ಚಳಿಗಾಲದಲ್ಲಿ ರಾಮಬಾಣ ಮೆಂತ್ಯ, ಇಲ್ಲಿವೆ ಮೆಂತ್ಯದ ಅದ್ಭುತ ಲಾಭಗಳು
ಮೆಂತ್ಯ ಬೀಜ ಸೇವನೆಯಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಆಯುರ್ವೇದದಲ್ಲಿ ಇದರ ಹಲವು ಲಾಭಗಳ ಕುರಿತು ಉಲ್ಲೇಖವಿದೆ. ಇದರ ಬೀಜಗಳ ಸೇವನೆಯಿಂದ ಸ್ಮರಣ ಶಕ್ತಿ ವೃದ್ಧಿಯಾಗುತ್ತದೆ.
ಹಸಿರು ಮೆಂತ್ಯ ಸೊಪ್ಪು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ. ಇದರ ಎಳೆಗಳು ಉದರ ಸಂಬಂಧಿತ ಕಾಯಿಲೆಗಳಿಗೆ ಅಮೃತ ಎಂದು ಹೇಳಲಾಗಿದೆ.
ಜೇನು ತುಪ್ಪದ ಜೊತೆಗೆ ಮೆಂತ್ಯ ಸೇವನೆ ಹೃದಯಕ್ಕೆ ಉತ್ತಮ ಎಂದು ಹಲಲಾಗುತ್ತದೆ. ಬಿಸಿ ನೀರಿನ ಜೊತೆಗೆ ಮೆಂತ್ಯ ಪೌಡರ್ ಸೇವನೆ ಉದರ ಸಂಬಂಧಿತ ಕಾಯಿಲೆಯನ್ನು ನಿವಾರಿಸುತ್ತದೆ.
ಚಳಿಗಾಲದಲ್ಲಿ ಚಳಿಯಿಂದ ಉಂಟಾಗುವ ತೊಂದರೆಗಳಿಗೆ ಮೆಂತ್ಯ ಬೀಜಗಳ ಚಹಾ ಸೇವನೆ ಉತ್ತಮ ಎಂದು ಹೇಳಲಾಗುತ್ತದೆ.
ಅಧಿಕ ರಕ್ತದೊತ್ತಡ ಹಾಗೂ ಅಪಚನಕ್ಕೆ ಮೆಂತ್ಯೆ ರಾಮಬಾಣ. ಮೆಂತ್ಯ ರಸ ಸೇವನೆ ಡಯಾಬಿಟಿಸ್ ರೋಗಿಗಳಿಗೆ ಲಾಭ ನೀಡುತ್ತದೆ. ಚಳಿಗಾಲದಲ್ಲಿ ಮೆಂತ್ಯ ಪರಾಠಾ ಸೇವನೆಯ ಮಜಾ ವಿಶೇಷವಾಗಿರುತ್ತದೆ.