Photo Gallery: ಭಾರತದ ಟಾಪ್ 10 ಶ್ರೀಮಂತ ಮಹಿಳೆಯರು

Sun, 21 Aug 2022-12:11 pm,

HCL ಟೆಕ್ನಾಲಜೀಸ್‌ನ ಅಧ್ಯಕ್ಷೆ ರೋಶ್ನಿ ನಾಡರ್ ಮಲ್ಹೋತ್ರಾ ಅವರು ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾಗಿ ಸ್ಥಾನ ಪಡೆದಿದ್ದಾರೆ. 2021ರಲ್ಲಿ ಅವರ ಸಂಪತ್ತಿನ ಮೌಲ್ಯದಲ್ಲಿ ಶೇ.54ರಷ್ಟು ಏರಿಕೆಯಾಗಿ 84,330 ಕೋಟಿ ರೂ.ಗೆ ತಲುಪಿದೆ ಎಂದು 2022ರ Kotak Private Banking-Hurun ಪಟ್ಟಿ ತಿಳಿಸಿದೆ.

ಜನಪ್ರಿಯ ಸೌಂದರ್ಯ ಇ-ಕಾಮರ್ಸ್ ಚೈನ್ ‘ನೈಕಾ’ ಸಂಸ್ಥಾಪಕಿ ಮತ್ತು ಸಿಇಒ ಫಲ್ಗುಣಿ ನಾಯರ್ ಇತ್ತೀಚೆಗೆ ದೇಶದ ಅತ್ಯಂತ ಶ್ರೀಮಂತ ಸೆಲ್ಫ್ ಮೇಡ್ ಮಹಿಳಾ ಬಿಲಿಯನೇರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ  ಸಾಧನೆ ಬಳಿಕ ಅವರು ಈಗ ವಿಶ್ವದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾಗಿ ಸ್ಥಾನ ಪಡೆದುಕೊಂಡಿದ್ದಾರೆ.

ಭಾರತೀಯ ಬಯೋಫಾರ್ಮಾಸ್ಯುಟಿಕಲ್ ಕಂಪನಿ ಬಯೋಕಾನ್‌ನ CMD ಕಿರಣ್ ಮಜುಂದಾರ್ ಶಾ ಇಂದು ಮಹತ್ವಾಕಾಂಕ್ಷಿ ಮಹಿಳಾ ಉದ್ಯಮಿಗಳಿಗೆ ಮಾದರಿಯಾಗಿದ್ದಾರೆ. ಅವರ ಒಟ್ಟು 29,030 ಕೋಟಿ ರೂ. ಮೌಲ್ಯದ ಸಂಪತ್ತಿಗೆ ಒಡತಿಯಾಗಿದ್ದಾರೆ.

ದಿವಿಸ್ ಲ್ಯಾಬೋರೇಟರೀಸ್‌ನ ನಿರ್ದೇಶಕಿ ನಿಲಿಮಾ ಮೊಟಪರ್ತಿ ಅವರ ಸಂಪತ್ತು ಶೇ.50ರಷ್ಟು ಏರಿಕೆ ಕಂಡಿದೆ. ಇವರ ಒಟ್ಟು ಸಂಪತ್ತು ಸುಮಾರು 28,180 ಕೋಟಿ ರೂ.ಗೆ ತಲುಪಿದೆ. ಭಾರತದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಅವರು 4ನೇ ಸ್ಥಾನದಲ್ಲಿದ್ದಾರೆ.

ರಾಧಾ ವೆಂಬು ತನ್ನ ಸಹೋದರ ಶ್ರೀಧರ್ ವೆಂಬು ಅವರೊಂದಿಗೆ ‘ಜೊಹೊ’ ಸ್ಥಾಪಕರಾಗಿದ್ದಾರೆ. ಇವರ ಪ್ರಸ್ತುತ ನಿವ್ವಳ ಮೌಲ್ಯ 26,260 ಕೋಟಿ ರೂ. ಇದೆ.

ಲೀನಾ ಗಾಂಧಿ ತಿವಾರಿ ಔಷಧೀಯ ಮತ್ತು ಜೈವಿಕ ತಂತ್ರಜ್ಞಾನ ಸಂಸ್ಥೆ USV ಅಧ್ಯಕ್ಷರಾಗಿದ್ದಾರೆ. ಒಟ್ಟು 24 ಕೋಟಿ ರೂ.ಗಳ ದೇಣಿಗೆಯೊಂದಿಗೆ ಅವರು ಪಟ್ಟಿಯಲ್ಲಿ ಅತ್ಯಂತ ಪರೋಪಕಾರಿ ವ್ಯಕ್ತಿಯಾಗಿದ್ದಾರೆ.

ಅನು ಅಗಾ ಅವರು 1996ರಿಂದ 2004ರವರೆಗೆ ಥರ್ಮ್ಯಾಕ್ಸ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಇವರ ಅಂದಾಜು ನಿವ್ವಳ ಮೌಲ್ಯ 14,530 ಕೋಟಿ ರೂ. ಇದೆ.

ನೇಹಾ ನಾರ್ಖೆಡೆ ‘ಕನ್‌ಫ್ಲುಯೆಂಟ್‌’ನ ಸಹ-ಸಂಸ್ಥಾಪಕಿ. ಇವರ ಒಟ್ಟು ನಿವ್ವಳ ಮೌಲ್ಯ 13,380 ಕೋಟಿ ರೂ. ಇದೆ.

ವಂದನಾ ಲಾಲ್ ಅವರು ಡಾ.ಲಾಲ್ ಪಾಥ್‌ಲ್ಯಾಬ್ಸ್‌ನ ನಿರ್ದೇಶಕಿ. ಇವರ ಒಟ್ಟು ನಿವ್ವಳ ಮೌಲ್ಯ 6,810 ಕೋಟಿ ರೂ. ಇದೆ.

ರೇಣು ಮುಂಜಾಲ್ ಅವರು ದಿವಂಗತ ರಾಮನ್ ಮುಂಜಾಲ್ ಅವರ ಪತ್ನಿ. ಇವರು ಹೀರೋ ಫಿನ್‌ಕಾರ್ಪ್‌ನ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದಾರೆ. ಇವರ ನಿವ್ವಳ ಮೌಲ್ಯ 6,620 ಕೋಟಿ ರೂ. ಇದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link