Photo Gallery: ಭಾರತಕ್ಕೆ ಭೇಟಿ ನೀಡಿದ ಟಾಪ್-5 ಫುಟ್ಬಾಲ್ ಆಟಗಾರರು

Sat, 26 Aug 2023-1:14 pm,

ಫುಟ್ಬಾಲ್ ದಂತಕಥೆ ಪಿಲೆ ಹೆಸರಿನಲ್ಲಿ ಹಲವಾರು ದಾಖಲೆಗಳಿವೆ. ಎಡ್ಸನ್ ಅರಾಂಟೆಸ್ ಡೊ ನಾಸಿಮೆಂಟೊ ಅವರು ಪೀಲೆ ಎಂದೇ ಪ್ರಸಿದ್ಧರಾಗಿದ್ದಾರೆ. ಪಿಲೆ ಭಾರತಕ್ಕೆ 2 ಬಾರಿ ಭೇಟಿ ನೀಡಿದ್ದಾರೆ. ಮೊದಲ ಬಾರಿಗೆ 1978ರಲ್ಲಿ ಕೋಲ್ಕತ್ತಾ ಪ್ರವಾಸ ಕೈಗೊಂಡಿದ್ದ ಅವರು, 2015ರಲ್ಲಿಯೂ ಮತ್ತೆ ಕೋಲ್ಕತ್ತಾ ಮತ್ತು ನವದೆಹಲಿಗೆ ಭೇಟಿ ನೀಡಿದ್ದರು.

ಐಕಾನಿಕ್ ಫುಟ್ಬಾಲ್ ಆಟಗಾರ ಡಿಯಾಗೋ ಮರಡೋನಾ ಕೂಡ ಭಾರತಕ್ಕೆ 2 ಬಾರಿ ಭೇಟಿ ನೀಡಿದ್ದರು. 2008ರಲ್ಲಿ ಅವರು ಪ್ರದರ್ಶನ ಪಂದ್ಯಕ್ಕಾಗಿ ಕೋಲ್ಕತ್ತಾಗೆ ಭೇಟಿ ನೀಡಿದ್ದರು. 2012ರ ಅಕ್ಟೋಬರ್‍ನಲ್ಲಿ ಭಾರತಕ್ಕೆ 2ನೇ ಬಾರಿ ಭೇಟಿ ನೀಡಿದ್ದ ಅವರು ಕೇರಳದಲ್ಲಿ ಆಯೋಜಿಸಿದ್ದ ಪಂದ್ಯದ ಭಾಗವಾಗಿದ್ದರು.

2022ರ ವಿಶ್ವಕಪ್ ವಿಜೇತ ಲಿಯೋನೆಲ್ ಮೆಸ್ಸಿ ಅವರು ತಮ್ಮ ರಾಷ್ಟ್ರೀಯ ತಂಡ ಅರ್ಜೆಂಟೀನಾದೊಂದಿಗೆ ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಸೌಹಾರ್ದ ಪಂದ್ಯದಲ್ಲಿ ವೆನೆಜುವೆಲಾ ವಿರುದ್ಧ ಆಡಲು ಬಂದಿದ್ದರು.

ಬೇಯರ್ನ್ ಮ್ಯೂನಿಚ್ ಗೋಲ್ಕೀಪಿಂಗ್ ದಂತಕಥೆ ಆಲಿವರ್ ಕಾನ್ 2008ರಲ್ಲಿ ಬೇಯರ್ನ್ ಮ್ಯೂನಿಚ್ ಜೊತೆಗೆ ಭಾರತಕ್ಕೆ ಭೇಟಿ ನೀಡಿದರು. ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಮೋಹನ್ ಬಗಾನ್ ವಿರುದ್ಧ ಕಾನ್ ಅವರು ತಮ್ಮ ಅಂತಿಮ ಪ್ರಶಂಸಾ ಪಂದ್ಯವನ್ನು ಆಡಿದ್ದರು.

ಬ್ರೆಜಿಲ್‌ನಲ್ಲಿ 2014ರ ವಿಶ್ವಕಪ್ ಗೆದ್ದ ಜರ್ಮನಿಯ ತಂಡದ ಅವಿಭಾಜ್ಯ ಅಂಗವಾಗಿದ್ದ ಫಿಲಿಪ್ ಲಾಮ್, ಬಾಸ್ಟಿಯನ್ ಸ್ಕ್ವೈನ್‌ಸ್ಟೈಗರ್, ಥಾಮಸ್ ಮುಲ್ಲರ್, ಟೋನಿ ಕ್ರೂಸ್, ಮ್ಯಾನುಯೆಲ್ ನ್ಯೂಯರ್ ಮತ್ತು ಜರ್ಮನಿಯ ಇತರ ಆಟಗಾರರನ್ನು ಒಳಗೊಂಡ ತಂಡವು 2012ರ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಿತ್ತು. ಈ ಆಟಗಾರರು ಭೈಚುಂಗ್ ಭುಟಿಯಾರ ಪ್ರಶಂಸಾ ಪಂದ್ಯದಲ್ಲಿ ಭಾರತೀಯ ಪುರುಷರ ರಾಷ್ಟ್ರೀಯ ತಂಡದ ವಿರುದ್ಧ ಆಡಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link