ಬ್ಲಾಕ್ ಫಂಗಸ್ ನಿಂದ ರಕ್ಷಣೆಗೆ ಸುಲಭ ಓರಲ್ ಟಿಪ್ಸ್

Sun, 23 May 2021-3:50 pm,

ಕರೋನಾ ಚಿಕಿತ್ಸೆಯ ಸಂದರ್ಭದಲ್ಲಿ ಸುದೀರ್ಘ ಅವಧಿಗೆ ಸ್ಟೆರಾಯ್ಡ್ ಬಳಸಿದ ಪರಿಣಾಮ ಬ್ಲ್ಯಾಕ್ ಫಂಗಸ್ ಹೆಚ್ಚಲು ಕಾರಣ ಎನ್ನಲಾಗಿದೆ. ಅಶುದ್ಧ ಆಮ್ಲಜನಕ ಮತ್ತು ವೆಂಟಿಲೇಟರ್ ಬಳಕೆಯ ಪರಿಣಾಮ ಕೂಡಾ ಬ್ಲಾಕ್ ಫಂಗಸ್ ಎನ್ನಲಾಗಿದೆ ಡಯಾಬಿಟಿಸ್ ರೋಗಿಗಳಿಗೆ ಕರೋನಾ ಉಂಟಾದಾಗ ಸ್ಟೆರಾಯಿಡ್ ನೀಡಲಾಗುತ್ತದೆ. ಸ್ಟೆರಾಯಿಡ್ ನೀಡಿದಾಗ ರಕ್ತದಲ್ಲಿ ಸಕ್ಕರೆ ಲೆವೆಲ್ ಹೆಚ್ಚಾಗುತ್ತದೆ. ಇದು ಕೂಡಾ  ಬ್ಲ್ಯಾಕ್ ಫಂಗಸ್ ಗೆ ಕಾರಣವಾಗಿದೆ.

ಇಮ್ಯೂನಿಟಿ ದುರ್ಬಲ  ಇರುವವರಿಗೆ ಚಿಕಿತ್ಸೆಯ ಸಂದರ್ಭದಲ್ಲಿ ಸ್ಟೆರಾಯಿಡ್ ಹೆಚ್ಚಾಗಿ ನೀಡಲಾಗುತ್ತದೆ.  ಇಂಥವರಲ್ಲಿ ಕೂಡಾ ಬ್ಲ್ಯಾಕ್ ಫಂಗಸ್ ಸಾಧ್ಯತೆ ಹೆಚ್ಚಾಗಿದೆ.

ಕಣ್ಣು ಕೆಂಪಾಗುವುದು, ಕಣ್ಣಲ್ಲಿ ನೀರು ಬರುವುದು  ಕಣ್ಣಲ್ಲಿ ಸೋಂಕು ಕಾಣಿಸಿಕೊಳ್ಳುವುದು ಈ ರೋಗದ ಮುಖ್ಯ ಲಕ್ಷಣ. ನಂತರ ಕಣ್ಣಲ್ಲಿ ನೋವು ಉಂಟಾಗುತ್ತದೆ. ದೃಷ್ಟಿ ಹೋಗಿ ಬಿಡುತ್ತದೆ. ಈ ಫಂಗಸ್ ಸೋಂಕು ಶುರುವಾಗುವುದು ಮೂಗಿನ ಮೂಲಕ.  ಇದೇ ಕಾರಣಕ್ಕೆ ಮೂಗಿನಲ್ಲಿ ಕಂದು ಅಥವಾ ಕೆಂಪು ಬಣ್ಣದ ಸಿಂಬಳ ಬರಲು ಶುರುವಾಗುತ್ತದೆ.  ನಂತರ  ಇದು ಕಣ್ಣುಗಳನ್ನು ತಲುಪುತ್ತವೆ. ನಂತರ ಮೆದುಳು, ನರಮಂಡಲಗಳಿಗೂ ಈ ಸೋಂಕು ಹರಡುತ್ತದೆ.

ಈ ರೋಗದಿಂದ ರಕ್ಷಿಸಿಕೊಳ್ಳಬೇಕಾದರೆ ಬಾಯಿಯ ಸ್ವಚ್ಛತೆ ಅತಿ ಮುಖ್ಯ. ದಿನಕ್ಕೆ 2-3 ಸಲ ಹಲ್ಲುಜ್ಜಬೇಕು. ಬಾಯಿ ಸ್ವಚ್ಛ ಇಟ್ಟುಕೊಂಡರೆ ಬ್ಲ್ಯಾಕ್ ಫಂಗಸ್ ಅಪಾಯ ಕಡಿಮೆ

ಕರೋನಾ ನೆಗೆಟಿವ್ ಆದಾಕ್ಷಣ ನಿಮ್ಮ ಟೂತ್ ಬ್ರಶ್ ಬಳಸಿ.  ಇದರಿಂದ ಹಳೆಯ ಬ್ರಶ್ ಕಾರಣದಿಂದಲೇ ಮತ್ತೆ ಸೋಂಕು ಉಂಟಾಗಬಹುದು. ಅದೇ ರೀತಿ ನಿಯಮಿತವಾಗಿ ಬಾಯಿ ತೊಳೆಯುತ್ತಲೆ ಇರಿ. 

ಕೊವಿಡ್ ನಿಂದ ಚೇತರಿಸಿಕೊಂಡ ವ್ಯಕ್ತಿಗೆ ಸ್ವಚ್ಛ ಟೂತ್ ಬ್ರಶ್ ಮತ್ತು ಟಂಗ್ ಕ್ಲೀನರ್ ನಿಂದ ಬಾಯಿ ಕ್ಲೀನ್ ಮಾಡುವುದು ಬಲು ಮುಖ್ಯ.  ನಿಮ್ಮ ಬ್ರಶ್ ಮತ್ತು ಟಂಗ್ ಕ್ಲೀನರ್ ಪ್ರತ್ಯೇಕವಾಗಿಡಿ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link