Viral Photos: ಒಂದು ಕೈಯಲ್ಲಿ ವಧು, ಇನ್ನೊಂದು ಕೈಯಲ್ಲಿ ಕೊಡೆ.. ಸುರಿಯುವ ಮಳೆಯಲ್ಲಿ ಸಪ್ತಪದಿ ತುಳಿದ ವರ!
ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಫೋಟೋದಲ್ಲಿ ಮದುವೆ ಮಂಟಪದ ಸುತ್ತಲೂ ನೀರಿದೆ.
ಜೋರು ಮಳೆಯಾಗುತ್ತಿದೆ. ಆದರೂ ವಧು-ವರರು ಮದುವೆಯಾಗಲು ಎಷ್ಟು ಉತ್ಸುಕರಾಗಿದ್ದಾರೆಂದರೆ, ಜೋರು ಮಳೆಯಲ್ಲೂ ಇಬ್ಬರೂ ನಿರಾತಂಕವಾಗಿ ಏಳು ಸುತ್ತು ಹಾಕುತ್ತಿರುವುದು ಕಂಡುಬಂದಿದೆ.
ಬಾಲಘಾಟ್ ಜಿಲ್ಲೆಯ ಕುಮ್ಹಾರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮದುವೆ ಮೆರವಣಿಗೆಯೊಂದಿಗೆ ಛೋಟಿ ಕುಮ್ಹಾರಿ ಗ್ರಾಮ ತಲುಪಿದ ಮದುಮಗ, ವಾತಾವರಣ ಬದಲಾಗುತ್ತಿದ್ದಂತೆ ತಡರಾತ್ರಿವರೆಗೂ ಮಳೆ ಸುರಿಯಿತು.
ಅದೇ ಸಮಯಕ್ಕೆ ರಾತ್ರಿ 12 ಗಂಟೆ ಸುಮಾರಿಗೆ ವಧು-ವರರ ಸಪ್ತಪದಿಯ ಶುಭ ಮುಹೂರ್ತ ಇತ್ತು. ಅದಕ್ಕಾಗಿಯೇ ವರನು ಒಂದು ಕೈಯಲ್ಲಿ ಕೊಡೆ ಹಿಡಿದು ಇನ್ನೊಂದು ಕೈಯಲ್ಲಿ ವಧುವಿನ ಕೈಯನ್ನು ಹಿಡಿದು ಮಂಟಪದಲ್ಲಿ ಏಳು ಸುತ್ತು ಹಾಕಿದನು.
ವಧು ಮುಂದೆ ನಡೆಯುತ್ತಿದ್ದರೆ, ವರನು ಹಿಂದೆ ನಡೆಯುತ್ತಿದ್ದಾನೆ. ಎಲ್ಲೆಂದರಲ್ಲಿ ನೀರು ಬೀಳುತ್ತಿದ್ದರೂ ಮದುವೆ ನಿಲ್ಲಲಿಲ್ಲ. ವಧು ಮತ್ತು ವರನ ಈ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿವೆ.