ವಿಶ್ವದ ಅತ್ಯಂತ ದುಬಾರಿ Bag ಲಾಂಚ್, ಈ ಬೆಲೆಯಲ್ಲಿ ನೀವು 53 ಆಡಿ / 1060 ಮಾರುತಿ ಕಾರ್ ಖರೀದಿಸಬಹುದು

Sun, 29 Nov 2020-7:59 pm,

ಇಟಾಲಿಯನ್ ಐಷಾರಾಮಿ ಬ್ರಾಂಡ್ ಬೋರಿನಿ ಮಿಲನೇಸಿ ಈ ವ್ಯಾನಿಟಿ ಬ್ಯಾಗ್ 6 ಮಿಲಿಯನ್ ಯುರೋಗಳಷ್ಟು ಬೆಲೆಗೆ ಬಿಡುಗಡೆ ಮಾಡಿದೆ. ಅಂದರೆ ಸುಮಾರು 53 ಕೋಟಿ ರೂಪಾಯಿಗಳು, ಇದು ವಿಶ್ವದ ಅತ್ಯಂತ ದುಬಾರಿ ವ್ಯಾನಿಟಿ ಬ್ಯಾಗ್ ಆಗಿದೆ.

ಈ ವ್ಯಾನಿಟಿ ಬ್ಯಾಗ್ ಬಿಡುಗಡೆ ಮಾಡಿರುವ Boarini Milanesi, ಈ ಬ್ಯಾಗ್ ಮಾರಾಟದಿಂದ ಸಂಗ್ರಹವಾಗುವ ಹಣವನ್ನು ಸಮುದ್ರ ಸ್ವಚ್ಛಗೊಳಿಸಲು ದಾನ ಮಾಡುವುದಾಗಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೇಳಿಕೊಂಡಿದೆ.

ಬೋರಿನಿ ಮಿಲನೆಸಿ ಬಿಡುಗಡೆ ಮಾಡಿರುವ ಈ ಬ್ಯಾಗ್ ಬೆಲೆಯಲ್ಲಿ ನೀವು 53 Audi Q8 ಅಥವಾ 1060 ಮಾರುತಿ ವ್ಯಾಗನ್ R ಖರೀದಿಸಬಹುದು. ಆಡಿ ಕ್ಯೂ8 ಕಾರಿನ ಬೆಲೆ ಸುಮಾರು 1 ಕೋಟಿ ರೂ. ಆಗಿದ್ದು, ವ್ಯಾಗನ್ ಆರ್ ಬೆಲೆ ಸುಮಾರು 5 ಲಕ್ಷಗಳಷ್ಟಾಗಿದೆ.

ಸಮುದ್ರವನ್ನು ಸ್ವಚ್ಛಗೊಳಿಸುವ ಅಭಿಯಾನದ ಅಡಿ ಈ ಬ್ಯಾಗ್ ತಯಾರಿಸಲಾಗಿದೆ. ಬ್ಲೂ ಕಲರ್ ಬೇಸ್ ನ ಈ ಬ್ಯಾಗ್ ತುಂಬಾ ಹೊಳಪಿನಿಂದ ಕೂಡಿದೆ. ಬ್ಯಾಗ್ ನಲ್ಲಿ 130 ಕ್ಯಾರೆಟ್ ವಜ್ರಗಳು ಹಾಗೂ ಬಿಳಿ ಬಂಗಾರದ 10 ಚಿಟ್ಟೆಗಳನ್ನು ಜೋಡಿಸಲಾಗಿದೆ. ಈ ಬ್ಯಾಗ್ ತಯಾರಿಸಲು 1000 ಗಂಟೆ ಕಾಲಾವಕಾಶ ತಗುಲಿದೆ.

ಇದಕ್ಕೂ ಮೊದಲು ಬೋರಿನಿ ಮಿಲನೆಸಿ ಬಿಡುಗಡೆ ಮಾಡಿದ್ದ ಹಾರ್ಟ್ ಆಕಾರದ ಬ್ಯಾಗ್ ಕೂಡ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಬ್ಯಾಗ್ 18 ಕ್ಯಾರೆಟ್ ಚಿನ್ನದಿಂದ ತಯಾರಿಸಲಾಗಿತ್ತು ಹಾಗೂ ಅದರಲ್ಲಿ 4517 ವಜ್ರಗಲಿದ್ದವು. ಈ ಬ್ಯಾಗ್ ನಲ್ಲಿ 105 ಹಳದಿ, 56 ಗುಲಾಬಿ ಹಾಗೂ 4356 ಬಣ್ಣ ರಹಿತ ವಜ್ರಗಳನ್ನು ಅಳವಡಿಸಲಾಗಿತ್ತು. ಈ ಬ್ಯಾಗ್ ಬೆಲೆ 2.37 ಮಿಲಿಯನ್ ಯುರೋ ಅಂದರೆ ಸುಮಾರು 21 ಕೋಟಿ ರೂ.ಗಳಷ್ಟು ಆಗಿತ್ತು. ಈ ಬ್ಯಾಗ್ ತಯಾರಿಸಲು ಒಟ್ಟು 8 ಕಾರ್ಮಿಕರು ಸುಮಾರು 8800 ಗಂಟೆಗೂ ಅಧಿಕ ಕಾಲ ಶ್ರಮಿಸಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link