Photo Gallery: ಪ್ರಧಾನಿ ಮೋದಿ ಕಾಲು ಮುಟ್ಟಿ ನಮಸ್ಕರಿಸಿದ ಪಪುವಾ ನ್ಯೂ ಗಿನಿಯಾದ ಪ್ರಧಾನಿ!
ಪಪುವಾ ನ್ಯೂ ಗಿನಿಯಾ ದೇಶದ ಪೋರ್ಟ್ ಮೊರೆಸ್ಬಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಪ್ರಧಾನಿ ಜೇಮ್ಸ್ ಮರಾಪೆ ಅವರು ಆತ್ಮೀಯವಾಗಿ ಸ್ವಾಗತಿಸಿದರು.
3 ರಾಷ್ಟ್ರಗಳ ಪ್ರವಾಸದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಪಪುವಾ ನ್ಯೂ ಗಿನಿಯಾಗೆ ಭೇಟಿ ನೀಡಿದ್ದರು. ಜಪಾನ್‌ನಲ್ಲಿ ನಡೆಯಲಿರುವ G-7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.
ಪಪುವಾ ನ್ಯೂ ಗಿನಿಯಾದ ಪ್ರಧಾನಿ ಜೇಮ್ಸ್ ಮರಾಪೆ ಅವರು ಪ್ರಧಾನಿ ಮೋದಿಯವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಇದರಿಂದ ಪ್ರಧಾನಿ ಮೋದಿ ದಿಲ್ ಖುಷ್ ಆಗಿದ್ದರು.
ಅಚ್ಚರಿ ಎಂಬಂತೆ ಪಪುವಾ ನ್ಯೂ ಗಿನಿಯಾದ ಪ್ರಧಾನಿ ಜೇಮ್ಸ್ ಮರಾಪೆ ಅವರು ಪ್ರಧಾನಿ ಮೋದಿಯವರ ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು. ಈ ವಿಶೇಷ ಘಟನೆಯ ವಿಡಿಯೋ ಮತ್ತು ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಪಪುವಾ ನ್ಯೂ ಜಿನಿಯಾ ಪ್ರವಾಸದ ಸಂದರ್ಭದಲ್ಲಿ ಪಪುವಾ ನ್ಯೂ ಜಿನಿಯಾದ ಪ್ರಧಾನಿಗಳಾದ ಶ್ರೀ ಜೇಮ್ಸ್ ಮರಾಪೆ ಅವರು ಗೌರವ ಸೂಚಕವಾಗಿ ಪ್ರಧಾನಿ ಶ್ರೀ @narendramodi ಅವರನ್ನು ನಮಸ್ಕರಿಸಿ ತಮ್ಮ ದೇಶಕ್ಕೆ ಸ್ವಾಗತಿಸಿದರು. pic.twitter.com/N9LTVcSVm6
— BJP Karnataka (@BJP4Karnataka) May 21, 2023
ಜೇಮ್ಸ್ ಮರಾಪೆ ಅವರು ತಮ್ಮ ಕಾಲಿಗೆ ಬೀಳುತ್ತಿದ್ದಂತೆ ತಡೆದ ಮೋದಿ ಈ ರೀತಿ ಮಾಡಬೇಡಿ ಎಂದು ಸೂಚಿಸಿದರಾದರೂ ಅವರು ಕಾಲು ಮುಟ್ಟಿ ನಮಸ್ಕರಿಸಿದ್ದಾರೆ. ಬಳಿಕ ಪ್ರಧಾನಿ ಮೋದಿ ಮರಾಪೆಯವರ ಬೆನ್ನು ತಟ್ಟಿ ಪರಸ್ಪರ ನಗು-ನಗುತ್ತಾ ಸ್ನೇಹಪರ ಅಪ್ಪುಗೆ ಮಾಡಿಕೊಂಡರು. ನಂತರ ಮರಾಪೆಯವರು ಮೋದಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಪರಿಚಯಿಸಿದರು.