ಪ್ರಪಂಚದ ಈ 5 ದೇಶಗಳ ಜನರಿಗೆ ಕತ್ತಲೆ ಗೊತ್ತೇ ಇಲ್ವಂತೆ, 24 ಗಂಟೆ ಇಲ್ಲಿ ಸೂರ್ಯ ಬೆಳಗುತ್ತಾನಂತೆ
ಕೆನಡಾದಲ್ಲಿ ವರ್ಷದ ಬಹುಕಾಲ ಹಿಮವು ಹೆಪ್ಪುಗಟ್ಟುತ್ತದೆ. ಬೇಸಿಗೆಯಲ್ಲಿ ಸೂರ್ಯ ನಿರಂತರವಾಗಿ ಬೆಳಗುತ್ತಾನೆ. ಬೇಸಿಗೆಯ ದಿನಗಳಲ್ಲಿ ಇಲ್ಲಿ ರಾತ್ರಿಯೇ ಆಗುವುದಿಲ್ಲ.
ವಿಶ್ವದ ಅತ್ಯಂತ ಸುಂದರ ದೇಶಗಳಲ್ಲಿ ನಾರ್ವೆ ಕೂಡ ಒಂದು. ಇದಕ್ಕೆ 'ಲ್ಯಾಂಡ್ ಆಫ್ ಮಿಡ್ ನೈಟ್ ಸನ್' ಎಂದು ಕರೆಯಲಾಗುತ್ತದೆ. ಇಲ್ಲಿ ಮೇ ತಿಂಗಳಿನಿಂದ ಹಿಡಿದು ಜೂನ್ ತಿಂಗಳವರೆಗೆ 24 ಗಂಟೆಗಳ ಕಾಲ ಸೂರ್ಯ ಬೆಳಗುತ್ತಾನೆ. ಇಲ್ಲಿ ಸತತವಾಗಿ 74 ದಿನಗಳ ಕಾಲ ಸೂರ್ಯ ಬೆಳಗುತ್ತಾನೆ. ಆದರೆ, ಸಂಜೆಯ ಹೊತ್ತು ಲಘು ಕತ್ತಲೆ ಆವರಿಸುತ್ತದೆ ಅಷ್ಟೇ.
ದಿನದ 24 ಗಂಟೆಗಳಲ್ಲಿ 23 ಗಂಟೆಗಳ ಕಾಲ ಸೂರ್ಯನು ಬೆಳಗುವ ಮೊದಲ ದೇಶ ಫಿನ್ಲ್ಯಾಂಡ್. ಬೇಸಿಗೆಯಲ್ಲಿ 73 ದಿನಗಳವರೆಗೆ ಇಲ್ಲಿ ರಾತ್ರಿ ಇಲ್ಲ. ಅದರ ಸೌಂದರ್ಯವನ್ನು ನೋಡಲು ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡುತ್ತಾರೆ.
ಯೂರೋಪಿನ ಎರಡನೇ ಅತ್ಯಂತ ದೊಡ್ಡ ದ್ವೀಪ ಐಸ್ ಲ್ಯಾಂಡ್. ಇಲ್ಲಿ ಅರ್ಧ ರಾತ್ರಿಯಲ್ಲಿಯೂ ಕೂಡ ಸೂರ್ಯ ತನ್ನ ಕಿರಣಗಳನ್ನು ಚೆಲ್ಲುತ್ತಲೇ ಇರುತ್ತಾನೆ.
ಅಲಾಸ್ಕಾ ಗ್ಲೇಸಿಯರ್ ಗಳು ನೋಡಲು ತುಂಬಾ ಸುಂದರವಾಗಿವೆ. ಇಲ್ಲಿ ಮೇ ತಿಂಗಳಿನಿಂದ ಜುಲೈವರೆಗೆ ಸೂರ್ಯ ನಿರಂತರವಾಗಿ ಬೆಳಗುತ್ತಲೇ ಇರುತ್ತಾನೆ. ಇಲ್ಲಿ ರಾತ್ರಿ 12.30ಕ್ಕೆ ಸೂರ್ಯಾಸ್ತವಾಗುತ್ತದೇ. ಸರಿಯಾಗಿ 51 ನಿಮಿಷಗಳ ಬಳಿಕ ಮತ್ತೆ ಸೂರ್ಯೋದಯವಾಗುತ್ತದೆ.