Benefits of Black Pepper: ಶೀತ ಜ್ವರ ಸೇರಿದಂತೆ ಅನೇಕ ರೋಗಗಳಿಗೆ ರಾಮಬಾಣ ಕಾಳು ಮೆಣಸು
ಕರಿಮೆಣಸು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಕಷಾಯ ಮಾಡುವಾಗ ಅದಕ್ಕೆ ಕರಿಮೆಣಸು ಸೇರಿಸಿದರೆ ರೊಗ ನಿರೋಧಕ ಶಕ್ತಿ ಹೆಚ್ಚಿಸಲು ಇನ್ನಷ್ಟು ಸಹಾಯವಾಗಲಿದೆ. ಇನ್ನು ಕರಿಮೆನಸನ್ನು ನಿರಿನಲ್ಲಿ ಬೆರೆಸಿ ಕುದಿಸಿ ಕುಡಿಯುವುದರಿಂದಲೂ ಲಾಭವಾಗಲಿದೆ.
ಕೆಮ್ಮು ಮತ್ತು ಶೀತದಂತಹ ಸಮಸ್ಯೆ ಬಾಧಿಸಿದಾಗಲೂ ಕರಿಮೆಣಸು ಸಹಾಯಕ್ಕೆ ಬರುತ್ತದೆ. ಕರಿಮೆಣಸಿನ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸುವುದರಿಂದ ಶೀತ, ಕೆಮ್ಮಿನಿಂದ ಪರಿಹಾರ ಸಿಗುತ್ತದೆ.
ಅಧ್ಯಯನದ ಪ್ರಕಾರ, ಕರಿಮೆಣಸು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಪೈಪರೀನ್ ಎಂಬ ರಾಸಾಯನಿಕವಿದೆ. ಅರಿಶಿನದೊಂದಿಗೆ ನಿಯಮಿತ ಸೇವನೆ ಮಾಡಿದರೆ ಕ್ಯಾನ್ಸರ್ ಅನ್ನು ತಡೆಯುತ್ತದೆ. ಕರಿಮೆಣಸು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ರೋಗವನ್ನು ಸಹ ತಡೆಯುತ್ತದೆ.
ನಿಮ್ಮ ಮನೆಯಲ್ಲಿ ಬೇಯಿಸಿದ ಆಹಾರದಲ್ಲಿ ನೀವು ಕರಿಮೆಣಸನ್ನು ನಿಯಮಿತವಾಗಿ ಸೇವಿಸಿದರೆ, ಅದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದರಿಂದಾಗಿ ಮಧುಮೇಹದ ಅಪಾಯವೂ ಕಡಿಮೆಯಾಗುತ್ತದೆ.
ಆಯುರ್ವೇದದ ಪ್ರಕಾರ, ಕರಿಮೆಣಸಿನಿಂದ ತಯಾರಿಸಿದ ಆಹಾರವು, ನಮ್ಮ ದೇಹದಲ್ಲಿನ ಹೆಪ್ಪುಗಟ್ಟಿದ ಕೊಬ್ಬನ್ನು ಕಡಿಮೆ ಮಾಡುತ್ತದೆ. ಈ ಕಾರಣದಿಂದಾಗಿ ನಮ್ಮ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ. ಅಲ್ಪಾವಧಿಯಲ್ಲಿಯೇ ಸಾಕಷ್ಟು ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ. ಇದರಿಂದಾಗಿ ದೇಹದ ತೂಕವು ನಿಯಂತ್ರಣದಲ್ಲಿರುತ್ತದೆ.