Pineapple Benefits: ಹುಳಿ ಸಿಹಿ ಹೊಂದಿರುವ ಅನಾನಸ್ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಸಹಕಾರಿ!
ಇದು ಜೀವಸತ್ವಗಳು, ಕಬ್ಬಿಣ, ಕ್ಯಾಲ್ಸಿಯಂ, ಫೈಬರ್, ಆಂಟಿ-ಆಕ್ಸಿಡೆಂಟ್, ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ
ಅನಾನಸ್ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಸಿ ಅಂಶ ಇರುವುದರಿಂದ ಚರ್ಮದ ಆರೋಗ್ಯಕ್ಕೆ ಸಹಕಾರಿಯಾಗಿದೆ
ಅನಾನಸ್ ಹಣ್ಣಿನಲ್ಲಿ ಬ್ರೋಮೆಲಿನ್ ಕಿಣ್ವ ಇರುವುದರಿಂದ ಇದು ಜೀರ್ಣಕ್ರಿಯೆಗೆ ಉಪಯುಕ್ತವಾಗಿದೆ
ಮೂತ್ರ ಕಟ್ಟುವುದು, ಪಿತ್ತಕೋಶ ಊದಿಕೊಳ್ಳುವುದು, ಕಣ್ಣಿನ ಸುತ್ತಮುತ್ತ ಊದಿಕೊಳ್ಳುವುದು ಮುಂತಾದ ತೊಂದರೆಗಳಿಗೆ ತಾಜಾ ಅನಾನಸ್ ಉತ್ತಮ ಔಷಧಿಯಾಗಿದೆ
ಸಂಧಿವಾತದಿಂದ ಆಗುವ ಊತ ಕಡಿಮೆಯಾಗುತ್ತದೆ
ಅನಾನಸ್ ಹಣ್ಣಿನಲ್ಲಿ ಮೂಳೆಗಳನ್ನು ಬಲಪಡಿಸಲು ಅಗತ್ಯವಾದ ಕ್ಯಾಲ್ಸಿಯಂ ಮತ್ತು ಮ್ಯಾಂಗನೀಸ್ ಅಂಶ ಹೆಚ್ಚು ಇರುವುದರಿಂದ ಮೂಳೆ ಆರೋಗ್ಯಕ್ಕೆ ಉತ್ತಮ ಔಷಧಿಯಾಗಿದೆ