Akshaya Tritiya 2024: ಅಕ್ಷಯ ತೃತೀಯದಂದು ನಿರ್ಮಾಣಗೊಳ್ಳಲಿದೆ ಪಂಚ ಮಹಾಯೋಗ
ಹಿಂದೂ ಕ್ಯಾಲೆಂಡರ್ ಪ್ರಕಾರ ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಈ ವರ್ಷ ಮೇ 10ರ ಶುಕ್ರವಾರದ ದಿನ ಅಕ್ಷಯ ತೃತೀಯವನ್ನು ಆಚರಿಸಲಾಗುತ್ತಿದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಅಕ್ಷಯ ತೃತೀಯ ದಿನದಂದು ಇಡೀ ದಿನ ಶುಭ ಮುಹೂರ್ತ ಇರಲಿದೆ. ಹಾಗಾಗಿ, ಯಾವುದೇ ಶುಭ ಕಾರ್ಯಗಳನ್ನು ಮಾಡಲು ಮುಹೂರ್ತವನ್ನು ನೋಡುವ ಅವಶ್ಯಕತೆ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಇಂದು ಶ್ರದ್ಧಾ ಭಕ್ತಿಯಿಂದ ತಾಯಿ ಲಕ್ಷ್ಮಿಯನ್ನು ಪೂಜಿಸಿ, ಕೆಲವು ವಸ್ತುಗಳನ್ನು ತರುವುದರಿಂದ/ ಶಾಪಿಂಗ್ ಮಾಡುವುದರಿಂದ ಅಂತಹ ಮನೆಯಲ್ಲಿ ಲಕ್ಷ್ಮಿ ಪ್ರವೇಶಿಸಿ ಸಂಪತ್ತು ಹೆಚ್ಚಾಗುತ್ತದೆ. ಅಂತೆಯೇ, ದಾನ ಮಾಡುವುದರಿಂದ ಜೀವನದಲ್ಲಿ ಸುಖ-ಸಂತೋಷಕ್ಕೆ ಕೊರತೆಯೇ ಇರುವುದಿಲ್ಲ ಎಂದು ಹೇಳಲಾಗುತ್ತದೆ.
ಈ ವರ್ಷ ಅಕ್ಷಯ ತೃತೀಯದ ದಿನ ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿರುವ ಐದು ಮಹಾ ಯೋಗಗಳು ಕೂಡ ನಿರ್ಮಾಣವಾಗುತ್ತಿದೆ. ಆ ಶುಭ ಯೋಗಗಳೆಂದರೆ...
ಅಕ್ಷಯ ತೃತೀಯ ದಿನದಂದು ಚಂದ್ರ ಮತ್ತು ಗುರುಗಳ ಸಂಯೋಗದಿಂದ ಸಂಪತ್ತನ್ನು ಗಳಿಸಲು ತುಂಬಾ ಶುಭಕರ ಎಂದು ಪರಿಗಣಿಸಲಾಗಿರುವ ಗಜಕೇಸರಿ ಯೋಗವು ರೂಪುಗೊಂಡಿದೆ. ಇಂದು ಬೆಳಿಗ್ಗೆ 06:13 ಕ್ಕೆ ಪ್ರಾರಂಭವಾಗಿರುವ ಈ ಯೋಗವು ನಾಳೆ (ಮೇ 11) ಮಧ್ಯಾಹ್ನ 12:22 ಕ್ಕೆ ಕೊನೆಗೊಳ್ಳುತ್ತದೆ.
ಅಕ್ಷಯ ತೃತೀಯ ದಿನ ನಿರ್ಮಾಣವಾಗುತ್ತಿರುವ ಇನ್ನೊಂದು ಶುಭಯೋಗ ಎಂದರೆ ರವಿ ಯೋಗ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರವಿ ಯೋಗವನ್ನು ಗೌರವ-ಖ್ಯಾತಿಯನ್ನು ಪಡೆಯಲು ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ಅಕ್ಷಯ ತೃತೀಯ ದಿನ ಮೀನ ರಾಶಿಯಲ್ಲಿ ಮಂಗಳನಿಂದ ಧನ ಯೋಗ ನಿರ್ಮಾಣವಾಗುತ್ತಿದೆ. ಆರ್ಥಿಕ ಲಾಭಕ್ಕಾಗಿ ಈ ಯೋಗವನ್ನು ತುಂಬಾ ಶುಭ ಎಂದು ಹೇಳಲಾಗುತ್ತಿದೆ.
ಅಕ್ಷಯ ತೃತೀಯ ದಿನದಂದು ಶುಕ್ರ ಮತ್ತು ಸೂರ್ಯರ ಸಂಯೋಗದಿಂದ ಶುಕ್ರಾದಿತ್ಯ ಯೋಗ ರೂಪುಗೊಳ್ಳಲ್ಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಯೋಗವು ಸಂಪತ್ತು ವೃದ್ದಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಅಕ್ಷಯ ತೃತೀಯದ ಈ ಶುಭದಿನದಂದು ನ್ಯಾಯದ ದೇವರು ಶನಿ ದೇವ ತನ್ನ ಮೂಲ ತ್ರಿಕೋನ ರಾಶಿಯಲ್ಲಿ ಶಶಾ ಯೋಗವನ್ನು ಉಂಟುಮಾಡುತ್ತದೆ. ಇದೇ ವೇಳೆ ಮಂಗಳನು ಮೀನ ರಾಶಿಯಲ್ಲಿ ಮಾಲವ್ಯ ರಾಜಯೋಗ ನಿರ್ಮಾಣವಾಗಲಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.