Filter Water in Tap : ದಿನದ 24 ಗಂಟೆ ಶುದ್ಧ ಕುಡಿಯುವ ನೀರು ನಲ್ಲಿಯಲ್ಲಿ ಬರುವ ದೇಶದ ಮೊದಲ ನಗರ ಇದು!

Wed, 28 Jul 2021-5:16 pm,

ಒಡಿಶಾದ ಪುರಿ ದೇಶದ ಮೊದಲ ಮತ್ತು ಏಕೈಕ ನಗರವಾಗಿದೆ, ಇಲ್ಲಿ ಜನರು ದಿನದ 24 ಗಂಟೆಗಳ ಕಾಲ ನಲ್ಲಿಯಲ್ಲಿ ಶುದ್ಧ ಕುಡಿಯುವ ನೀರನ್ನು ಪಡೆಯುತ್ತಾರೆ. ಟ್ಯಾಪ್ ವಾಟರ್ ಎಷ್ಟು ಸ್ವಚ್ಛವಾಗಿರುತ್ತದೆಯೆಂದರೆ ಅದನ್ನು ಫಿಲ್ಟರ್ ಮಾಡುವ ಅಗತ್ಯವಿಲ್ಲ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಇತ್ತೀಚೆಗೆ ಪುರಿಯಲ್ಲಿ 'ನಲ್ ಸೆ ಫಿನೇಕಾ ಪಾನಿ' ಯೋಜನೆಯನ್ನು ಉದ್ಘಾಟಿಸಿದ್ದಾರೆ.

ಪುರಿ ಜಗನ್ನಾಥ ಯಾತ್ರೆಗೆ ಪ್ರಸಿದ್ಧವಾಗಿದೆ. ಈ ನಗರದ ಜನಸಂಖ್ಯೆ 2.5 ಲಕ್ಷ. ಈ ನಗರದ ಜನರು ಈ ಯೋಜನೆಯ ಲಾಭವನ್ನು ಪಡೆಯುತ್ತಾರೆ, ಹಾಗೆಯೇ ಪ್ರತಿ ವರ್ಷ ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡುವ ಸುಮಾರು 20 ಮಿಲಿಯನ್ ಪ್ರವಾಸಿಗರು ಸಹ ಇದರ ಲಾಭ ಪಡೆಯುತ್ತಾರೆ.

ಈ ಯೋಜನೆಯನ್ನ ಉದ್ಘಾಟಿಸಿದ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಪ್ರತಿ ಮನೆಗೆ ಶುದ್ಧ ಕುಡಿಯುವ ನೀರನ್ನು ನಲ್ಲಿಯ ಮೂಲಕ ಒದಗಿಸುವುದು ಒಂದು ಪರಿವರ್ತಕ ಯೋಜನೆಯಾಗಿದೆ ಮತ್ತು ಪುರಿಯನ್ನು ವಿಶ್ವ ದರ್ಜೆಯ ಪಾರಂಪರಿಕ ನಗರವನ್ನಾಗಿ ಮಾಡುವ ಮಹತ್ವದ ಹೆಜ್ಜೆಯಾಗಿದೆ.

ಪುರಿಯ ನಿವಾಸಿಗಳು, ಪ್ರವಾಸಿಗರು ಮತ್ತು ಯಾತ್ರಿಕರಿಗೆ ಈಗ ಶುದ್ಧ ಕುಡಿಯುವ ನೀರು ನಗರದಾದ್ಯಂತ ಲಭ್ಯವಿದೆ ಎಂದು ಸಿಎಂ ಹೇಳಿದರು. ಒಡಿಶಾದ ಪ್ರತಿ ಮನೆಗೂ ಟ್ಯಾಪ್ ವಾಟರ್ ಒದಗಿಸುವುದು ನನ್ನ ಕನಸಾಗಿತ್ತು ಮತ್ತು ಅದು ಈಗ ನನಸಾಗಲಿದೆ ಎಂದು ಹೇಳಿದ್ದಾರೆ.

ಐದು ವರ್ಷಗಳಲ್ಲಿ ಕುಡಿಯುವ ನೀರಿನ ಬಜೆಟ್ ಅನ್ನು ದ್ವಿಗುಣಗೊಳಿಸಲಾಗಿದೆ ಎಂದು ಸಿಎಂ ಹೇಳಿದರು. ಈ ಹಿಂದೆ ಅದು 200 ಕೋಟಿ ರೂ. ಆಗಿದ್ದು, ಇದೀಗ ಐದು ವರ್ಷಗಳಲ್ಲಿ 4000 ಕೋಟಿ ರೂ.ಗೆ ಏರಿದೆ.

ಭಾರತದ ಕೆಲವು ಸ್ಥಳಗಳಲ್ಲಿ, ಕುಡಿಯುವ ನೀರು ಹಲವು ದಿನಗಳವರೆಗೆ ಲಭ್ಯವಿಲ್ಲ. ದೊಡ್ಡ ನಗರಗಳಲ್ಲಿ, ಟ್ಯಾಪ್‌ನಲ್ಲಿ ನೀರು ಇದೆ ಆದರೆ ಅದು ತುಂಬಾ ಕೊಳಕು ಆಗಿದ್ದು, ಆರ್‌ಒ ಫಿಲ್ಟರ್ ಮಾಡಿದ ನಂತರ, ಅಗತ್ಯ ಖನಿಜಗಳನ್ನು ನೀರಿನಿಂದ ತೆಗೆದುಹಾಕಲಾಗುತ್ತದೆ, ಹಾಗೆಯೇ ನೀರಿನ ವ್ಯರ್ಥವೂ ಗಣನೀಯವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪ್ರತಿ ರಾಜ್ಯವು ಒಡಿಶಾದಿಂದ ಕಲಿಯಬೇಕಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link