PhonePe: PhonePe ಬಳಕೆದಾರರಿಗೆ ಗುಡ್ ನ್ಯೂಸ್! ಖಾತೆಯಲ್ಲಿ ಹಣ ಇಲ್ಲದಿದ್ದರೂ ನೀವೀಗ ಪಾವತಿ ಮಾಡಬಹುದು?
ನೀವು ಫೋನ್‌ಪೇ ಬಳಸುತ್ತೀರಾ? ಹಣವಿಲ್ಲದೆ ಒದ್ದಾಡುತ್ತಿದ್ದೀರಾ? ಹಾಗಾದರೆ ನಿಮಗಾಗಿ ಶುಭ ಸುದ್ದಿ ಇಲ್ಲಿದೆ..
ಫೋನ್‌ಪೇ, ಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ. ಜೇಬಿನಲ್ಲಿ ದುಡ್ಡಿಟ್ಟುಕೊಂಡು ಓಡಾಡುವರಿಗಿಂತ ಪ್ರತಿಯೊಬ್ಬರು ಡಿಜಿಟಲ್ ಟ್ರಾನ್ಸಾಕ್ಷನ್ಸ್ ಮೇಲೆ ಆವಲಂಭಿತರಾಗಿರುತ್ತಾರೆ.
ಎಲ್ಲರ ಬಳಿ ಎಲ್ಲ ಸಮಯದಲ್ಲಿಯೂ ಹಣವಿರಲು ಸಾಧ್ಯ ಇಲ್ಲ. ಕೆಲವೊಮ್ಮೆ ತುರ್ತು ಪರಿಸ್ಥಿತಿಯಲ್ಲಿಯೂ ನಿಮ್ಮ ಬಳಿ ಹಣವಿಲ್ಲದೆ ಹೋಗಬಹುದು. ಇಂತಹ ಸಂದರ್ಭದಲ್ಲಿ ನೀವು ಪೇಚಿಗೆ ಸಿಲುಕುವುದನ್ನು ತಪ್ಪಿಸು ಫೋನ್‌ಪೇ ಹೊಸ ಫೀಚರ್ ಜೊತೆಗೆ ನಿಮ್ಮ ಮುಂದೆ ಬಂದಿದೆ.
ಪ್ರಮುಖ UPI ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿ ಮುಂದುವರಿದಿರುವ ಡಿಜಿಟಲ್ ಪಾವತಿ ಕಂಪನಿ ಫೋನ್‌ಪೇ ಇತ್ತೀಚೆಗೆ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. UPI ಮೇಲಿನ ಕ್ರೆಡಿಟ್ ಲೈನ್ ಸೇವೆಗಳನ್ನು ಲಭ್ಯವಾಗುವಂತೆ ಮಾಡಿದೆ. ಇದರಿಂದಾಗಿ ಬ್ಯಾಂಕ್ ಖಾತೆಗಳಲ್ಲಿ ಹಣ ಇಲ್ಲದಿದ್ದರೂ ನೀವು ಹಣ ಪಾವತಿ ಮಾಡಬಹುದು.
UPI ಸೇವೆಗಳಲ್ಲಿ ಕ್ರೆಡಿಟ್ ಲೈನ್ ಈಗ ಲಭ್ಯವಿದೆ. ಈ ಮೂಲಕ ಖಾತೆಯಲ್ಲಿ ಹಣ ಇಲ್ಲದಿದ್ದರೂ ಪಾವತಿ ಮಾಡಬಹುದು.
ಈ ಫೀಚರ್ ಅನನ್ನು ನೀವು ಬಳಸಬೇಕು ಎಂದರೆ ನೀವು ನಿಮ್ಮ ಬ್ಯಾಂಕ್‌ನಿಂದ ಕ್ರೆಡಿಟ್ ಲೈನ್ ಸೌಲಭ್ಯವನ್ನು ಪಡೆದಿರಬೇಕು, ಈ ಭ್ಯಾಂಕ್‌ನಿಂದ ಪಡೆದ ಕ್ರೆಡಿಟ್ ಲೈನ್ ಅನ್ನು ನೀವು ಫೋನ್‌ಪೇಗೆ ಲಿಂಕ್ ಮಾಡಬೇಕು. ಇದರಿಂದ PhonePay ನಿಂದ ಕ್ರೆಡಿಟ್ ಲೈನ್ ಮೂಲಕ ವ್ಯಾಪಾರಿಗಳಿಗೆ ಪಾವತಿಗಳನ್ನು ಮಾಡಬಹುದು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಇತ್ತೀಚೆಗೆ ತನ್ನ UPI ಸೇವೆಗಳನ್ನು ವಿಸ್ತರಿಸಿದ ಸಮಯದಲ್ಲಿ PhonePay ಈ ಸೇವೆಗಳನ್ನು ಪ್ರಾರಂಭಿಸಿದೆ. ಆರ್‌ಬಿಐ ಯುಪಿಐ ಸೇವೆಗಳನ್ನು ಪೂರ್ವ-ಅನುಮೋದಿತ ಕ್ರೆಡಿಟ್ ಲೈನ್‌ಗಳಿಗೂ ವಿಸ್ತರಿಸಿದೆ.
ಹೊಸ ಸೇವೆಗಳ ಪರಿಚಯದೊಂದಿಗೆ, ಫೋನ್‌ಪೇ ಬಳಕೆದಾರರು ಹೆಚ್ಚುವರಿ ಪಾವತಿ ಆಯ್ಕೆಯನ್ನು ಹೊಂದಿರುತ್ತಾರೆ.
ಈ ಹೊಸ ಫೀಚರ್ ಕ್ರೆಡಿಟ್ ಬಳಕೆಯನ್ನು ಹೆಚ್ಚಿಸುವ ಮೂಲಕ ಕ್ರಾಂತಿಕಾರಿ ನಿರ್ಧಾರವಾಗಿ ಪರಿಣಮಿಸಲಿದೆ ಎಂದು ಫೋನ್‌ಪೇ ಪಾವತಿಗಳ ಮುಖ್ಯಸ್ಥ ದೀಪ್ ಅಗರ್ವಾಲ್ ಹೇಳಿದ್ದಾರೆ.
ಫೋನ್‌ಪೇ ಬಳಕೆದಾರರು ಪ್ರೊಫೈಲ್ ವಿಭಾಗಕ್ಕೆ ಹೋಗಿ ಬ್ಯಾಂಕ್ ಆಯ್ಕೆಯನ್ನು ಆರಿಸಿ. ನಂತರ ಕ್ರೆಡಿಟ್ ಲೈನ್ ಸೌಲಭ್ಯದೊಂದಿಗೆ ಬ್ಯಾಂಕ್ ಹೆಸರನ್ನು ಆಯ್ಕೆ ಮಾಡಿ ಖಾತೆಯನ್ನು ಲಿಂಕ್ ಮಾಡಿ.
ಲಿಂಕ್ ಮಾಡಿದ ನಂತರ UPI ಪಿನ್ ಸೆಟ್ ಮಾಡಿ ಈ ಪ್ರಕ್ರಿಯೆಯು ಪೂರ್ಣಗೊಂಡ ನಂತರ ನೀವು ಕ್ರೆಡಿಟ್ ಲೈನ್ ಆಯ್ಕೆಯನ್ನು ನೋಡಬಹುದು.
ಸೂಚನೆ : ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಆ ಮೂಲಕ ವೇತನದ ದರದಲ್ಲಿ ಹೆಚ್ಚಳ ಅಥವಾ ಮುಂದಿನ ವೇತನ ಆಯೋಗದ ಯಾವುದೇ ಗ್ಯಾರಂಟಿ ನೀಡಲಾಗುವುದಿಲ್ಲ. ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ಶಿಫಾರಸು ಮಾಡಲಾಗಿದೆ.