Paracetamol During Pregnancy: ಗರ್ಭಾವಸ್ಥೆಯಲ್ಲಿ ಪ್ಯಾರೆಸಿಟಮಾಲ್ ಸೇವನೆ ಅಪಾಯಕಾರಿ

Sat, 29 May 2021-8:15 am,

ತಾಯಿಯಾಗುವುದು ವಿಶ್ವದ ಅತ್ಯಂತ ಸಂತೋಷದ ಭಾವನೆಗಳಲ್ಲಿ ಒಂದಾಗಿದೆ. ಗರ್ಭಾವಸ್ಥೆಯಲ್ಲಿ, ತಾಯಿ ಮತ್ತು ಮಗುವಿನ ಉತ್ತಮ ಆರೋಗ್ಯಕ್ಕಾಗಿ ಅನೇಕ ವಿಷಯಗಳನ್ನು ನೋಡಿಕೊಳ್ಳಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವೂ ತಪ್ಪದೇ ಈ ಸುದ್ದಿಯನ್ನು ಓದಿ.

ಗರ್ಭಾವಸ್ಥೆಯಲ್ಲಿ ಪ್ಯಾರೆಸಿಟಮಾಲ್ (Paracetamol) ಸೇವಿಸುವ ಮಹಿಳೆಯರ ಮಕ್ಕಳಲ್ಲಿ ಐಕ್ಯೂ ಕಡಿಮೆಯಾಗುವ ಅಪಾಯವಿದೆ ಎಂದು ಇತ್ತೀಚಿನ ಅಧ್ಯಯನವೊಂದು ವರದಿ ಮಾಡಿದೆ. ಇದು ಮಾತ್ರವಲ್ಲ, ಗರ್ಭಾವಸ್ಥೆಯಲ್ಲಿ ಪ್ಯಾರೆಸಿಟಮಾಲ್ ತೆಗೆದುಕೊಳ್ಳುವುದರಿಂದ ಮಗುವಿನಲ್ಲಿ ಆಟಿಸಂ (Autism) ಮತ್ತು ಎಡಿಎಚ್‌ಡಿ (ADHD) ಮುಂತಾದ ಕಾಯಿಲೆಗಳ ಅಪಾಯವೂ ಇದೆ ಎಂದು ಇದರಲ್ಲಿ ತಿಳಿಸಲಾಗಿದೆ.

ನಮ್ಮ ಸಂಶೋಧನೆಯು ಮೊದಲಿನಂತೆಯೇ ಅದೇ ಡೇಟಾವನ್ನು ನೀಡಿದೆ ಎಂದು ಬಾರ್ಸಿಲೋನಾ ಇನ್‌ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್‌ನ (ISGlobal) ಪ್ರಮುಖ ಸಂಶೋಧಕಿ ಸಿಲ್ವಿಯಾ ಎಲಿಮನಿ ಹೇಳಿದ್ದಾರೆ. ತಂಡವು ಸುಮಾರು 1 ಲಕ್ಷ 50 ಸಾವಿರ ತಾಯಂದಿರು ಮತ್ತು ಮಕ್ಕಳನ್ನು ಒಳಗೊಂಡ 9 ಅಧ್ಯಯನಗಳನ್ನು ನಡೆಸಿದೆ. ಅದರ ನಂತರ ಎಸ್ಟಾಮಿನೋಫಿನ್ ಎಂದೂ ಕರೆಯಲ್ಪಡುವ ಪ್ಯಾರೆಸಿಟಮಾಲ್ (Paracetamol) ತೆಗೆದುಕೊಳ್ಳುವುದರಿಂದ ಗರ್ಭಾಶಯದಲ್ಲಿನ ಹಾರ್ಮೋನುಗಳ ಸಮತೋಲನವನ್ನು ತೊಂದರೆಗೊಳಿಸುತ್ತದೆ ಎಂದು ಸಂಶೋಧಕರು ಪತ್ತೆಹಚ್ಚಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ- 7 Weight Loss Mistakes: ತೂಕ ಇಳಿಸಿಕೊಳ್ಳಬೇಕೇ! ಹಾಗಿದ್ದರೆ ಬೆಳಿಗ್ಗೆ ಹೊತ್ತು ಈ 7 ತಪ್ಪುಗಳನ್ನು ಎಂದಿಗೂ ಮಾಡಬೇಡಿ

ಒಂದು ಅಧ್ಯಯನದ ಪ್ರಕಾರ, ಗರ್ಭಾವಸ್ಥೆಯಲ್ಲಿ (Pregnancy) ಜ್ವರವಿಲ್ಲದೆ ಕೇವಲ ನೋವು ನಿವಾರಣೆಗಾಗಿ ಪ್ಯಾರಸಿಟಮಾಲ್ ಸೇವಿಸಿದ ತಾಯಂದಿರು ತಮ್ಮ 5 ವರ್ಷದ ಮಕ್ಕಳ ಐಕ್ಯೂನಲ್ಲಿ 3 ಪಾಯಿಂಟ್ ಇಳಿಕೆ ಕಂಡುಬಂದಿದೆ. ಅದೇ ಸಮಯದಲ್ಲಿ, ಎರಡನೇ ಅಧ್ಯಯನವು ಪ್ಯಾರಸಿಟಮಾಲ್ ಸೇವನೆ ಮತ್ತು ಮಕ್ಕಳ ತಡವಾಗಿ ಮಾತನಾಡುವ ನಡುವಿನ ಸಂಬಂಧವನ್ನು ಸಹ ಕಂಡುಹಿಡಿದಿದೆ ಎಂದು ತಿಳಿಸಿದೆ.

ಇದನ್ನೂ ಓದಿ- Mistakes After Eating Food:ಊಟವಾದ ಬಳಿಕ ಅಪ್ಪಿ-ತಪ್ಪಿಯೂ ಇವುಗಳನ್ನು ಮಾಡಲೇ ಬಾರದು

ಸಂಶೋಧಕರು ನಡೆಸಿರುವ ಸಂಶೋಧನೆಯನ್ನು ಜರ್ನಲ್ ಆಫ್ ಹಾರ್ಮೋನ್ಸ್ ಅಂಡ್ ಬಿಹೇವಿಯರ್ ನಲ್ಲಿ ಪ್ರಕಟಿಸಲಾಗಿದೆ, 'ಗರ್ಭಾವಸ್ಥೆಯಲ್ಲಿ ಪ್ಯಾರೆಸಿಟಮಾಲ್ ಅನ್ನು ದೀರ್ಘಕಾಲದವರೆಗೆ ಬಳಸುವುದರಿಂದ ಮಗುವಿಗೆ ರೋಗದ ಹೆಚ್ಚಿನ ಅಪಾಯವಿದೆ ಎಂದು ಇದು ತಿಳಿಸಿದೆ. ಇದಲ್ಲದೆ ಗರ್ಭಾವಸ್ಥೆಯಲ್ಲಿ ಸಿಗರೇಟು ಸೇದುವುದು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದೂ ಕೂಡ ತಿಳಿಸಲಾಗಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link