು 53% ಕ್ಕೆ ಏರುತ್ತದೆ.ತುಟ್ಟಿಭತ್ಯೆಯಲ್ಲಿ 4%ದಷ್ಟು ಹೆಚ್ಚಳವಾದರೆ ನೌಕರರು ಪಡೆಯುವ ಡಿಎ 54%ಕ್ಕೆ ಏರುತ್ತದೆ.
ಡಿಎ 3% ಹೆಚ್ಚಿಸಿದರೆ, ವೇತನದಲ್ಲಿ ಆಗುವ ಏರಿಕೆ ನೋಡುವುದಾದರೆ ಲೆವೆಲ್-1ರಲ್ಲಿ ಕೇಂದ್ರ ನೌಕರರ ಮೂಲ ವೇತನ 18,000 ರೂ. ಆಗಿದ್ದು, ತುಟ್ಟಿಭತ್ಯೆ 53% ರ ಪ್ರಕಾರ ಆಗುವ ಕೈ ಸೇರುವ ಡಿಎ ತಿಂಗಳಿಗೆ 9,540 ರೂಪಾಯಿ.
ಉದ್ಯೋಗಿಯ ಮೂಲ ವೇತನ 40,000 ರೂಪಾಯಿ ಎಂದು ಭಾವಿಸೋಣ. ಡಿಎ ಶೇ.4ರಷ್ಟು ಹೆಚ್ಚಿಸಿದರೆ ಅವರ ಮಾಸಿಕ ವೇತನದಲ್ಲಿ 1,600 ಹೆಚ್ಚುತ್ತದೆ. ವಾರ್ಷಿಕ ವೇತನಕ್ಕೆ ಲೆಕ್ಕ ಹಾಕಿದರೆ 19,200 ಹೆಚ್ಚಳವಾಗಲಿದೆ.
ಜುಲೈ 2024 ರ ತುಟ್ಟಿಭತ್ಯೆ ಹೆಚ್ಚಳದ ಅಧಿಸೂಚನೆ ಸೆಪ್ಟೆಂಬರ್‌ನಲ್ಲಿ ಹೊರ ಬಿದ್ದರೂ, ಜುಲೈನಿಂದಲೇ ನೌಕರರು ಡಿಎ ಬಾಕಿ ಅಥವಾ ಅರಿಯರ್ಸ್ ಪಡೆಯುತ್ತಾರೆ.ಇದರಿಂದಾಗಿ ಸೆಪ್ಟೆಂಬರ್ ತಿಂಗಳ ಸಂಬಳದಲ್ಲಿ ಬಂಪರ್ ಏರಿಕೆಯಾಗುವ ನಿರೀಕ್ಷೆ ಇದೆ.
ಕೇಂದ್ರ ಸರ್ಕಾರಿ ನೌಕರರ ವಿವಿಧ ಸಂಘಗಳು 8ನೇ ವೇತನ ಆಯೋಗಕ್ಕೆ ಒತ್ತಾಯಿಸುತ್ತಿವೆ. ಆದರೆ, 8ನೇ ವೇತನ ಆಯೋಗವನ್ನು ಜಾರಿಗೆ ತರುವ ಬಗ್ಗೆ ಯಾವುದೇ ಯೋಜನೆ ಇಲ್ಲ ಎಂಬ ನಿಲುವನ್ನು ಕೇಂದ್ರ ಸರ್ಕಾರ ಈಗಾಗಲೇ ಹೇಳಿದೆ.
ಇನ್ನು COVID-19 ಸಾಂಕ್ರಾಮಿಕ ಸಮಯದಲ್ಲಿ ತಡೆ ಹಿಡಿಯಲಾಗಿದ್ದ 18 ತಿಂಗಳ ಡಿಎ ಮತ್ತು ಡಿಆರ್‌ನ ಬಾಕಿಯನ್ನು ಸರ್ಕಾರ ಬಿಡುಗಡೆ ಮಾಡುವ ಸಾಧ್ಯತೆ ಕೂಡ ಇಲ್ಲ ಎನ್ನುವುದನ್ನು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಸಂಸತ್ತಿನ ಅಧಿವೇಶನದಲ್ಲಿಯೇ ಹೇಳಿದ್ದಾರೆ.
ಉದ್ಯೋಗಿಗಳ ಡಿಯರ್‌ನೆಸ್ ಆಲೋವೆನ್ಸ್ ಮತ್ತು ಪಿಂಚಣಿದಾರರ ಡಿಯರ್‌ನೆಸ್ ರಿಲೀಫ್‌ನ ಅಧಿಸೂಚನೆಯ ಸಮಯದ ಕುರಿತು ಯಾವುದೇ ಅಧಿಕೃತ ಹೇಳಿಕೆಗಳು ಇನ್ನೂ ಬಿಡುಗಡೆಯಾಗಿಲ್ಲ.ಆದರೆ ಸೆಪ್ಟೆಂಬರ್ ಮೂರನೇ ಅಥವಾ ಕೊನೆಯ ವಾರದಲ್ಲಿ ಪ್ರಕಟಣೆ ಹೊರ ಬೀಳುವುದು ಖಚಿತ ಎಂದೇ ಮೂಲಗಳು ಹೇಳುತ್ತಿವೆ.
ಸೂಚನೆ : ಈ ಲೇಖನವನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಇದರಿಂದ ತುಟ್ಟಿಭತ್ಯೆ ಅಥವಾ ವೇತನ ಹೆಚ್ಚಳದ ಗ್ಯಾರಂಟಿ ನೀಡುವುದಿಲ್ಲ.ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ಶಿಫಾರಸು ಮಾಡಲಾಗಿದೆ.