ಕೇವಲ ಈ ಎರಡು ಪದಾರ್ಥಗಳಿಂದ ಬಿಳಿ ಕೂದಲು ಬುಡದಿಂದಲೇ ಶಾಶ್ವತವಾಗಿ ಕಪ್ಪಾಗಿ, ಸೊಂಟದಾಟಿ ಬೆಳೆಯುತ್ತೆ..!
ಹೇರ್ ಡೈ ಮಾಡುವುದೊಂದೇ ಬಿಳಿ ಕೂದಲಿಗೆ ಪರಿಹಾರವಲ್ಲ. ನಿಮ್ಮ ಮನೆಯಲ್ಲಿರುವ ಪದಾರ್ಥಗಳು ಕೂಡ ಬಿಳಿ ಕೂದಲಿನಿಂದ ಪರಿಹಾರ ನೀಡಬಲ್ಲವು.
ಮನೆಯಲ್ಲಿರುವ ಕೆಲವು ಪದಾರ್ಥಗಳನ್ನು ಕೂದಲಿನ ಆರೈಕೆಯಲ್ಲಿ ಬಳಸುವುದರಿಂದ ಬಿಳಿ ಕೂದಲು ಮತ್ತೆ ಕಪ್ಪಾಗುವುದು ಮಾತ್ರವಲ್ಲದೆ, ಕೂದಲಿಗೆ ಉತ್ತಮ ಪೋಷಣೆ ದೊರೆತು ಸೊಂಟದಾಟಿ ಉದ್ದವಾಗಿಯೂ ಬೆಳೆಯುತ್ತದೆ.
ಈರುಳ್ಳಿ ರಸದಲ್ಲಿರುವ ಪೋಷಕಾಂಶಗಳು ಮತ್ತು ಜೀವಸತ್ವಗಳು ಕೂದಲಿನ ಕಿರುಚೀಲಗಳನ್ನು ಪೋಷಿಸುತ್ತವೆ. ಜೊತೆಗೆ ನೆತ್ತಿಯ ಆರೋಗ್ಯವನ್ನು ಸುಧಾರಿಸಿ ಕೂದಲ ಬೆಳವಣಿಗೆಗೆಯಲ್ಲಿ ಪ್ರಯೋಜನಕಾರಿ ಆಗಲಿದೆ.
ಅಲೋವೆರಾ ಕೂದಲಿನ ಕಾಳಜಿಯ ಜೊತೆಗೆ ಚರ್ಮದ ಕಾಳಜಿಯನ್ನೂ ವಹಿಸುತ್ತದೆ. ಕೂದಲಿಗೆ ಅಲೋವೆರಾ ಜೆಲ್ ಬಳಸುವುದರಿಂದ ಬಿಳಿ ಕೂದಲು ಮರಳಿ ಕಪ್ಪಾಗುವುದರ ಜೊತೆಗೆ ರೇಷ್ಮೆಯಂತಹ ಮೃದುವಾದ ಕೂದಲ ಬೆಳವಣಿಗೆಗೆ ಸಹಕಾರಿ ಆಗಿದೆ.
ಒಂದು ಬಟ್ಟಲಿನಲ್ಲಿ ಒಂದೆರಡು ಸ್ಪೂನ್ ಅಲೋವೆರಾ ಜೆಲ್ ತೆಗೆದುಕೊಂಡು ಸಮ ಪ್ರಮಾಣದಲ್ಲಿ ತಾಜಾ ಈರುಳ್ಳಿ ರಸವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.
ಈರುಳ್ಳಿ ರಸ, ಅಲೋವೆರಾ ಜೆಲ್ ಮಿಶ್ರಣವನ್ನು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ ಲಘುವಾಗಿ ಮಸಾಜ್ ಮಾಡಿ. ಮೂರು ಗಂಟೆ ಬಳಿಕ ಸೌಮ್ಯವಾದ ಶಾಂಪೂ ಬಳಸಿ ಹೇರ್ ವಾಶ್ ಮಾಡಿ.
ನಿಯಮಿತವಾಗಿ ಈ ರೀತಿ ಈರುಳ್ಳಿ, ಅಲೋವೆರಾ ಜೆಲ್ ಮಿಶ್ರಣವನ್ನು ಬಳಸುವುದರಿಂದ ಕೆಲವೇ ದಿನಗಳಲ್ಲಿ ಕೂದಲು ಬುಡದಿಂದಲೂ ಶಾಶ್ವತವಾಗಿ ಕಪ್ಪಾಗುತ್ತದೆ. ರೇಷ್ಮೆಯಂತಹ ಮೊಣಕಾಲುದ್ದ ಕೂದಲು ನಿಮ್ಮದಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.