ನಿರಂತರ ಸೋಲಿನ ಬಳಿಕ ಗೆಲುವಿನ ನಾಗಾಲೋಟ!ಪಾತಾಳಕ್ಕೆ ಬಿದಿದ್ದ ಅನಿಲ್ ಅಂಬಾನಿ ಸಾಮ್ಯ್ರಾಜ್ಯವನ್ನು ಎತ್ತಿ ನಿಲ್ಲಿಸುತ್ತಿರುವ ಮಾಸ್ಟರ್ ಮೈಂಡ್ ಈ ವ್ಯಕ್ತಿ
ಅನಿಲ್ ಅಂಬಾನಿ ಕಷ್ಟದ ದಿನಗಳು ಕಳೆಯುತ್ತಿವೆ.ಅಂಬಾನಿ ಕಂಪನಿಗಳ ಷೇರುಗಳು 6 ವರ್ಷಗಳ ನಂತರ ಪುನರಾಗಮನ ಮಾಡುತ್ತಿವೆ.ಒಂದೆಡೆ ಕಂಪನಿಗಳ ಮೇಲಿನ ಸಾಲದ ಹೊರೆ ಕಡಿಮೆಯಾಗುತ್ತಿದ್ದರೆ,ಇನ್ನೊಂದೆಡೆ ಹೊಸ ಆರ್ಡರ್‌ಗಳೂ ಬರುತ್ತಿವೆ.ಹೊಸ ಅಂಗಸಂಸ್ಥೆ ಕಂಪನಿಗಳನ್ನು ಪ್ರಾರಂಭಿಸಲಾಗುತ್ತಿದೆ.
ಅನಿಲ್ ಅಂಬಾನಿ ಅವರ ಎರಡು ಕಂಪನಿಗಳು ಅದ್ಭುತಗಳನ್ನೇ ಮಾಡುತ್ತಿವೆ.ರಿಲಯನ್ಸ್ ಪವರ್ ಮತ್ತು ರಿಲಯನ್ಸ್ ಇನ್ಫ್ರಾ ಷೇರುಗಳು ನಿರಂತರ ಉನ್ನತಿಯತ್ತ ದಾಪುಗಾಲು ಇಡುತ್ತಿವೆ.ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ರಿಲಯನ್ಸ್ ಪವರ್ ಷೇರುಗಳು ಶೇ.60ರಷ್ಟು ಏರಿಕೆ ಕಂಡಿವೆ.
ರಿಲಯನ್ಸ್ ಇನ್ಫ್ರಾ ಕಂಪನಿ ಸಾಲವು 80 ಪ್ರತಿಶತದಷ್ಟು ಕಡಿಮೆಯಾಗಿದೆ. 3831 ಕೋಟಿ ಯಷ್ಟಿದ್ದ ಸಾಲ ಇದೀಗ ಕೇವಲ 451 ಕೋಟಿ ರೂಪಾಯಿಗೆ ಇಳಿದಿದೆ.ಅದೇ ರೀತಿ ರಿಲಯನ್ಸ್ ಪವರ್‌ನ ಷೇರುಗಳು ಕೂಡಾ ಜೀವ ಪಡೆಯುತ್ತಿವೆ. ಕಂಪನಿಯ ಸಾಲ ಕಡಿಮೆಯಾದ ತಕ್ಷಣ ಕಂಪನಿಗೆ ಆರ್ಡರ್ ಸಿಗುತ್ತಿದೆ.
ಇತ್ತೀಚೆಗೆ ಅನಿಲ್ ಅಂಬಾನಿ ಹೊಸ ಕಂಪನಿ ಆರಂಭಿಸಿದ್ದಾರೆ.ಈ ಕಂಪನಿಯ ಹೆಸರು ಅತ್ಯಂತ ವಿಶೇಷವಾಗಿದೆ.ಇಲ್ಲಿಯವರೆಗಿನ ಕಂಪನಿ ಹೆಸರಿನಲ್ಲಿ ರಿಲಯನ್ಸ್ ಎನ್ನುವ ಹೆಸರಿತ್ತು.ಆದರೆ ಈ ಕಂಪನಿಯ ಹೆಸರಿನಲ್ಲಿ 'ಜೈ' ಎಂದು ನಮೂದಾಗಿದೆ.
ಅನಿಲ್ ಅಂಬಾನಿ ತಮ್ಮ ಹೊಸ ಕಂಪನಿಗೆ ರಿಲಯನ್ಸ್ ಜೈ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ (RJPPL) ಎಂದು ಹೆಸರಿಸಿದ್ದಾರೆ.ಈ ಹೆಸರು ಜೇ ಬಹಳ ವಿಶೇಷವಾಗಿದೆ. ಬದಲಾಗುತ್ತಿರುವ ಅನಿಲ್ ಅಂಬಾನಿಯ ದಿನಗಳ ಹಿಂದೆ ಅವರ ಪಾತ್ರ ದೊಡ್ಡದಿದೆ.
ಅನಿಲ್ ಅಂಬಾನಿ ಪುತ್ರರು ಉದ್ಯಮಕ್ಕೆ ಕಾಲಿಟ್ಟಿದ್ದಾರೆ.ಅನಿಲ್ ಅಂಬಾನಿ ಅವರ ಇಬ್ಬರು ಪುತ್ರರು ಈಗ ಸಕ್ರಿಯವಾಗಿ ವ್ಯವಹಾರದಲ್ಲಿ ಭಾಗವಹಿಸುತ್ತಿದ್ದಾರೆ.ಜೈ ಅನ್ಮೋಲ್ ಅಂಬಾನಿ ಮತ್ತು ಜೈ ಅನ್ಶುಲ್ ಅಂಬಾನಿಯವರ ಪ್ರವೇಶದೊಂದಿಗೆ ಇಡೀ ವ್ಯವಹಾರವೇ ಬದಲಾಗಿದೆ.
ಜೈ ಅನ್ಮೋಲ್ ರಿಲಯನ್ಸ್ ಗ್ರೂಪ್‌ನ ಎರಡು ಹೊಸ ಉದ್ಯಮಗಳಾದ ರಿಲಯನ್ಸ್ ಲೈಫ್ ಇನ್ಶುರೆನ್ಸ್ ಮತ್ತು ರಿಲಯನ್ಸ್ ಕ್ಯಾಪಿಟಲ್ ಅಸೆಟ್ ಮ್ಯಾನೇಜ್‌ಮೆಂಟ್ ಅನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಅನಿಲ್ ಅಂಬಾನಿ ಅವರ ಇಬ್ಬರು ಪುತ್ರರು ತಮ್ಮ ವ್ಯವಹಾರವನ್ನು ಮತ್ತೆ ಟ್ರ್ಯಾಕ್‌ಗೆ ತರುತ್ತಿದ್ದಾರೆ.