Income Tax Return: ಮಾರ್ಚ್ 31ರವರೆಗೆ ಅಂತಿಮ ಗಡುವು ವಿಸ್ತರಣೆ ಸಾಧ್ಯತೆ, ಸರ್ಕಾರಕ್ಕೆ ಪತ್ರ ಬರೆದ TPA

Wed, 16 Dec 2020-2:03 pm,

ಹಿಂದಿ ಭಾಷೆಯ ಪತ್ರಿಕೆ 'Nai Dunia'ದಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ಟ್ಯಾಕ್ಸ್ ಪ್ರ್ಯಾಕ್ಟಿಶ್ನರ್ಸ್ ಅಸೋಸಿಯೇಷನ್ (TPA) ಮೂಲಕ ಅಕೌಂಟೆಂಟ್ಸ್, ತೆರಿಗೆ ಸಲಹೆಗಾರರು, ವಕೀಲರ ಪರವಾಗಿ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ವಿಜ್ನಪ್ತಿಯೊಂದನ್ನು ಸಲ್ಲಿಸಲಾಗಿದೆ. ಇದಲ್ಲದೆ ಕೇಂದ್ರ ನೇರ ತೆರಿಗೆ ಮಂಡಳಿ(CBDT)ಗೂ ಕೂಡ ಪತ್ರವೊಂದನ್ನು ರವಾನಿಸಲಾಗಿದೆ.

ಈ ಎಲ್ಲಾ ತೆರಿಗೆ ತಜ್ಞರು ಕರೋನಾದಿಂದ ಉದ್ಭವಿಸಿರುವ ಪರಿಸ್ಥಿತಿಯ ಹಿನ್ನೆಲೆ ಐಟಿಆರ್ ಮತ್ತು ಲೆಕ್ಕಪರಿಶೋಧನಾ ವರದಿಯನ್ನು ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲು ಕೋರಿದ್ದಾರೆ. ಈ ಎಲ್ಲಾ ತೆರಿಗೆ ತಜ್ಞರು ಡಿಸೆಂಬರ್ ವರೆಗೆ ಸರ್ಕಾರ ಸ್ವತಃ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಫಾರ್ಮ್ (ಯುಟಿಲಿಟಿ) ಗೆ ಸಲ್ಲಿಸಲು ಹೇಳಿರುವಾಗ.  ಡಿಸೆಂಬರ್ 31 ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕ ಹೇಗೆ ಸಾಧ್ಯ ಎಂದೂ ಕೂಡ ಅವರು ಪ್ರಶ್ನಿಸಿದ್ದಾರೆ.

ಚಾರ್ಟರ್ಡ್ ಅಕೌಂಟೆಂಟ್ಸ್ ಹಾಗೂ ತೆರಿಗೆ ಸಲಹೆಗಾರರ ಪ್ರಕಾರ ಲೆಕ್ಕ ಪರಿಶೋಧನೆ ಇಲ್ಲದೆ ಆದಾಯ ತೆರಿಗೆ ರಿಟರ್ನ್ ಹಾಗೂ ಆಡಿಟ್ ರಿಪೋರ್ಟ್ ಸಲ್ಲಿಸಲು ಅಂತಿಮ ಗಡುವನ್ನು ಡಿಸೆಂಬರ್ 31ರಿಂದ ಫೆಬ್ರವರಿ 28ಕ್ಕೆ ವಿಸ್ತರಣೆ ಮಾಡುವುದು ಆವಶ್ಯಕವಾಗಿದೆ. ಇದೇ ಆಡಿಟ್ ಪೂರ್ಣಗೊಂಡ ಬಳಿಕ ಆದಾಯ ತೆರಿಗೆ ವರದಿ ಸಲ್ಲಿಸುವ ಅವಧಿಯನ್ನು ಮಾರ್ಚ್ 31ರವರೆಗೆ ವಿಸ್ತರಣೆಯಾಗಬೇಕು ಎಂದು ಕೋರಿದ್ದಾರೆ.

ಕೊರೊನಾ ಪ್ರಕೊಪದಿಂದ ಉದ್ಭವಿಸಿರುವ ಸ್ಥಿತಿಗಳ ಹಿನ್ನೆಲೆ ಚಾರ್ಟರ್ಡ್ ಅಕೌಂಟೆಂಟ್ಸ್ ಗಳು ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗಿಲ್ಲ. ಇದುವರೆಗೆ ಕೇವಲ ಶೇ.50 ರಷ್ಟು ರಿಟರ್ನ್ ಮಾತ್ರ ದಾಖಲಿಸಲಾಗಿದೆ. ಹೀಗಾಗಿ ಡೆಡ್ ಲೈನ್ ವಿಷ್ಟರಣೆ ಅನಿವಾರ್ಯವಾಗಿದೆ ಎಂದು ಪತ್ರದಲ್ಲಿ TPA ಉಲ್ಲೇಖಿಸಿದೆ.

CBDT ಈ ಮೊದಲು ತೆರಿಗೆ ರಿಟರ್ನ್ ಪಾವತಿಸಲು ಏಪ್ರಿಲ್ ನಲ್ಲಿ ನೂತನ ಫಾರ್ಮ್ ಗಳನ್ನು ಜಾರಿಗೊಳಿಸಲಾಗಿತ್ತು ಎಂದು ಹೇಳಿತ್ತು. ಆದರೆ, ಈ ನೂತನ ಫಾರ್ಮ್ ಗಳು ಎರಡು ತಿಂಗಳುಗಳ ಬಳಿಕ ಅಂದರೆ ಜೂನ್ ನಲ್ಲಿ ಜಾರಿಗೊಳಿಸಲಾಗಿದೆ. ಹೀಗಾಗಿ ಸರ್ಕಾರವೇ ತನ್ನ ಪ್ರಕ್ರಿಯೆಯನ್ನು ವಿಳಂಬವಗಿಸಿದ್ದ ಕಾರಣ ತೆರಿಗೆ ಪಾವತಿದಾರರ ಮೇಲೆ ತರಾತುರಿ ಹೇರಬಾರದು ಎಂದು ಅದು ಹೇಳಿದೆ.

ಟಿಪಿಎ ಪ್ರಕಾರ, ಒಂದು ಲಕ್ಷ ರೂಪಾಯಿಗಿಂತ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ ತೆರಿಗೆದಾರರಿಂದಲೂ ಬಡ್ಡಿ ವಸೂಲಿ ಮಾಡಲಾಗುತ್ತದೆ. ತೆರಿಗೆದಾರರು ಆ ಬಡ್ಡಿ ಪಾವತಿಸಲು ಸಿದ್ಧರಿದ್ದರೆ, ರಿಟರ್ನ್ ಸಲ್ಲಿಸುವ ದಿನಾಂಕವೂ ಮುಂದೂಡಬೇಕು. ಟಿಪಿಎಯ ಈ ಪತ್ರದ ನಂತರ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆಯಾಗುವ ನಿರೀಕ್ಷೆ ಇದೆ. ಹಾಗೆ ನೋಡಿದರೆ ಆದಾಯದ ಸಂಖ್ಯೆ ಕಡಿಮೆಯಾಗಿದ್ದರೆ ದಿನಾಂಕವನ್ನು ವಿಸ್ತರಿಸುವುದು ಸರ್ಕಾರದ ಅನಿವಾರ್ಯತೆಯಾಗಲಿದೆ. ಏಕೆಂದರೆ ಈ ರೀತಿಯಾಗಿ ಸರ್ಕಾರದ ತೆರಿಗೆ ಸಂಗ್ರಹವೂ ಕಡಿಮೆಯಾಗುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link