Astrology: ತಮ್ಮನ್ನು ಸರಿ ಎಂದು ಸಾಬೀತುಪಡಿಸಲು ಹೆಚ್ಚು ವಾದಿಸುತ್ತಾರೆ ಈ 4 ರಾಶಿಯ ಜನ
ಈ 4 ರಾಶಿಚಕ್ರದ ಜನರು ಯಾವಾಗಲೂ ತಮ್ಮನ್ನು ತಾವು ಇತರರಿಗಿಂತ ಉತ್ತಮವೆಂದು ಪರಿಗಣಿಸುತ್ತಾರೆ. ಆದ್ದರಿಂದಲೇ ಅವರು ತಮ್ಮ ತಪ್ಪನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಬದಲಾಗಿ, ಅವರು ತಮ್ಮನ್ನು ತಾವು ಸಾಬೀತುಪಡಿಸಲು ಅನೇಕ ವಾದಗಳನ್ನು ನೀಡುತ್ತಾರೆ. ಯಾವ ರಾಶಿಯವರಿಗೆ ಈ ಅಭ್ಯಾಸವಿದೆ ಎಂದು ತಿಳಿಯೋಣ.
ವೃಷಭ ರಾಶಿಯವರು (Taurus) ತುಂಬಾ ಪ್ರಾಮಾಣಿಕರು, ಶ್ರಮಜೀವಿಗಳು ಮತ್ತು ಆವರು ತುಂಬಾ ವಿಷಯಗಳಲ್ಲಿ ಬಹಳ ನಿರ್ದಿಷ್ಟವಾಗಿರುತ್ತಾರೆ. ಅವರು ಎಲ್ಲವನ್ನೂ ಚೆನ್ನಾಗಿ ಮಾಡುತ್ತಾರೆ ಮತ್ತು ಅವರಿಗೆ ತಮ್ಮ ಕೆಲಸದ ಬಗ್ಗೆ ಇತರರಿಗಿಂತ ಹೆಚ್ಚು ಹೆಮ್ಮೆಯ ಭಾವನೆ ಇರುತ್ತದೆ. ಈ ಕಾರಣಕ್ಕಾಗಿ, ಅವರು ತಮ್ಮನ್ನು ತಾವು ಉತ್ತಮರೆಂದು ಪರಿಗಣಿಸುತ್ತಾರೆ ಮತ್ತು ಯಾವುದೇ ವ್ಯಕ್ತಿಯು ಅವರ ಅಭಿಪ್ರಾಯವನ್ನು ವಿರೋಧಿಸಿದಾಗ, ಅವರು ವಾದಿಸಲು ಪ್ರಾರಂಭಿಸುತ್ತಾರೆ. ಈ ಜನರು ತುಂಬಾ ಬುದ್ಧಿವಂತರಾಗಿರುವುದರಿಂದ ಅವರನ್ನು ವಾದಗಳಿಂದ ಸೋಲಿಸುವುದು ತುಂಬಾ ಕಷ್ಟ. ಅದಾಗ್ಯೂ, ಇವರು ತಮ್ಮ ತಪ್ಪಿನ ಅರಿವಾದಾಗ ಕ್ಷಮೆಯಾಚಿಸಲು ಕೂಡ ಹಿಂಜರಿಯುವುದಿಲ್ಲ.
ಸಿಂಹ ರಾಶಿಯ (Leo) ಜನರು ಯಾವಾಗಲೂ ತಾವು ಯಾವುದೇ ತಪ್ಪು ಮಾಡಲಾರರು ಎಂದು ಭಾವಿಸುತ್ತಾರೆ. ಈ ಕಾರಣದಿಂದಾಗಿ, ಅವರು ತಮ್ಮ ತಪ್ಪಿನ ಬಗ್ಗೆ ಅರಿತುಕೊಳ್ಳುವುದು ಬಹಳ ಅಪರೂಪ ಎಂದೇ ಹೇಳಬಹುದು. ಈ ಜನರು ಕೊನೆಯವರೆಗೂ ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ.
ಇದನ್ನೂ ಓದಿ- Astrology: ಈ 5 ರಾಶಿಯವರಿಗೆ ಅಕ್ಟೋಬರ್ ತಿಂಗಳಲ್ಲಿ ಅದೃಷ್ಟ, ಸಿಗಲಿದೆ ಶನಿ ದೇವರ ಆಶೀರ್ವಾದ
ವೃಶ್ಚಿಕ ರಾಶಿಯವರು ತಮ್ಮನ್ನು ತಾವು ಉತ್ತಮರೆಂದು ಪರಿಗಣಿಸುವುದಲ್ಲದೆ ಎದುರಿನವರು ಅವರನ್ನು ತಪ್ಪು ಎಂದು ಸಾಬೀತುಪಡಿಸಲು ಸಾಧ್ಯವಾಗದ ರೀತಿಯಲ್ಲಿ ವರ್ತಿಸುತ್ತಾರೆ. ಹಾಗಾಗಿ ಕ್ಷಮೆ ಕೇಳುವ ಪ್ರಶ್ನೆ ಉದ್ಭವಿಸುವುದಿಲ್ಲ. ಈ ಜನರು ಪ್ರತಿಯೊಂದು ಸನ್ನಿವೇಶದಲ್ಲೂ ತಮ್ಮನ್ನು ತಾವು ಸಾಬೀತುಪಡಿಸುತ್ತಾರೆ.
ಕುಂಭ ರಾಶಿ ಜನರು ಅಹಂಕಾರದಿಂದಾಗಿ ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಈ ಜನರಿಗೆ ತಪ್ಪು ಎಂದು ಹೇಳುವುದು ನಿಷ್ಪ್ರಯೋಜಕ ಎಂದೇ ಹೇಳಬಹುದು. ಅವರಿಗೆ ಪರೋಕ್ಷವಾಗಿ ಸುಳಿವು ನೀಡಿದರೆ, ಅವರು ತಮ್ಮ ತಪ್ಪನ್ನು ತಿಳಿದುಕೊಂಡು ಅದನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಎಲ್ಲರ ಮುಂದೆ ಅವುಗಳನ್ನು ತಪ್ಪು ಎಂದು ಸಾಬೀತುಪಡಿಸುವುದು ತುಂಬಾ ಭಾರವಾಗಿರುತ್ತದೆ.
(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)