Photos: IPL Champions: ಚೆನ್ನೈ ಸೂಪರ್ ಕಿಂಗ್ಸ್ ನ ವಿಜಯದ ಕ್ಷಣಗಳು..!
ಚೆನ್ನೈ ತಂಡಕ್ಕೆ ಕೊನೆಯ ಓವರ್ ನಲ್ಲಿ ಎರಡು ಎಸೆತಗಳಿಗೆ 10 ರನ್ ಗಳ ಗೆಲುವಿನ ಅವಶ್ಯಕತೆ ಇತ್ತು, ಈ ಸಂದರ್ಭದಲ್ಲಿ ಆಕ್ರಮಣಕಾರಿ ಆಟವಾಡಿದ ರವೀಂದ್ರ ಜಡೇಜಾ ಸತತವಾಗಿ ಒಂದು ಸಿಕ್ಸರ್ ಹಾಗೂ ಬೌಂಡರಿ ಬಾರಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐದನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸುವಲ್ಲಿ ನೆರವಾದರು.
ನಂತರ ಬಂದಂತಹ ಶಿವಂ ದುಬೆ 21 ಎಸೆತಗಳಲ್ಲಿ 32 ರನ್ ಗಳಿಸುವ ಮೂಲಕ ಅಜೇಯರಾಗಿ ಉಳಿದರೆ, ಅಜಿಂಕ್ಯಾ ರಹಾನೆ ಕೇವಲ 13 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಎರಡು ಬೌಂಡರಿ ಬಾರಿಸುವ ಮೂಲಕ 27 ರನ್ ಗಳಿಸಿದರು. ಇನ್ನೂ ಕೊನೆಯ ಐಪಿಎಲ್ ಪಂದ್ಯವನ್ನು ಆಡಿದ ಅಂಬಟಿ ರಾಯಡು ಕೇವಲ ಎಂಟು ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಎರಡು ಸಿಕ್ಸರ್ ಗಳನ್ನು ಬಾರಿಸುವ ಮೂಲಕ ಪಂದ್ಯವನ್ನು ಚೆನ್ನೈ ತಂಡದ ಪರ ವಾಲುವಂತೆ ಮಾಡಿದರು.
ಮಳೆಯಿಂದಾಗಿ 15 ಓವರ್ ಗಳಲ್ಲಿ 171 ರನ್ ಗಳ ಗೆಲುವಿನ ಗುರಿಯನ್ನು ಚೆನ್ನೈಗೆ ನೀಡಲಾಯಿತು. ನಂತರ ಗೆಲುವಿನ ಗುರಿಯನ್ನು ಬೆನ್ನತ್ತಿದ ಚೆನ್ನೈ ತಂಡವು ಭರ್ಜರಿ ಆರಂಭವನ್ನೇ ಮಾಡಿತು.ಚೆನ್ನೈ ತಂಡದ ಆರಂಭಿಕ ಆಟಗಾರರಾದ ಋತುರಾಜ್ ಗಾಯಕವಾಡ್ ಕೇವಲ 16 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರೆ ಇನ್ನೊಂದೆಡೆಗೆ ಡೆವನ್ ಕಾನ್ವೆ 25 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ನೆರವಿನೊಂದಿಗೆ 47 ರನ್ ಗಳಿಸಿದರು. ಆ ಮೂಲಕ ಮೊದಲ ವಿಕೆಟ್ ಗೆ ಚೆನ್ನೈ ತಂಡವು ಕೇವಲ 6.3 ಓವರ್ ಗಳಲ್ಲಿ 74 ಗಳಿಸಿತು.
ಇನ್ನೂ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಸಾಯಿ ಸುದರ್ಶನ್ ಕೇವಲ 47 ಎಸೆತಗಳಲ್ಲಿ ಆರು ಭರ್ಜರಿ ಸಿಕ್ಸರ್ ಹಾಗೂ ಎಂಟು ಬೌಂಡರಿಗಳ ನೆರವಿನೊಂದಿಗೆ 96 ರನ್ ಗಳಿಸಿ ಕೇವಲ ನಾಲ್ಕು ರನ್ ಗಳಿಂದ ಶತಕ ವಂಚಿತರಾದರು.ಇನ್ನೂ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ 21 ರನ್ ಗಳಿಸುವ ಮೂಲಕ ತಂಡವನ್ನು 200 ರ ಗಡಿ ದಾಟುವಲ್ಲಿ ನೆರವಾದರು.
ಟಾಸ್ ಗೆದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಇದೆ ವೇಳೆ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಗುಜರಾತ್ ಟೈಟಾನ್ಸ್ ತಂಡವು ಕೇವಲ ನಾಲ್ಕು ವಿಕೆಟ್ ನಷ್ಟಕ್ಕೆ 20 ಓವರ್ ಗಳಲ್ಲಿ 214 ರನ್ ಗಳನ್ನು ಗಳಿಸಿತು. ಗುಜರಾತ್ ತಂಡದ ಪರವಾಗಿ ಆರಂಭಿಕ ಆಟಗಾರ ವ್ರುದ್ದಿಮಾನ್ ಸಹಾ ಕೇವಲ 39 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನೊಂದಿಗೆ 54 ರನ್ ಗಳಿಸಿದರು. ಈ ಸಂದರ್ಭದಲ್ಲಿ ಇವರಿಗೆ ಸಾಥ್ ನೀಡಿದ ಶುಬ್ಮನ್ ಗಿಲ್ 39 ರನ್ ಗಳಿಸಿದರು.