Bitumi Mama - 23 ವರ್ಷದ ಈ 11 ಮಕ್ಕಳ ಮಹಾತಾಯಿಗೆ 100 ಮಕ್ಕಳಿಗೆ ತಾಯಿಯಾಗುವ ಮಹದಾಸೆ

Fri, 12 Feb 2021-8:45 pm,

ಇಂದಿನ ಯುಗದಲ್ಲಿ, 'ನಾವಿಬ್ಬರು-ನಮಗಿಬ್ಬರು' ತತ್ವವನ್ನು ಅನುಸರಿಸಲು ಇಡೀ ಜಗತ್ತು ಹೇಳುತ್ತಿದ್ದರೆ, ಜಾರ್ಜಿಯಾದ ಕ್ರಿಸ್ಟಿನಾ ಓಜ್ಟಾರ್ಕ್ ಇದನ್ನು ಅಸಂಬದ್ಧವೆಂದು ಹೇಳುತ್ತಾರೆ. ಎಲ್ಲಾ ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸಬಹುದು ಮತ್ತು ಅವರಿಗೆ ಉತ್ತಮ ಜೀವನವನ್ನು ನೀಡಬಹುದು ಎಂದು ಅವರು ಹೇಳುತ್ತಾರೆ. ಆದ್ದರಿಂದ ಕುಟುಂಬವನ್ನು ಬೆಳೆಸುವಲ್ಲಿ ಮತ್ತು ಹೆಚ್ಚಿನ ಮಕ್ಕಳನ್ನು ಹುಟ್ಟುಹಾಕಲು ತಮಗೆ ಯಾವುದೇ ತೊಂದರೆಗಳಿಲ್ಲ ಎಂದು ಹೇಳುತ್ತಾರೆ.  

ಕ್ರಿಸ್ಟಿನಾ ಓಜ್ಟಾರ್ಕ್ ಮಕ್ಕಳನ್ನು ತುಂಬಾ ಪ್ರೀತಿಸುತ್ತಾರೆ. ಆಕೆಗೆ ಕೇವಲ 23 ವರ್ಷ, ಆದರೆ ಈ ವಯಸ್ಸಿನಲ್ಲಿ ಅವಳು 11 ಮಕ್ಕಳನ್ನು ಬೆಳೆಸುತ್ತಿದ್ದಾಳೆ. ಅವರ ಹಿರಿಯ ಮಗಳಿಗೆ 6 ವರ್ಷ. ಅಂದರೆ, ಅವರು 17 ವರ್ಷದ ವಯಸ್ಸಿನಲ್ಲಿ ಮೊದಲ ಬಾರಿಗೆ ತಾಯಿಯಾಗಿದ್ದಾಳೆ ಎಂಬುದು ಇಲ್ಲಿ ಉಲ್ಲೇಖನೀಯ.

ಕ್ರಿಸ್ಟಿನಾ ಓಜ್ಟಾರ್ಕ್ ಶ್ರೀಮಂತ ಕುಟುಂಬಕ್ಕೆ ಸೇರಿದವರಾಗಿದ್ದಾರೆ.  ಅಂದರೆ ಅವರು ಕೋಟ್ಯಂತರ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಅಷ್ಟೇ ಅಲ್ಲ, ಆಕೆ ತನ್ನ ಕುಟುಂಬದಿಂದಾಗಿ ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಸೂಪರ್‌ಸ್ಟಾರ್‌ನಂತೆ ಬದುಕುತ್ತಾಳೆ. ಅವಳು ತನ್ನ ಮಕ್ಕಳೊಂದಿಗೆ ಭಾವಚಿತ್ರಗಳನ್ನು ಪೋಸ್ಟ್ ಮಾಡುತ್ತಾರೆ.

ತನ್ನ ಕುಟುಂಬದ ಬೆಳವಣಿಗೆಯನ್ನು ನಿಯಂತ್ರಿಸಲು ತಾವು ನಾನು ಬಯಸುವುದಿಲ್ಲ ಎಂದು ಕ್ರಿಸ್ಟಿನಾ ಓಜ್ಟಾರ್ಕ್ ಹೇಳುತ್ತಾರೆ. ತನಗೆ ಹೆಚ್ಚು ಹೆಚ್ಚು ಮಕ್ಕಳನ್ನು ಹೊಂದುವ ಆಸೆ.  ಏಕೆಂದರೆ ನಾನು ಮಕ್ಕಳನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ಅವರ ಪಾಲನೆಯನ್ನು ಆನಂದಿಸುತ್ತೇನೆ. ಕ್ರಿಸ್ಟಿನಾ ಅವರ ಪತಿ ಗಲಿಪ್  ಒಜ್ಟಾರ್ಕ್ ಗೆ 56 ವರ್ಷ ಮತ್ತು ದೊಡ್ಡ ಉದ್ಯಮಿ. ಕ್ರಿಸ್ಟಿನಾ ರಷ್ಯಾದ ಮಾಸ್ಕೋದಲ್ಲಿ ಜನಿಸಿದರೆ, ಪತಿ ಗಲಿಪ್ ಟರ್ಕಿಯಲ್ಲಿ ದೊಡ್ಡ ಕುಟುಂಬದಲ್ಲಿ ಜನಿಸಿದ್ದಾರೆ. ಆದರೆ ಸದ್ಯ ಈ ಕುಟುಂಬ ಜಾರ್ಜಿಯಾದಲ್ಲಿ ವಾಸಿಸುತ್ತಿದೆ.

ಜಾರ್ಜಿಯಾದ ಎರಡನೇ ಅತಿದೊಡ್ಡ ನಗರವಾದ ಬಟುಮಿಯಲ್ಲಿ ವಾಸಿಸುವ ಈ ಕುಟುಂಬವು 105 ಮಕ್ಕಳನ್ನು ಬಯಸುತ್ತದೆ ಎಂದು ಮಾಧ್ಯಮವೊಂದಕ್ಕೆ ತಿಳಿಸಿದೆ. ಆದರೆ, ಈ ಮಧ್ಯೆ, ಕ್ರಿಸ್ಟಿನಾ ಕೂಡ ತನ್ನ ಹಿರಿಯ ಮಗಳಿಗೆ ಮಾತ್ರ ಜನ್ಮ ನೀಡಿದ್ದು ಮತ್ತು ಉಳಿದೆಲ್ಲಾ ಮಕ್ಕಳನ್ನು ಸರೊಗಸಿಯಿಂದ ಜನಿಸಿದ್ದಾರೆ ಎಂಬ ಅಂಶವನ್ನು ಬಹಿರಂಗಪಡಿಸಿದ್ದರು.

ಮಕ್ಕಳಿಗೆ ಜನ್ಮ ನೀಡುವುದು ಮತ್ತು ಅವರನ್ನು ಉತ್ತಮ ರೀತಿಯಲ್ಲಿ ಬೆಳೆಸುವುದು ಎರಡೂ ವಿಷಯಗಳು ವಿಭಿನ್ನವಾಗಿದೆ ಎಂದು ಕ್ರಿಸ್ಟಿನಾ ಹೇಳುತ್ತಾರೆ. ಮಕ್ಕಳನ್ನು ಬೆಳೆಸಲು ನನಗೆ ಸಂತೋಷವಾಗುತ್ತದೆ. ಆಗ ಈ ಮಕ್ಕಳು ನಮ್ಮ ಜೈವಿಕ ಮಕ್ಕಳು. ಸರೊಗಸಿ ಮೂಲಕ ನಾವು ಅವರಿಗೆ ಜನ್ಮ ನೀಡಿದ್ದೇವೆ ಎಂಬುದು ನಗಣ್ಯವಾಗಿರುತ್ತದೆ ಎನ್ನುತ್ತಾರೆ ಕ್ರಿಸ್ಟಿನಾ.

ಸರೊಗಸಿ ಕುರಿತು ಪ್ರಶ್ನೆ ಕೇಳಿದಾಗ, ಬಟುಮಿ ನಗರದಲ್ಲಿ ಅನೇಕ ಸಿರೊಗಸಿ ಕ್ಲಿನಿಕ್ಗಳಿವೆ ಎಂದು ಕ್ರಿಸ್ಟಿನಾ ಹೇಳುತ್ತಾಳೆ. ಈ ಪರಿಸ್ಥಿತಿಯಲ್ಲಿ, ಯಾವ ತಾಯಿ ಮಗುವಿಗೆ ಜನ್ಮ ನೀಡಿದಳು ಎಂಬುದುತಮಗೆ ಗೊತ್ತಿರುವುದಿಲ್ಲ. ಏಕೆಂದರೆ ಇದು ಕ್ಲಿನಿಕ್ ಮತ್ತು ಮಹಿಳೆಯ ನಡುವಿನ ವಿಷಯವಾಗಿದೆ ಎನ್ನುತ್ತಾರೆ ಕ್ರಿಸ್ಟಿನಾ.

ಜಾರ್ಜಿಯಾದಲ್ಲಿ ಸರೋಗಸಿ ಕಾನೂನು ಬಾಹೀರ ಅಲ್ಲ. ಈ ಪ್ರಕ್ರಿಯೆಗೆ ಸುಮಾರು ಸುಮಾರು 8 ಸಾವಿರ ಯುರೋ ವೆಚ್ಚ ತಗುಲುತ್ತದೆ. ಭಾರತೀಯ ರೂಪಾಯಿ ಲೆಕ್ಕದಲ್ಲಿ ಇದು ಸುಮಾರು 8 ಲಕ್ಷಕ್ಕೂ ಅಧಿಕವಾಗಿದೆ. ಇಂತಹುದರಲ್ಲಿ ಕ್ರಿಸ್ಟಿನಾ ಒಂದು ವೇಳೆ 100 ಮಕ್ಕಳ ಕುಟುಂಬ ಸಾಗಿಸಲು ಬಯಸುತ್ತಿದ್ದರೆ, ಕೇವಲ ಮಕ್ಕಳ ಜನನಕ್ಕಾಗಿ ಮಾತ್ರ 80 ಕೋಟಿ ರೂ.ಗೂ ಅಧಿಕ ಧನರಾಶಿ ವ್ಯಯಿಸಬೇಕು. ಅದಾದ ಬಳಿಕ ಆ ಮಕ್ಕಳ ಪೋಷಣೆ ಹಾಗೂ ವಿದ್ಯಾಭ್ಯಾಸದ ಪ್ರಶ್ನೆ. ಆದರೆ, ಇವೆಲ್ಲದಕ್ಕೂ ತಾವು ಸಿದ್ಧರಾಗಿರುವುದಾಗಿ ಕ್ರಿಸ್ಟಿನಾ ಹೇಳುತ್ತಾರೆ. ಅಷ್ಟೇ ಅಲ್ಲ ಅವರ ಪತಿ ಕೂಡ ಕ್ರಿಸ್ಟಿನಾ ಅವಳ ಈ ನಿರ್ಣಯಕ್ಕೆ ಬೆಂಬಲ ನೀಡುತ್ತಾರೆ.  (ಚಿತ್ರ ಕೃಪೆ-Insta/batumi_mama)

ZEENEWS TRENDING STORIES

By continuing to use the site, you agree to the use of cookies. You can find out more by Tapping this link