ಈರುಳ್ಳಿ ಸಿಪ್ಪೆಯನ್ನು ಹೀಗೆ ಬಳಸಿದ್ರೆ ಮೂರೇ ನಿಮಿಷದಲ್ಲಿ ಗಾಢ ಕಪ್ಪಾಗುತ್ತೆ ಬಿಳಿ ಕೂದಲು
ಬಿಳಿ ಕೂದಲಿಗೆ ಪರಿಹಾರವಾಗಿ ಮಾರುಕಟ್ಟೆಯಲ್ಲಿ ಹಲವು ಹೇರ್ ಡೈ ಗಳು ಲಭ್ಯವಿದೆ. ಆದರೆ, ಹೇರ್ ಡೈ ಬಳಸುವುದರಿಂದ ಕೆಲವರಿಗೆ ಚರ್ಮ ಹಾಗೂ ಕೂದಲಿಗೆ ಸಂಬಂಧಿಸಿದಂತೆ ಸೈಡ್ ಎಫೆಕ್ಟ್ ಉಂಟಾಗಬಹುದು.
ನಿಮ್ಮ ಅಡುಗೆಮನೆಯಲ್ಲಿರುವ ಕೆಲವು ಪದಾರ್ಥಗಳು ಹಾಗೂ ನೀವು ಕಸ ಎಂದು ಬಿಸಾಡುವ ಈರುಳ್ಳಿ ಸಿಪ್ಪೆಯನ್ನು ಬಳಸಿ ಬಿಳಿ ಕೂದಲಿಗೆ ಶಾಶ್ವತ ಪರಿಹಾರವನ್ನು ಪಡೆಯಬಹುದು.
ಬಿಳಿ ಕೂದಲನ್ನು ಕಪ್ಪಾಗಿಸಲು ಒಂದು ವಿಶೇಷ ಪಾನೀಯವು ತುಂಬಾ ಲಾಭದಾಯಕ ಎಂದು ಸಾಬೀತುಪಡಿಸುತ್ತದೆ. ಇದಕ್ಕಾಗಿ ಬೇಕಾಗುವ ಸಾಮಾಗ್ರಿಗಳೆಂದರೆ... ಈರುಳ್ಳಿ ಸಿಪ್ಪೆ, ಲವಂಗ, ಬ್ಲಾಕ್ ಟೀ, ನೀರು
ಮೊದಲಿಗೆ ಒಂದು ಲೋಟ ನೀರನ್ನು ಪಾತ್ರೆಗೆ ಹಾಕಿ ಇದರಲ್ಲಿ ಒಂದು ಈರುಳ್ಳಿಯ ಸಿಪ್ಪೆ, ಒಂದು ಸ್ಪೂನ್ ಲವಂಗ, ಸಮ ಪ್ರಮಾಣದ ಬ್ಲಾಕ್ ಟೀ ಹಾಕಿ 10 ನಿಮಿಷ ಚೆನ್ನಾಗಿ ಕುದಿಸಿ.
ನೀರಿನಲ್ಲಿ ಈರುಳ್ಳಿ ಸಿಪ್ಪೆ, ಲವಂಗ, ಬ್ಲಾಕ್ ಟೀ ಎಲ್ಲವನ್ನೂ ಹಾಕಿ ಕುದಿಸಿಟ್ಟ ನೀರು ಪೂರ್ತಿಯಾಗಿ ತಣ್ಣಗಾಗಲು ಬಿಡಿ. ನಂತರ ಸ್ಪ್ರೇ ಬಾಟಲಿನಲ್ಲಿ ಅದನ್ನು ಶೋಧಿಸಿಡಿ.
ಈರುಳ್ಳಿ ಸಿಪ್ಪೆಯಿಂದ ತಯಾರಿಸಿದ ನೀರನ್ನು ಸ್ಪ್ರೇ ಬಾಟಲಿಯ ಸಹಾಯದಿಂದ ಕೂದಲಿನ ಬುಡಕ್ಕೆ ಸ್ಪ್ರೇ ಮಾಡಿ. ಅರ್ಧಗಂಟೆ ಬಿಟ್ಟು ಸೌಮ್ಯ ಶಾಂಪೂವಿನಿಂದ ಹೇರ್ ವಾಶ್ ಮಾಡಿ.
ಈರುಳ್ಳಿ ಸಿಪ್ಪೆಯ ನೀರನ್ನು ನಿಯಮಿತವಾಗಿ ಬಿಳಿ ಕೂದಲಿಗೆ ಬಳಸುವುದರಿಂದ ಬೆಳ್ಳಗಾಗಿರುವ ಕೂದಲು ಶಾಶ್ವತವಾಗಿ ಕಪ್ಪಾಗುತ್ತದೆ. ಜೊತೆಗೆ ಕೂದಲು ಉದ್ದವಾಗಿ ದಷ್ಟಪುಷ್ಟವಾಗಿ ಬೆಳೆಯುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.