ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಅರೆಸ್ಟ್: ತಾಯಿ ಪರಿಸ್ಥಿತಿ ಬಗ್ಗೆ ಫಸ್ಟ್ ರಿಯಾಕ್ಷನ್ ಕೊಟ್ಟ ಪುತ್ರಿ ಖುಷಿ ಗೌಡ
ಸದ್ಯ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ ಸುಮಾರು 18 ಮಂದಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಕಳೆದ ಕೆಲ ದಿನಗಳ ಹಿಂದಷ್ಟೇ ತಾಯಿ ಪವಿತ್ರಾ ಗೌಡನನ್ನು ನೋಡಲೆಂದು ಪುತ್ರಿ ಖುಷಿ ಗೌಡ ತಮ್ಮ ಅಜ್ಜಿ ಜೊತೆ ಠಾಣೆಗೆ ಬಂದಿದ್ದರು. ಅಲ್ಲಿಂದ ತಾಯಿ ಪರಿಸ್ಥಿತಿ ಕಂಡು ಕಣ್ಣೀರಿಡುತ್ತಾ ಹೊರನಡೆದಿದ್ದಾರೆ.
ಇದರ ಬೆನ್ನಲ್ಲೇ ಕಳೆದ ದಿನ ಫಾದರ್ಸ್ ಡೇ ಹಿನ್ನೆಲೆಯಲ್ಲಿ ಖುಷಿ ಗೌಡ ಇನ್’ಸ್ಟಾಗ್ರಾಂ ಸ್ಟೋರಿ ಹಾಕುವ ಮೂಲಕ ಶುಭಾಶಯ ತಿಳಿಸಿದ್ದರು.
”ನನಗೆ ಎಲ್ಲಾ ಆಗಿರುವ ಅಮ್ಮನಿಗೆ ಅಪ್ಪಂದಿರ ದಿನದ ಶುಭಾಶಯಗಳು” ಎಂದು ವಿಶ್ ಮಾಡಿದ್ದರು.
ಇದೀಗ ಮತ್ತೊಂದು ಪೋಸ್ಟ್ ಶೇರ್ ಮಾಡಿರುವ ಖುಷಿ ಗೌಡ, “ಈಗ ಪ್ರವಾಹವವೇ ಬರುತ್ತಿರಬಹುದು, ಆದರೆ ಮುಂದೊಂದು ದಿನ ಪರಿಸ್ಥಿತಿ ಸರಿಹೊಂದಲಿದೆ, ಧೈರ್ಯವಾಗಿರು.. ಏಕೆಂದರೆ ಶಾಶ್ವತವಾಗಿ ಮಳೆ ಬೀಳುತ್ತಿರಲು ಸಾಧ್ಯವೇ ಇಲ್ಲ” ಎಂದು ಬರೆದುಕೊಂಡಿದ್ದಾರೆ.
ಸದ್ಯ ನಟಿ ಪವಿತ್ರಾ ಗೌಡ, ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. 9 ದಿನಗಳ ವಿಚಾರಣೆ ನಡೆಯಲಿದೆ. ಆ ಬಳಿಕ ಎಲ್ಲಾ ಆರೋಪಿಗಳನ್ನೂ ಕೋರ್ಟ್’ಗೆ ಹಾಜರುಪಡಿಸಲಾಗುತ್ತದೆ. ಒಂದು ವೇಳೆ ಆರೋಪ ಸಾಬೀತಾದರೆ ಕಾನೂನಿನ ಪ್ರಕಾರ ಮುಂದಿನ ಶಿಕ್ಷೆ ವಿಧಿಸಲಾಗುತ್ತದೆ.