ಸಕ್ಕರೆ ಕಾಯಿಲೆ ಇರುವವರು ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿಂದರೆ ಏನಾಗುತ್ತೆ ಗೊತ್ತಾ?
ಪಪ್ಪಾಯಿ ಮಲಬದ್ಧತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ರಕ್ತದ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಉಪಯುಕ್ತವಾಗಿದೆ. ವಿಟಮಿನ್ ಎ ಇದರಲ್ಲಿ ಅಧಿಕವಾಗಿದೆ . ಚರ್ಮದ ಸಮಸ್ಯೆ ಕಡಿಮೆ ಮಾಡುತ್ತದೆ. ಖನಿಜಗಳು ಅಧಿಕವಾಗಿರುತ್ತವೆ. ಇದು ಆಂಟಿಆಕ್ಸಿಡೆಂಟ್‌ಗಳಲ್ಲಿ ಅಧಿಕವಾಗಿದೆ.
ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ರಾತ್ರಿ ಮೂರು ತುಂಡು ಪಪ್ಪಾಯಿ ತಿಂದರೆ ಪರಿಹಾರ ಪಡೆಯಬಹುದು. ಗರ್ಭಿಣಿಯರು ಮತ್ತು ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ಇದನ್ನು ತಿನ್ನದೇ ಇರುವುದು ಉತ್ತಮ.
ಪಪ್ಪಾಯಿ ಅಜೀರ್ಣದಿಂದ ಬಳಲುತ್ತಿರುವವರಿಗೆ ತುಂಬಾ ಒಳ್ಳೆಯದು. ಹೆಚ್ಚಿನ ಪ್ರಮಾಣದ ಫೈಬರ್ ಇರುವುದರಿಂದ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.
ಇದು ಜೀರ್ಣಕ್ರಿಯೆಗೆ ಉತ್ತಮವಾದ ಪೆಪ್ಸಿನ್ ಅನ್ನು ಹೊಂದಿರುತ್ತದೆ. ಪಪ್ಪಾಯಿಯಲ್ಲಿ ಹೊಟ್ಟೆಯನ್ನು ಸ್ವಚ್ಛಗೊಳಿಸುವ ಶಕ್ತಿ ಇರುವುದರಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ತಿನ್ನಬೇಕು. ಹೃದ್ರೋಗಗಳನ್ನು ತಡೆಯುವಲ್ಲಿ ಪಪ್ಪಾಯಿ ಪರಿಣಾಮಕಾರಿ.
ಪಪ್ಪಾಯಿಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಎ ಇದೆ. ಈ ಹಣ್ಣಿನಲ್ಲಿರುವ ಬೀಟಾ ಕೆರಾಟಿನ್ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳಿಂದ ರಕ್ಷಿಸುತ್ತದೆ. ವಸಡಿನ ಆರೋಗ್ಯಕ್ಕೆ ಉತ್ತಮ. ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಮಧುಮೇಹವನ್ನು ಸಹ ನಿಯಂತ್ರಿಸಬಹುದು. ಆದರೆ ಮಿತವಾಗಿ ತಿನ್ನುವುದು ಮಾತ್ರ ಆರೋಗ್ಯಕ್ಕೆ ಒಳ್ಳೆಯದು.