ಪವನ್ ಕಲ್ಯಾಣ್ ಆಸ್ತಿ ಎಷ್ಟಿದೆ ಗೊತ್ತೆ..? ಜಸ್ಟ್‌ ಅವರ ಮನೆ ಮಾರಿದರೆ ಒಂದು ತಲೆಮಾರು ಕುಳಿತು ತಿನ್ನಬಹುದು..!

Mon, 02 Sep 2024-5:51 pm,

ಇಂದು ಪವರ್ ಸ್ಟಾರ್ ಪವನ್ ಕಲ್ಯಾಣ್ ಹುಟ್ಟುಹಬ್ಬ. ಇತ್ತೀಚೆಗಷ್ಟೇ ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಪವರ್‌ ಸ್ಟಾರ್‌ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರರಂಗದ ರಾಜಕಾರಣಿಗಳು, ಕಲಾವಿದರು, ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ.. ಅಲ್ಲದೆ ಅನೇಕ ನೆಟ್ಟಿಗರು ಅವರ ಜೀವನ, ಆಸ್ತಿ, ಸಿನಿಮಾ ಜೀವನ ಸೇರಿದಂತೆ ಆಸಕ್ತಿಕರ ವಿಷಯಗಳನ್ನು ಹುಡುಕುತ್ತಿದ್ದಾರೆ..  

ಸಿನಿಮಾ ಪ್ರೇಮಿಗಳು ಮತ್ತು ರಾಜಕೀಯ ಗಣ್ಯರು ಪವನ್ ಕಲ್ಯಾಣ್‌ಗೆ ಶುಭಾಶಯ ಕೋರಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅಪರೂಪದ ಫೋಟೋವನ್ನು ಹಂಚಿಕೊಂಡಿದ್ದಾರೆ.    

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಪವನ್ ಅವರಿಗೆ ಬರ್ತ್‌ ಡೇ ವಿಶ್ ಮಾಡಿದ್ದಾರೆ. ಟಾಲಿವುಡ್‌ನ ಶ್ರೀಮಂತ ನಟರಲ್ಲಿ ಪವನ್ ಕೂಡ ಒಬ್ಬರು. ರಾಜಕೀಯದ ಹೊರತಾಗಿ ಸಿನಿಮಾ ಕೆಲಸಗಳಲ್ಲೂ ಪವನ್ ತೊಡಗಿಸಿಕೊಂಡಿದ್ದಾರೆ.  

ಪವನ್ ಕಲ್ಯಾಣ್ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಈಗ ಪವನ್ ರಾಜಕೀಯದಲ್ಲೂ ಯಶಸ್ವಿಯಾಗಿದ್ದಾರೆ. ಪೀಠಪುರಂ ಕ್ಷೇತ್ರದಿಂದ ಶಾಸಕರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆಂಧ್ರದ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ ಪವನ್‌ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ?  

ಪವನ್ ಕಲ್ಯಾಣ್ ಅವರ ಒಟ್ಟು ಆಸ್ತಿ 164 ಕೋಟಿ ಎನ್ನಲಾಗಿದೆ. ಪವನ್ ಕಲ್ಯಾಣ್ ಟಾಲಿವುಡ್ ನ ಶ್ರೀಮಂತ ನಟರಲ್ಲಿ ಒಬ್ಬರು. ತೆಲುಗು ರಾಜ್ಯಗಳಲ್ಲಿ ಪವನ್‌ಗೆ ಐಷಾರಾಮಿ ಮನೆಗಳಿವೆ. ಪವನ್ ಕಲ್ಯಾಣ್ ವಿಜಯವಾಡ ಮನೆ ಬೆಲೆ ರೂ. 16 ಕೋಟಿ.. ಹಾಗೆಯೇ ಹೈದರಾಬಾದ್ ನ ಜುಬಿಲಿಹಿಲ್ಸ್ ಮನೆಯ ಮೌಲ್ಯ 12 ಕೋಟಿ ರೂ. ಬಂಜಾರಹಿಲ್ಸ್‌ನ ಫ್ಲ್ಯಾಟ್‌ನ ಬೆಲೆ 1.75 ಕೋಟಿ ರೂಪಾಯಿಯಂತೆ.  

ಪವನ್ ಕಲ್ಯಾಣ್ ಅವರ ಬ್ಯಾಂಕ್ ಬ್ಯಾಲೆನ್ಸ್ 20 ಕೋಟಿ ರೂಪಾಯಿಗೂ ಹೆಚ್ಚು ಎನ್ನಲಾಗಿದೆ. ಒಬ್ಬ ನಟ ತನ್ನ ಆದಾಯವನ್ನು ಹಲವು ಮೂಲಗಳಿಂದ ಪಡೆಯುತ್ತಾನೆ. ಪವನ್ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಕೋಟ್ಯಂತರ ರೂಪಾಯಿ ಒಡೆಯ ಪವನ್ ಕಲ್ಯಾಣ್ ಸರಳ ಜೀವನ ನಡೆಸುತ್ತಾರೆ..  

ಇದಲ್ಲದೇ ಪವನ್ ಕಲ್ಯಾಣ್ ಬಳಿ ದುಬಾರಿ ಕಾರುಗಳ ಸಂಗ್ರಹವೂ ಇದೆ. ಜಾಗ್ವಾರ್, ಆಡಿ, ಮರ್ಸಿಡಿಸ್ ಬೆಂಜ್ ನಂತಹ ಕಾರುಗಳನ್ನು ಹೊಂದಿದ್ದಾರೆ. ಅಲ್ಲದೆ 14 ಕೋಟಿ ರೂಪಾಯಿಗೂ ಹೆಚ್ಚು ಬೆಲೆಯ ಕಾರುಗಳಿವೆ. 2019 ರಲ್ಲಿ ಪವನ್ ಕಲ್ಯಾಣ್ ಅವರ ಆಸ್ತಿ ಕೇವಲ ರೂ. 52 ಕೋಟಿ ರೂ. ಇದು ಕೇವಲ ಐದು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಆದರೆ ಪ್ರಸ್ತುತ ಪವನ್ ಕಲ್ಯಾಣ್ ಅವರ ಆಸ್ತಿ ಮೌಲ್ಯ ರೂ. 164 ಕೋಟಿ.  

ನಟ ಪವನ್ ಕಲ್ಯಾಣ್ ಪ್ರತಿ ತಿಂಗಳು ಸುಮಾರು 1.5 ಕೋಟಿ ರೂಪಾಯಿ ಗಳಿಸುತ್ತಿದ್ದಾರಂತೆ. ಅಂದರೆ ವರ್ಷಕ್ಕೆ 18 ಕೋಟಿ ರೂಪಾಯಿ ಆದಾಯ ಪಡೆಯುತ್ತಿದ್ದಾರೆ. ಪ್ರತಿ ಚಿತ್ರಕ್ಕೆ 50-60 ಕೋಟಿ ತೆಗೆದುಕೊಳ್ಳುತ್ತಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಪವನ್ ಕಲ್ಯಾಣ್ ಕೈಯಲ್ಲಿ ಹೊಸ ಚಿತ್ರಗಳಿವೆ.  

ರಾಜಕೀಯದಲ್ಲಿ ಬ್ಯುಸಿಯಾಗಿರುವ ಪವನ್ ಕಲ್ಯಾಣ್ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಲಿದ್ದಾರೆ ಎಂಬ ವರದಿಗಳಿವೆ. ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪವರ್‌ ಸ್ಟಾರ್‌ ಹೊಸ ಸಿನಿಮಾದ ಅಪ್ ಡೇಟ್ಸ್ ಯಾವಾಗ ಬರುತ್ತೋ ಕಾದು ನೋಡಬೇಕಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link