Google Play Store ಹಾಗೂ Apple Storeಗೆ ಸೆಡ್ಡು ಹೊಡೆಯಲು ಬಂತು ಮೋದಿ ಸರ್ಕಾರದ App Store
1. ಭಾರತದಲ್ಲಿ ಬಿಡುಗಡೆಯಾದ Mobile Seva AppStore - Telecomtalk ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಭಾರತ ಸರ್ಕಾರ ದೇಸಿ ಆಪ್ ಸ್ಟೋರ್ (Indian App Store) ಬಿಡುಗಡೆ ಮಾಡಿದೆ. Mobile Seva AppStore ಆಪ್ ಸ್ಟೋರ್ ಅನ್ನು ಇದೀಗ ಬಳಕೆದಾರರು ಬಳಕೆ ಮಾಡಬಹುದಾಗಿದೆ.
2. Google Play Store ಹಾಗೂ Apple Store ಗಳಿಗೆ ಪರ್ಯಾಯ ಆಯ್ಕೆ ಈ Mobile Seva AppStore - ಇತ್ತೀಚೆಗಷ್ಟೇ ರಾಜ್ಯಸಭೆಯಲ್ಲಿ ಈ ಕುರಿತು ಹೇಳಿಕೆ ನೀಡಿದ್ದ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಸ್ಟೋರ್ ಗೆ ಪರ್ಯಾಯ ಆಯ್ಕೆಯಾಗಿ Mobile Seva AppStore ಬಿಡುಗಡೆ ಮಾಡಲಾಗಿದೆ (National Mobile Governance Initiative) ಎಂದಿದ್ದರು.
3. ಭಾರತ ಸರ್ಕಾರದ ನಿಯಂತ್ರಣದಲ್ಲಿರಲಿದೆ ಈ ಆಪ್ ಸ್ಟೋರ್ - ಇದಕ್ಕಾಗಿ ಭಾರತ ದೇಶಾದ್ಯಂತ ಇರುವ ಡೆವಲಪರ್ ಗಳು Mobile Seva AppStore ಗೂ ಕೂಡ ಆಪ್ ಗಳನ್ನು ಸಿದ್ಧಪಡಿಸಲು ಸೂಚಿಸಲಾಗಿದೆ. ಸರ್ಕಾರ ಸ್ವತಃ ಈ ಆಪ್ ಸ್ಟೋರ್ ಅನ್ನು ನಿರ್ವಹಿಸಲಿದೆ.
4. ಎಲ್ಲಾ ಸರ್ಕಾರಿ ವಿಭಾಗಗಳ ಆಪ್ ಇದರಲ್ಲಿರಲಿವೆ - ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲಾ ವಿಭಾಗಗಳ ಆಪ್ ಗಳನ್ನು ನೀವು Mobile Seva AppStore ನಿಂದ ಡೌನ್ಲೋಡ್ ಮಾಡಬಹುದು.
5. ಇಲ್ಲಿವೆ Mobile Seva AppStore ವೈಶಿಷ್ಟ್ಯಗಳು - ಅಧಿಕೃತ ವೆಬ್ ಸೈಟ್ ನಲ್ಲಿ ನೀಡಲಾಗಿರುವ ಮಾಹಿತಿ ಪ್ರಕಾರ Mobile Seva AppStore ರಾಜ್ಯಗಳು ಹಾಗೂ ವಿವಿಧ ಕೆಟಗರಿಗಳಲ್ಲಿ ಆಪ್ ಗಳನ್ನು ಪಟ್ಟಿ ಮಾಡಲಾಗಿದೆ. ಇಲ್ಲಿರುವ ಎಲ್ಲಾ ಆಪ್ ಗಳನ್ನು ನೀವು ಉಚಿತವಾಗಿ ಡೌನ್ಲೋಡ್ ಮಾಡಬಹುದು.