ಈ ಎಲೆಯನ್ನು ಮೂಸಿದರೆ ಸಾಕು... ವಾರ ಕಳೆದರೂ ಕಡಿಮೆಯಾಗದ ಶೀತ, ನೆಗಡಿ, ಕೆಮ್ಮು ಒಂದೇ ನಿಮಿಷದಲ್ಲಿ ಗುಣವಾಗುತ್ತದೆ! ಟ್ರೈ ಮಾಡಿ ನೋಡಿ

Sat, 21 Sep 2024-2:11 pm,

ಪುದೀನಾ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಎಲೆ, ಇದು ತಂಪು ಮತ್ತು ತಾಜಾತನವನ್ನು ನೀಡುವ ನೈಸರ್ಗಿಕ ಗುಣಗಳನ್ನು ಹೊಂದಿದೆ. ಆದರೆ ಮಳೆಗಾಲ ಮತ್ತು ಚಳಿಗಾಲದಲ್ಲಿ ಪುದೀನವನ್ನು ಬಳಸಿದರೆ ಹಲವಾರು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.

 

ಒಂದಲ್ಲ, ಎರಡಲ್ಲ ಸುಮಾರು 9 ಆರೋಗ್ಯ ಸಮಸ್ಯೆಗಳಿಂದ ಪುದೀನಾ ಪರಿಹಾರ ನೀಡುತ್ತದೆ. ಸಾಮಾನ್ಯವಾಗಿ ಮಳೆಗಾಲ ಮತ್ತು ಚಳಿಗಾಲದಲ್ಲಿ ಶೀತ, ಕೆಮ್ಮು ನೆಗಡಿಯಂತಹ ಸಮಸ್ಯೆಗಳು ಉಲ್ಬಣವಾಗುವುದು ಸಹಜ. ಹೀಗಿರುವಾಗ ಪುದೀನಾದ ಪರಿಮಳ ಈ ಎಲ್ಲಾ ಸಮಸ್ಯೆಗಳಿಗೆ ಚಿಟಿಕೆಯಲ್ಲಿ ಪರಿಹಾರ ನೀಡುತ್ತದೆ.

 

ಇದಷ್ಟೇ ಅಲ್ಲದೆ, ಗಂಟಲಿನಲ್ಲಿ ಊತ ಮತ್ತು ನೋವಿನ ಸಮಸ್ಯೆ ಇದ್ದರೆ, ಶೀತದಿಂದ ಜ್ವರವಿದ್ದರೆ, ಮುಖ, ಭುಜಗಳು ಮತ್ತು ಬೆನ್ನಿನ ಮೇಲೆ ಮೊಡವೆಗಳಾಗಿದ್ದರೂ ಸಹ ಪುದೀನಾವನ್ನು ಬಳಕೆ ಮಾಡುವುದರಿಂದ ಪರಿಹಾರ ಪಡೆಯಬಹುದು.

 

ಇನ್ನು ಶೀತ ಮತ್ತು ಶೀತ ಗಾಳಿಯಿಂದ ಉಂಟಾಗುವ ತಲೆನೋವಿನಿಂದ ಪರಿಹಾರ ಪಡೆಯಲು ಸಹ ಪುದೀನಾ ವರದಾನವಿದ್ದಂತೆ. ಇದಷ್ಟೇ ಅಲ್ಲದೆ, ಅಲರ್ಜಿ ತಡೆಗಟ್ಟುವಿಕೆ, ಬಾಯಿ ದುರ್ವಾಸನೆ ತಡೆಯಲು, ಹಲ್ಲುಗಳ ಆರೋಗ್ಯ ಕಾಪಾಡಲು ಮತ್ತು ತೂಕ ಇಳಿಕೆಗೆ ಕೂಡ ಪುದೀನಾ ಸಹಾಯಕ,

 

ಸಾಮಾನ್ಯವಾಗಿ ಪುದೀನಾ ಟೀ ಮಾಡಿ ಕುಡಿಯಬಹುದು. ಆದರೆ ಇವೆಲ್ಲದಕ್ಕಿಂತ ಸುಲಭ ಪರಿಹಾರವೆಂದರೆ ಅದರ ಪರಿಮಳವನ್ನು ಶಾಖದ ರೂಪದಲ್ಲಿ ತೆಗೆದುಕೊಳ್ಳುವುದು.

 

ಬಿಸಿನೀರಿಗೆ ಒಂದು ಹಿಡಿ ಪುದೀನಾ ಸೇರಿಸಿ, ನಂತರ ಅದರ ಶಾಖ ತೆಗೆದುಕೊಂಡರೆ ಶೀತ ಒಂದೇ ಬಾರಿಗೆ ಶಮನವಾಗುತ್ತದೆ. ಅಷ್ಟೇ ಅಲ್ಲದೆ ಮೂಗು ಕಟ್ಟಿದ ಅನುಭವವಾಗಿದ್ದರೆ ರಿಲೀಫ್‌ ಸಿಗುತ್ತದೆ.

 

ಸೂಚನೆ: ಈ ಲೇಖನದಲ್ಲಿ ಉಲ್ಲೇಖಿಸಲಾದ ವಿಧಾನಗಳನ್ನು ಸಲಹೆಗಳಾಗಿ ಮಾತ್ರ ತೆಗೆದುಕೊಳ್ಳಿ, ಜೀ ಕನ್ನಡ ನ್ಯೂಸ್ ಅವುಗಳನ್ನು ದೃಢೀಕರಿಸುವುದಿಲ್ಲ. ಅಂತಹ ಯಾವುದೇ ಚಿಕಿತ್ಸೆ/ಔಷಧಿ/ಆಹಾರ ಮತ್ತು ಸಲಹೆಯನ್ನು ಅಳವಡಿಸುವ ಮೊದಲು, ದಯವಿಟ್ಟು ವೈದ್ಯರನ್ನು ಅಥವಾ ಸಂಬಂಧಿತ ತಜ್ಞರನ್ನು ಸಂಪರ್ಕಿಸಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link