ಸುಖ ನಿದ್ರೆಗೆ ಪಂಚ ಸೂತ್ರ
ನೀವು ಪ್ರತಿ ಕೆಲಸಕ್ಕೂ ಟೈಮ್ ಟೇಬಲ್ ರೂಪಿಸುವಂತೆ ಮಲಗಲು ಮತ್ತು ಏಳಲು ಕೂಡ ಟೈ ಟೇಬಲ್ ರೂಪಿಸಿ. ಮಾತ್ರವಲ್ಲ, ನಿಮ್ಮ ನಿಗದಿತ ಸಮಯದಲ್ಲಿ ಮಲಗಲು ಪ್ರಯತ್ನಿಸಿ.
ಈ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರಿಗೂ ಕೂಡ ಮೊಬೈಲ್, ಲ್ಯಾಪ್ಟಾಪ್ ಸೇರಿದಂತೆ ಗ್ಯಾಜೆಟ್ ಗಳನ್ನು ಬಿಟ್ಟಿರುವ ಅಭ್ಯಾಸವೇ ಇಲ್ಲ. ಆದರೆ, ನೀವು ಮಲಗುವ ಸಮಯದಲ್ಲಿ ಗ್ಯಾಜೆಟ್ಗಳಿಂದ ಅಂತರ ಕಾಯ್ದುಕೊಂಡರೆ ಬೇಗ ನಿದ್ದೆ ಬರುತ್ತದೆ.
ಬೆಳಕಿಗಿಂತ ಕತ್ತಲಲ್ಲಿ ಉತ್ತಮ ನಿದ್ರೆ ಬರುತ್ತದೆ. ಹಾಗಾಗಿ, ಮಲಗುವ ಕೋಣೆಯಲ್ಲಿ ಉತ್ತಮ ನಿದ್ರೆಯ ವಾತಾವರಣವನ್ನು ಸೃಷ್ಟಿಸುವುದು ಬಹಳ ಮುಖ್ಯ. ಈ ಬಗ್ಗೆ ಗಮನ ಹರಿಸಿ.
ನಶೆ ಎಂದೊಡನೆ ಮೊದಲು ನೆನಪಾಗುವುವು ಮದ್ಯಪಾನ. ಆದರೆ, ಮದ್ಯಪಾನ ಮಾತ್ರವಲ್ಲ ರಾತ್ರಿ ಮಲಗುವ ವೇಳೆ ಟೀ-ಕಾಫಿ ಸೇವಿಸುವುದು ಕೂಡ ಬಹಳ ಮುಖ್ಯ.
ನಿಯಮಿತ ವ್ಯಾಯಾಮವನ್ನು ರೂಢಿಸಿಕೊಳ್ಳಿ. ಇದು ಕೂಡ ನಿದ್ರಿಸಲು ಸಹಾಯಕವಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.