Relief To Landlords: Rent ಬರದಿದ್ದರೆ Tax ಕೂಡ ಪಾವತಿಸಬೇಕಾಗಿಲ್ಲ

Fri, 04 Dec 2020-12:36 pm,

ಈ ಕುರಿತು ತನ್ನ ಆದೇಶ ನೀಡಿರುವ ಆದಾಯ ತೆರಿಗೆ (Income Tax) ಮೇಲ್ಮನವಿ ನ್ಯಾಯಾಧಿಕರಣ (Income Tax Appellate Tribunal)ನ ಮುಂಬೈ ನ್ಯಾಯಪೀಠ, ಯಾವುದೇ ಓರ್ವ ಮನೆ ಮಾಲಿಕನಿಗೆ ಆತನ ಬಾಡಿಗೆದಾರ 10000 ರೂ. ಬಾಡಿಗೆ ಪಾವತಿಸುತ್ತಿದ್ದಾನೆ ಎಂದುಕೊಳ್ಳೋಣ. 2020-21ರಲ್ಲಿ 12 ತಿಂಗಳಲ್ಲಿ ಬಾಡಿಗೆದಾರ ಮನೆ ಮಾಲೀಕನಿಗೆ ಕೇವಲ 8 ತಿಂಗಳ ಬಾಡಿಗೆ ನೀಡಿದ್ದು, 4 ತಿಂಗಳ ಬಾಡಿಗೆ ನಂತರ ಪಾವತಿಸುವುದಾಗಿ ಹೇಳಿದ್ದರೆ, ತೆರಿಗೆಯನ್ನು ಕೇವಲ 8 ತಿಂಗಳಲ್ಲಿ ಪಡೆದ ಬಾಡಿಗೆಗೆ ಮಾತ್ರ ಪಡೆಯಲಾಗುವುದು ಹಾಗೂ ಪಾವತಿಯಾಗದ 4 ತಿಂಗಳ ಬಾಡಿಗೆಗೆ ಮಾಲೀಕರಿಂದ ಯಾವುದೇ ರೀತಿಯ ತೆರಿಗೆ ಪಡೆಯಲಾಗುವುದಿಲ್ಲ. ಈ ರೀತಿಯ ಬಾಡಿಗೆಯ ಮೇಲೆ ಆದಾಯ ತೆರಿಗೆ ವಿಭಾಗ ತೆರಿಗೆ ವಿಧಿಸುವ ವಿಧಾನ ತಪ್ಪು ಎಂದು ಹೇಳಿದೆ.

ಸಂಪೂರ್ಣ 12 ತಿಂಗಳ ಬಾಡಿಗೆಯ ಕುರಿತು ಮಾತನಾದುವುದಾದರೆ , ಆ ವರ್ಷ ಭೂಮಾಲೀಕರ ಬಾಡಿಗೆಯ ಒಟ್ಟು ಆದಾಯವು 1 ಲಕ್ಷ 20 ಸಾವಿರ ರೂಪಾಯಿಗಳಾಗಿರಬೇಕು, ಆದರೆ ಈಗ ಅದು ಕೇವಲ 80 ಸಾವಿರ ರೂಪಾಯಿಗಳಾಗಿ ಉಳಿಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಆ ಹಣಕಾಸು ವರ್ಷದಲ್ಲಿ ಕೇವಲ 80 ಸಾವಿರ ರೂಪಾಯಿಗಳನ್ನು ಮಾತ್ರ ಬಾಡಿಗೆ ಆದಾಯವೆಂದು ಪರಿಗಣಿಸಬೇಕು. 4 ತಿಂಗಳ ಬಾಡಿಗೆ ಒಂದು ವೇಳೆ ಬಾಡಿಗೆದಾರರು ನೀಡಿರದಿದ್ದರೆ, ಅಂದರೆ 2020-21ರ ಆರ್ಥಿಕ ವರ್ಷದಲ್ಲಿ 40 ಸಾವಿರ ರೂಪಾಯಿಗಳು, ಆಗ ಭೂಮಾಲೀಕರು ಈಗ ಅದರ ಮೇಲೆ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ ಎಂದು ನ್ಯಾಯಾಧಿಕರಣ ಹೇಳಿದೆ.

ಬಾಡಿಗೆಯಿಂದ ಬರುವ ಆದಾಯದ ಕುರಿತಾದ ಪ್ರಕರಣ ITAT ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಹಲವು ಬಾರಿ ಬಾಡಿಗೆದಾರರು ಬಾಡಿಗೆ ಪಾವತಿಸಲು ಅಸಮರ್ಥರಾಗಿರುತ್ತಾರೆ. ಆದರೆ, ಮನೆ ಮಾಲೀಕರು ಮಾತ್ರ ಸಂಪೂರ್ಣ ಆರ್ಥಿಕ ವರ್ಷಕ್ಕೆ ಆದಾಯ ತೆರಿಗೆ ಪಾವತಿಸಬೇಕಾಗುತ್ತಿತ್ತು. ITATಯ ಮುಂಬೈ ಪೀಠ ಬಾಡಿಗೆಯಿಂದ ಬರುವ ಆದಾಯಕ್ಕೆ ವಿಧಿಸಲಾಗುತ್ತಿರುವ ತೆರಿಗೆ ಕುರಿತು ಇದೀಗ ಸ್ಪಷ್ಟ ಆದೇಶ ನೀಡಿದೆ. ಈ ಆದೇಶದ ಪ್ರಕಾರ ಯಾವುದೇ ಆಸ್ತಿಯ ಮಾಲೀಕರಿಗೆ ಬಾಡಿಗೆದಾರ ಬಾಡಿಗೆ ಪಾವತಿಸುತ್ತಿಲ್ಲ ಎಂದಾದರೆ, ಆಸ್ತಿಯ ಮಾಲೀಕರುಅಂತಹ ಆದಾಯದ ಮೇಲೆ ತೆರಿಗೆ ಪಾವತಿಸಬೇಕಾಗಿಲ್ಲ ಎಂದಿದೆ.ಬಾಡಿಗೆಯಿಂದ ಬರುವ ಆದಾಯದ ಕುರಿತಾದ ಪ್ರಕರಣ ITAT ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಹಲವು ಬಾರಿ ಬಾಡಿಗೆದಾರರು ಬಾಡಿಗೆ ಪಾವತಿಸಲು ಅಸಮರ್ಥರಾಗಿರುತ್ತಾರೆ. ಆದರೆ, ಮನೆ ಮಾಲೀಕರು ಮಾತ್ರ ಸಂಪೂರ್ಣ ಆರ್ಥಿಕ ವರ್ಷಕ್ಕೆ ಆದಾಯ ತೆರಿಗೆ ಪಾವತಿಸಬೇಕಾಗುತ್ತಿತ್ತು. ITATಯ ಮುಂಬೈ ಪೀಠ ಬಾಡಿಗೆಯಿಂದ ಬರುವ ಆದಾಯಕ್ಕೆ ವಿಧಿಸಲಾಗುತ್ತಿರುವ ತೆರಿಗೆ ಕುರಿತು ಇದೀಗ ಸ್ಪಷ್ಟ ಆದೇಶ ನೀಡಿದೆ. ಈ ಆದೇಶದ ಪ್ರಕಾರ ಯಾವುದೇ ಆಸ್ತಿಯ ಮಾಲೀಕರಿಗೆ ಬಾಡಿಗೆದಾರ ಬಾಡಿಗೆ ಪಾವತಿಸುತ್ತಿಲ್ಲ ಎಂದಾದರೆ, ಆಸ್ತಿಯ ಮಾಲೀಕರುಅಂತಹ ಆದಾಯದ ಮೇಲೆ ತೆರಿಗೆ ಪಾವತಿಸಬೇಕಾಗಿಲ್ಲ ಎಂದಿದೆ.

IATA ಮುಂಬೈ ಪೀಠ ನೀಡಿರುವ ಆದೇಶದಿಂದ ಕೊರೊನಾ ಮಹಾಮಾರಿಯ ಕಾಲದಲ್ಲಿ ಅಥವಾ ಇತರ ಯಾವುದೇ ಕಾರಣದಿಂದ ಬಾಡಿಗೆದಾರರಿಂದ ಬಾಡಿಗೆ ಪಡೆಯದ  ಮಾಲೀಕರಿಗೆ ಇದರ ಲಾಭವಾಗಲಿದೆ. ಇದರಿಂದ ಬಾಡಿಗೆದಾರರು ಹಾಗೂ ಮನೆ ಮಾಲೀಕರ ನಡುವೆ ವ್ಯಾಜ್ಯ ಸಂಭವಿಸುವ ಸಾಧ್ಯತೆಗಳು ಕಡಿಮೆಯಾಗಲಿವೆ.

ಇದುವರೆಗೆ ಮನೆ ಮಾಲೀಕರಿಗೆ ಬಾಡಿಗೆ ಬಂದೆ ಬರುತ್ತದೆ ಎಂದು ಪರಿಗಣಿಸಲಾಗುತ್ತಿತ್ತು. ಹೀಗಾಗಿ ಅದೇ ಆರ್ಥಿಕ ವರ್ಷದಲ್ಲಿ ಆತನಿಗೆ ಬರುವ ಸಂಪೂರ್ಣ ಬಾಡಿಗೆಯ ಮೇಲೆ ಆದಾಯ ತೆರಿಗೆ ವಿಧಿಸಲಾಗುತ್ತಿತ್ತು. ಆದರೆ, ಒಂದು ವೇಳೆ ಬಾಡಿಗೆದಾರ ಬಾಡಿಗೆ ನೀಡುತ್ತಿಲ್ಲ ಎಂಬ ಸಂದರ್ಭದಲ್ಲಿ ಅಂತಹ ಬಾಡಿಗೆಗೆ ಇದೀಗ ಮನೆ ಮಾಲೀಕರು ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link