ಒಂದು ಕಾಲದಲ್ಲಿ ಬಡತನದಲ್ಲಿ ನೊಂದಿದ್ದ ಈ ಕ್ರಿಕೆಟಿಗರು ಇಂದು ಕೋಟಿಗಳ ಒಡೆಯರು
ಜಸ್ಪ್ರೀತ್ ಬುಮ್ರಾ : ಟೀಂ ಇಂಡಿಯಾದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಹೆಸರು ಇಂದು ಕ್ರಿಕೆಟ್ ಜಗತ್ತಿನಲ್ಲಿ ಬಹಳ ದೊಡ್ಡದಾಗಿದೆ. ಆದರೆ ಜಸ್ಪ್ರೀತ್ ಬುಮ್ರಾ ಅವರಿಗೆ ಸ್ವಂತ ಶೂ ಮತ್ತು ಟಿ-ಶರ್ಟ್‌ಗಳನ್ನು ಖರೀದಿಸಲು ಕೂಡ ಅವರ ಬಳಿ ಹಣವಿಲ್ಲದ ಕಾಲವಿತ್ತು ಎಂದು ಕೆಲವೇ ಜನರಿಗೆ ತಿಳಿದಿದೆ. ಇಂದು ಕ್ರಿಕೆಟ್ ಜಗತ್ತಿನಲ್ಲಿ ಸ್ಟಾರ್ ಆಗಿರುವ ಜಸ್ಪ್ರೀತ್ ಬುಮ್ರಾ ನಿರ್ದಿಷ್ಟ ಗುರಿ ಹಾಗೂ ಶ್ರಮ ಎಂದಿಗೂ ಕೈ ಬಿಡುವುದಿಲ್ಲ ಎಂಬುದಕ್ಕೆ ಪ್ರತ್ಯಕ್ಷ ನ ನಿದರ್ಶನ ಎಂದರೆ ತಪ್ಪಾಗಲಾರದು.
ಮೊಹಮ್ಮದ್ ಸಿರಾಜ್: ಟೀಂ ಇಂಡಿಯಾದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರ ಕಥೆಯೂ ಬಹಳ ಪ್ರಸಿದ್ಧವಾಗಿದೆ. ಅವರ ತಂದೆ ರಿಕ್ಷಾ ಓಡಿಸುತ್ತಿದ್ದರು ಮತ್ತು ಮಗನನ್ನು ಕ್ರಿಕೆಟಿಗನನ್ನಾಗಿ ಮಾಡಲು ಎಲ್ಲವನ್ನೂ ಪಣಕ್ಕಿಟ್ಟಿದ್ದರು. ಮೊಹಮ್ಮದ್ ಸಿರಾಜ್ ಅವರ ಪ್ರಯತ್ನ ಅವರ ಕುಟುಂಬದ ಸಹಕಾರ ಎಲ್ಲದರ ಪ್ರತಿಫಲವೇ ಇದೀಗ ಸಿರಾಜ್ ಟೀಂ ಇಂಡಿಯಾದ ಟೆಸ್ಟ್ ತಂಡದ ಪ್ರಮುಖ ಭಾಗವಾಗಿದ್ದಾರೆ.
ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ: ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಪ್ರಸ್ತುತ ಕ್ರಿಕೆಟ್‌ನಲ್ಲಿ ಬಹಳ ದೊಡ್ಡ ಹೆಸರುಗಳು. ಈ ಇಬ್ಬರು ಸಹೋದರರು ವಿಶ್ವದ ಅತ್ಯುತ್ತಮ ಆಲ್‌ರೌಂಡರ್‌ಗಳೆಂದು ಪರಿಗಣಿಸಲ್ಪಟ್ಟಿದ್ದಾರೆ. ಆದರೆ ಕೋಟ್ಯಂತರ ರೂಪಾಯಿ ಸಂಪಾದಿಸಿದ ಈ ಇಬ್ಬರು ಆಟಗಾರರ ಕುಟುಂಬ ಒಂದು ಕಾಲದಲ್ಲಿ ಕಡು ಬಡತನದಲ್ಲಿತ್ತು.
ರವೀಂದ್ರ ಜಡೇಜಾ: ವಿಶ್ವದ ಅತ್ಯುತ್ತಮ ಆಲ್‌ರೌಂಡರ್ ರವೀಂದ್ರ ಜಡೇಜಾ ಅತ್ಯಂತ ರಾಯಲ್ ಜೀವನವನ್ನು ನಡೆಸುತ್ತಾರೆ. ಕೋಟಿಗಟ್ಟಲೆ ಬೆಲೆಬಾಳುವ ಬಂಗಲೆ ಅವರದ್ದು, ಅವರ ಹವ್ಯಾಸವೂ ದೊಡ್ಡದು. ಆದರೆ ಜಡೇಜಾ ಅವರ ತಂದೆ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದರು ಮತ್ತು ಅವರ ತಾಯಿ ನರ್ಸ್ ಎಂದು ಕೆಲವೇ ಜನರಿಗೆ ತಿಳಿದಿದೆ. ಆದರೆ ಇದೀಗ ಈ ಆಟಗಾರ ತನ್ನ ಯಶಸ್ಸಿನ ಉತ್ತುಂಗದಲ್ಲಿದ್ದಾರೆ.
ಎಂಎಸ್ ಧೋನಿ: ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಶ್ವದ ಅತ್ಯಂತ ಶ್ರೀಮಂತ ಮತ್ತು ಯಶಸ್ವಿ ಕ್ರಿಕೆಟಿಗರಲ್ಲಿ ಒಬ್ಬರು. ಇಂದು ಧೋನಿಯ ಗಳಿಕೆ ಕೋಟಿಗಳಲ್ಲಿದೆ. ಆದರೆ ಧೋನಿ ಕೂಡ ಒಂದು ಕಾಲದಲ್ಲಿ ತೀರಾ ಸಾಮಾನ್ಯ ಕುಟುಂಬಕ್ಕೆ ಸೇರಿದವರು. ಇಂದು ಲಕ್ಷಾಂತರ ಕೋಟಿ ವಾಹನಗಳು ಮತ್ತು ಐಷಾರಾಮಿ ಮನೆಗಳ ಒಡೆಯ ಮಹೇಂದ್ರ ಸಿಂಗ್ ಧೋನಿ ಅವರ ಬಾಲ್ಯ ತುಂಬಾ ಸರಳವಾಗಿತ್ತು. ತಂಡಕ್ಕೆ ಎಂಟ್ರಿ ಕೊಡುವ ಮುನ್ನವೇ ಧೋನಿ ಆರ್ಥಿಕ ಸಮಸ್ಯೆಯಿಂದ ರೈಲ್ವೆ ಇಲಾಖೆಯಲ್ಲಿ ಟಿಕೆಟ್ ಕಲೆಕ್ಟರ್ ಹುದ್ದೆಯನ್ನೂ ಪಡೆದಿದ್ದರು.
ಟಿ ನಟರಾಜನ್: ಟೀಂ ಇಂಡಿಯಾದ ಸ್ಟಾರ್ ವೇಗದ ಬೌಲರ್ ಟಿ ನಟರಾಜನ್ ಬಗ್ಗೆ ಇಡೀ ವಿಶ್ವಕ್ಕೆ ಗೊತ್ತಿದೆ. ಈ ಆಟಗಾರನ ಕುಟುಂಬವು ಮೊದಲು ತುಂಬಾ ಬಡತನದಲ್ಲಿತ್ತು. ನಟರಾಜನ ಕುಟುಂಬದಲ್ಲಿ ಒಟ್ಟು 5 ಮಕ್ಕಳಿದ್ದರು, ಅವರನ್ನು ಸರಿಯಾಗಿ ಸಾಕಲು ಕೂಡ ಅವರ ಕುಟುಂಬ ಪರಾಡುತ್ತಿದ್ದಂತಹ ದಿನಗಳೂ ಇದ್ದವು. ಆದರೆ ನಟರಾಜನ್ ಐಪಿಎಲ್‌ಗೆ ಪದಾರ್ಪಣೆ ಮಾಡಿದ ನಂತರ, ಅವರ ಅದೃಷ್ಟ ಬದಲಾಗಿದೆ.