Digital Payment : ಇನ್ನು ಇಂಟರ್ ನೆಟ್ ಇಲ್ಲದೆಯೂ ನಡೆಯುತ್ತದೆ ಡಿಜಿಟಲ್ ಪೇಮೆಂಟ್

Thu, 07 Jan 2021-5:30 pm,

ಮೂಲಗಳ ಪ್ರಕಾರ, 2020ರ ನವೆಂಬರ್ ತಿಂಗಳಲ್ಲಿಯೇ ಟೆಸ್ಟಿಂಗ್  ಕಾರ್ಯಗಳು ಆರಂಭವಾಗಿವೆ. ಜೈಪುರದಲ್ಲಿರುವ ನ್ಯಾಚುರಲ್ ಸರ್ಪೋರ್ಟ್ ಕನಸೆಲ್ಟಿಂಗ್ ಸರ್ವಿಸಸ್  eRupaya ಅನ್ನೋ ಪ್ರಾಡಕ್ಟ್ ನ ಪರೀಕ್ಷೆಯನ್ನು ಕಳೆದ ನವೆಂಬರ್ ತಿಂಗಳಲ್ಲಿಯೇ ಆರಂಭಿಸಿದೆ. ಇದು  ನಿಯರ್ ಫಿಲ್ಡ್ ಕಮ್ಯನಿಕೆಶನ್  (NFC)ಆಧಾರಿತ ಪ್ರೀಪೇಯ್ಡ್ ಕಾರ್ಡ್ ಮತ್ತು ಪಾಯಿಂಟ್ ಆಫ್ ಸೇಲ್ (POS) ಅನ್ನು ಬಳಸುತ್ತದೆ. ಕಂಪನಿಯು ಇದಕ್ಕಾಗಿ ಪಂಜಾಬ್  ನ್ಯಾಷನಲ್ ಬ್ಯಾಂಕ್  (PNB) ಜೊತೆ ಒಪ್ಪಂದವನ್ನೂ ಮಾಡಿಕೊಂಡಿದೆ. NFC ಯ ಮೂಲಕ ಇಂಟರ್ ನೆಟ್ ಇಲ್ಲದೆಯೇ  ಹಣ ಪಾವತಿಸಬಹುದು.  

 ದೆಹಲಿಯಲ್ಲಿರುವ ನ್ಯುಕ್ಲಿಯಸ್ ಸಾಫ್ಟ್ ವೆರ್ ಎಕ್ಸ್ ಪೋರ್ಟ್ ಲಿಮಿಟೆಡ್ ತನ್ನ ಉತ್ಪನ್ನವಾದ  PaySe ಯ ಪರೀಕ್ಷೆ ಕೂಡಾ ಆರಂಭಿಸಿದೆ. ಇದೊಂದು ಆನ್ ಲೈನ್ ಮತ್ತು ಆಫ್ ಲೈನ್ ಕಾರ್ಡ್  ಆಗಿರುತ್ತದೆ. ಈ ಕಾರ್ಡ್ ನಲ್ಲಿಯೂ NFCಯನ್ನು ಬಳಸಲಾಗಿದೆ.  ಇದೊಂದು ಡಿಜಿಟಲ್ ಮೊಬೈಲ್  ವಾಲೆಟ್  ತರಹ ಕಾರ್ಯ ನಿರ್ವಹಿಸುತ್ತದೆ.   

ಇದಲ್ಲದೆ, ಇನ್ನೂ 4 ಕಂಪನಿಗಳು ಕಳೆದ ಡಿಸೆಂಬರ್ ತಿಂಗಳಲ್ಲಿ ಟೆಸ್ಟಿಂಗ್ ಕಾರ್ಯ ಆರಂಭಿಸಿದೆ. ಮುಂಬಯಿಯ ಟೈಪ್ ಸ್ಮಾರ್ಟ್ ಡೆಟಾ ಹೆಸರಿನ ಕಂಪನಿಯು, CityCash ಅನ್ನು ತರಲು ಸಿದ್ದತೆ ನಡೆಸಿದೆ.  ಇದೊಂದು ಪ್ರೀಪೇಯ್ಡ್ ಕಾರ್ಡ್ ಆಗಿದ್ದು, NFC ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುತ್ತದೆ. ಇದು ಆಫ್ ಲೈನ್ ಸೇವೆಯನ್ನು ಒದಗಿಸುತ್ತದೆ. ಈ ಕಾರ್ಡನ್ನು ಪ್ರಯಾಣಿಕರು ಬಸ್ ಪಾಸ್ ನಂತೆಯೂ ಉಪಯೋಗಿಸಬಹುದು. ಇನ್ನು ವ್ಯಾಪಾರ ವ್ಯವಹಾರಗಳಲ್ಲಿ ವಾಲೆಟ್ ತರಹ ಕೂಡಾ  ಬಳಸಬಹುದು. ಈ ಕಂಪನಿಗೆ ಧನ ಸಹಾಯ ನೀಡುವ ಕಂಪನಿಗಳಲ್ಲಿ Fino Paytech ಕೂಡಾ ಒಂದು. 

ಬೆಂಗಳೂರು ಮೂಲದ  Naffa Innovations ಧ್ವನಿ ತರಂಗಗಳ ಮೂಲಕ ಹಣಪಾವತಿ ಪ್ರಕ್ರಿಯೆ ನಡೆಸುವಂಥಹ ಉತ್ಪನ್ನವನ್ನು ಸಿದ್ದಪಡಿಸುತ್ತಿದೆ. ಇದರ ಹೆಸರು ToneTag. ಇದನ್ನು ಯಾವುದೇ ಫೊನ್ ಅಥವಾ ಡಿವೈಸ್ ಮೂಲಕ ಬಳಸಬಹುದಾಗಿದೆ. ToneTag UPI ಮೂಲಕ ಆಫ್ ಲೈನ್  ಸೇವೆ ಒದಗಿಸುವ ಬಗ್ಗೆ ಟೆಸ್ಟಿಂಗ್  ನಡೆಸುತ್ತಿದೆ. ಇದು ಕೂಡಾ NFC ಮೂಲಕವೇ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ  ಸೃಷ್ಟಿಯಾಗುವ ಧ್ವನಿತರಂಗಗಳನ್ನು ವ್ಯಾಪಾರಿಗಳಲ್ಲಿರುವ  ಡಿವೈಸ್ ರಿಸೀವ್ ಮಾಡಿಕೊಳ್ಳುತ್ತದೆ. ಇದರೊಂದಿಗೆ ಡೆಟಾ ಟ್ರಾನ್ಫರ್ ಆಗುತ್ತದೆ. 

ಬೆಂಗಳೂರಿನ ಮತ್ತೊಂದು ಕಂಪನಿ Ubona Technologies ಕೂಡಾ ಧ್ವನಿ ತರಂಗಗಳನ್ನು ಸೃಷ್ಟಿಸಿ ಹಣಪಾವತಿ ಪ್ರಕ್ರಿಯೆ ಪೂರ್ಣಗೊಳಿಸುವ ಉತ್ಪನ್ನ ಸಿದ್ದಪಡಿಸುವ ಕೆಲಸ ಮಾಡುತ್ತಿದೆ. ಇದು ಗ್ರಾಹಕರ ಧ್ವನಿ ಪರೀಕ್ಷೆ ಮತ್ತು ಅದನ್ನು ಗುರುತಿಸುವ ಪ್ರಕ್ರಿಯೆ ಪೂರ್ಣಗೊಂಡ ನಂತರ ಹಣ ಪಾವತಿಸುವ ಸೇವೆಯನ್ನು ನೀಡುತ್ತದೆ. ಈ ಕಂಪನಿ ವಾಯ್ಸ್  ಬೇಸ್ಡ್ UPI ಸೊಲ್ಯುಶನ್ನ ಪರೀಕ್ಷೆ ನಡೆಸುತ್ತಿದೆ.   

RBI ಆಯ್ಕೆ ಮಾಡಿದ ಕಂಪನಿಗಳಲ್ಲಿ ನೋಯ್ಡಾದ Eroute Technologies  ಕೂಡಾ ಇದೆ. ಇದರಲ್ಲಿ ಸ್ಮಾರ್ಟ್‌ಕಾರ್ಡ್‌ನಲ್ಲಿ ಸಿಮ್ ಮೂಲಕ ಹಣ ಪಾವತಿ ಕಾರ್ಯ ನಡೆಯುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link