ಪಿತೃ ಪಕ್ಷದ ಈ ಅಮಾವಾಸ್ಯೆಗಿದೆ ವಿಶೇಷ ಮಹತ್ವ: ಶನಿದೇವನ ಆಶೀರ್ವಾದಕ್ಕಾಗಿ ಇಂದು ಈ ಕೆಲಸ ಮಾಡಿ
ಪಿತೃ ಪಕ್ಷದಲ್ಲಿ ಬರುವ ಅಮವಾಸ್ಯೆ ದಿನಾಂಕವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಇದನ್ನು ಸರ್ವ ಪಿತೃ ಅಮಾವಾಸ್ಯೆ ಎಂದೂ ಕರೆಯುತ್ತಾರೆ.
ಇಂದು ಮಹಾಲಯ ಅಮಾವಾಸ್ಯೆ, ಶನಿವಾರದಂದು ಅಮಾವಾಸ್ಯೆ ತಿಥಿ ಬಂದರೆ ಅದನ್ನು ಶನಿಶ್ಚರಿ ಅಮಾವಾಸ್ಯೆ ಎಂತಲೂ ಕರೆಯುತ್ತಾರೆ.
ಪಿತೃ ಪಕ್ಷದಲ್ಲಿ ಬರುವ ಈ ಅಮಾವಾಸ್ಯೆಯ ದಿನ ತರ್ಪಣ ಬಿಡುವುದು, ಪಿಂಡದಾನ ಮಾಡುವುದರಿಂದ ಪಿತೃ ದೋಷ ನಿವಾರಣೆಯಾಗುತ್ತದೆ.
2023ರ ಸರ್ವ ಪಿತೃ ಅಮಾವಾಸ್ಯೆಯು 13 ಅಕ್ಟೋಬರ್ ರಂದು ರಾತ್ರಿ 09:50 ಕ್ಕೆ ಪ್ರಾರಂಭವಾಗಿ ಮರುದಿನ ಅಕ್ಟೋಬರ್ 14 ರಂದು ರಾತ್ರಿ 11:24 ಕ್ಕೆ ಕೊನೆಗೊಳ್ಳುತ್ತದೆ. ಈ ದಿನದಂದು ಶುಭ ಮುಹೂರ್ತದಲ್ಲಿ ಪೂಜಿಸುವುದರಿಂದ ಪೂರ್ವಜರ ಹಾಗೂ ಶನಿದೇವರ ಆಶೀರ್ವಾದ ಪಡೆಯಬಹುದು ಎಂದು ನಂಬಲಾಗಿದೆ.
ಶನಿ ಅಮಾವಾಸ್ಯೆಯ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡಿ. ತಾಮ್ರದ ಪಾತ್ರೆಯಲ್ಲಿ ಪವಿತ್ರ ನೀರನ್ನು ತೆಗೆದುಕೊಂಡು ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ.
ಇಂದು ಮಹಾಲಯ ಅಮಾವಾಸ್ಯೆ, ಶನಿ ಅಮಾವಾಸ್ಯೆ ದಿನ ನಿಮ್ಮ ಪಿತೃಗಳಿಗೆ ತರ್ಪಣ ನೀಡಿ, ಪಿಂಡ ದಾನ ಮಾಡಿ.
ಶನಿ ಸಾಡೇ ಸಾತಿ, ಶನಿ ಧೈಯಾ ಪ್ರಭಾವವನ್ನು ಎದುರಿಸುತ್ತಿರುವವರು ಶನಿಶ್ಚರಿ ಅಮಾವಾಸ್ಯೆಯ ಈ ದಿನ ತಪ್ಪದೇ ಅರಳಿ ಮರಕ್ಕೆ ಪೂಜೆ ಮಾಡಿ.
ಶನಿ ಅಮಾವಾಸ್ಯೆಯ ದಿನದಂದು ಶನಿ ದೇವರಿಗೆ ಸಾಸಿವೆ ಎಣ್ಣೆ ಮತ್ತು ಕಪ್ಪು ಎಳ್ಳನ್ನು ಅರ್ಪಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.
ಸರ್ವಪಿತೃ ಅಮಾವಾಸ್ಯೆಯ ಈ ದಿನ ಶನಿಶ್ಚರಿ ಅಮಾವಾಸ್ಯೆಯೂ ಹೌದು. ಇಂದು ಶನಿ ಚಾಲೀಸವನ್ನು ಪಠಿಸುವುದರಿಂದ ಶನಿದೇವನ ಆಶೀರ್ವಾದ ಪಡೆಯಬಹುದು.
ಇಂದು ಅಮಾವಾಸ್ಯೆಯ ದಿನ ಪಿತೃಗಳಿಗೆ ಪಿಂಡದಾನ ಮಾಡಿ ಉಪವಾಸ ಆಚರಿಸಿ, ಬಡವರು ಮತ್ತು ನಿರ್ಗತಿಕರಿಗೆ ನಿಮ್ಮ ಕೈಲಾದದ್ದನ್ನು ದಾನ ಮಾಡಿ. ಈ ರೀತಿ ಮಾಡುವುದರಿಂದ ನಿಮ್ಮ ಪೂರ್ವಜರು ಸಂತುಷ್ಟಗೊಳ್ಳುವುದರ ಜೊತೆಗೆ, ಶನಿ ಮಹಾತ್ಮನೂ ಸಂತೋಷಗೊಳ್ಳುತ್ತಾನೆ ಎಂದು ನಂಬಲಾಗಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.