Mokshitha Pai: ಮನಾಲಿಯ ಚುಮು ಚುಮು ಚಳಿಯಲ್ಲಿ ಅಮ್ಮನ ಜೊತೆ ಟ್ರಿಪ್ ಎಂಜಾಯ್ ಮಾಡ್ತಿರುವ ಪಾರು!
ಪಾರು ಧಾರಾವಾಹಿಯಲ್ಲಿ ನಾಯಕಿ ನಟಿಯಾಗಿ ಮಿಂಚುತ್ತಿರುವ ನಟಿ ಮೋಕ್ಷಿತಾ ಪೈ ಮೋಕ್ಷಿತಾ ಹಾಗೂ ಆಕೆಯ ಕುಟುಂಬ ಉತ್ತರ ಭಾರತಕ್ಕೆ ಟ್ರಿಪ್ ಹೋಗಿದ್ದಾರೆ.
ಕಿರುತೆರೆ ನಟಿ ಮೋಕ್ಷಿತಾ ಹಾಗೂ ಆಕೆಯು ಕುಟುಂಬ ಮನಾಲಿಯಲ್ಲಿ ಎಂಜಾಯ್ ಮಾಡುತ್ತಾ ಮಂಜಿನಲ್ಲಿ ಆಡಿ ಬಹಳ ಖುಷಿ ಪಡುತ್ತಿದ್ದಾರೆ.
ನಟಿ ಮೋಕ್ಷಿತಾ ಕುಟುಂಬದವರ ಜೊತೆ ಮನಾಲಿ, ಚಂಡೀಗಢ ಹಾಗೂ ಮತ್ತಿತರ ಪ್ರದೇಶಕ್ಕೆ ತೆರಳಿ ಅಲ್ಲಿರುವಂತಹ ಪ್ರಕೃತಿಯ ರಮಣೀಯ ದೃಶ್ಯವನ್ನು ನೋಡಿ ಎಂಜಾಯ್ ಮಾಡುತ್ತಾ ಇದ್ದಾರೆ.
ಮೋಕ್ಷಿತಾ ಪೈ ಹಿಮಾಚಲ ಪ್ರದೇಶ, ಮನಾಲಿ, ಚಂಡೀಗಢದ ಸುಂದರ ಜಲಪಾತ, ಹಿಮ, ಕೋಟೆ, ಮೊದಲಾದ ಪ್ರವಾಸಿ ತಾಣಗಳಿಗೆ ತೆರಳಿ ಸ್ನೋನಲ್ಲಿ ಎಲ್ಲರ ಜೊತೆ ಆಟ ಆಡುತ್ತ ಯಾಚ್‌ನಲ್ಲಿ ಸವಾರಿ ಮಾಡಿದ್ದಾರೆ.
ಸೀರಿಯಲ್ ನಟಿ ಮೋಕ್ಷಿತಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು, ಆಗಾಗ ರೀಲ್ಸ್ ಹಾಕುತ್ತಾ ಇರುತ್ತಾರೆ. ಹಾಗೆಯೇ ಫೋಟೋಶೂಟ್ ಕೂಡ ಮಾಡಿಸಿ ಅಪ್ಲೋಡ್ ಮಾಡುತ್ತಾ ಇರುತ್ತಾರೆ.
ಕಿರುತೆರೆ ಬೆಡಗಿ ಮನಾಲಿಯ ಪೋಟೋಗಳಲ್ಲಿ ಬಹಳ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದು, ಪೀಚ್ ಬಣ್ಣದ ಉಲ್ಲನ್ ಡ್ರೆಸ್ ಮೇಲೆ, ಬ್ಲ್ಯಾಕ್ ಓವರ್ ಕೋಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್, ಕೈಯಲ್ಲಿ ಗ್ಲೌಸ್, ಜೊತೆಗೆ ಕಣ್ಣಲ್ಲಿ ಗಾಗಲ್ಸ್ ಧರಿಸಿ ಬಹಳ ಸುಂದರವಾಗಿ ಕಾಣಿಸುತ್ತ ಇದ್ದಾರೆ.
ಪಾರು ನಟಿ ಮೋಕ್ಷಿತ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಕೆಳಗೆ "ಸುಂದರವಾದ ವಿಷಯಗಳಾದ ನೆನಪುಗಳು ಮತ್ತು ಪ್ರತಿ ಕ್ಷಣಗಳು ಇವುಗಳನ್ನು ಹಣ ಕೊಟ್ಟು ಕೊಳ್ಳಲು ಸಾಧ್ಯವಿಲ್ಲ. ನೀವದನ್ನ ಎಂಜಾಯ್ ಮಾಡದೇ ಇದ್ದರೆ, ಅದು ಕಳೆದು ಹೋಗುತ್ತೆ" ಎಂದು ಬರೆದುಕೊಂಡಿದ್ದಾರೆ.
ನಟಿ ಮೋಕ್ಷಿತಾ ಹೆಚ್ಚಾಗಿ ಬೇರೆ ಬೇರೆ ಪ್ರದೇಶಗಳಿಗೆ ಭೇಟಿ ನೀಡುತ್ತಾ , ಅಲ್ಲಿನ ಸೊಗಡನ್ನು ನೋಡಿ ಎಂಜಾಯ್ ಮಾಡಿದ್ದು, ಈಕೆ ಹೆಚ್ಚಿನ ಕಡೆ ಟ್ರಿಪ್ ಹೋಗಬೇಕಾದರೆ ಹೆಚ್ಚಾಗಿ ತನ್ನ ತಾಯಿಯನ್ನು ಜೊತೆಗೆ ಕರೆದುಕೊಂಡು ಹೋಗುತ್ತಾರೆ.