ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ , ಧನ ಧಾನ್ಯಕ್ಕೆ ಬಾರದು ಎಳ್ಳಷ್ಟೂ ಕೊರತೆ ! ಮನೆಯಲ್ಲಿ ತುಂಬಿರುವುದು ಸುಖ ಸಮೃದ್ದಿ

Tue, 24 Sep 2024-6:19 pm,

ಮನೆಯಲ್ಲಿ ನವಿಲು ಗರಿಯನ್ನು ಇಡುವುದರಿಂದ ಧನಾತ್ಮಕ ಶಕ್ತಿ ನೆಲೆಸುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು. ನವಿಲು ಗರಿಯೊಂದಿಗೆ ಲಕ್ಷ್ಮೀ ಕೂಡಾ ಮನೆಯಲ್ಲಿ ನೆಲೆಸುತ್ತಾಳೆ ಎನ್ನುವುದು ನಂಬಿಕೆ.  

ನವಿಲು ಗರಿ ನೋಡುವುದಕ್ಕೆ ಎಷ್ಟು ಸುಂದರವಾಗಿದೆಯೋ,ಅದರ ಪ್ರಭಾವ ಕೂಡಾ ಅಷ್ಟೇ ದೊಡ್ಡದು.ಮನೆಯಲ್ಲಿ ಕೊಳಲು ಮತ್ತು ನವಿಲು ಗರಿಯನ್ನು ಒಟ್ಟಿಗೆ ಇಡುವುದರಿಂದ ಜಗಳ,ಮನಸ್ತಾಪ ನಡೆಯುವುದೇ ಇಲ್ಲ. 

ಮಲಗುವ ಕೋಣೆಯಲ್ಲಿ ನವಿಲು ಗರಿಗಳನ್ನು ಇಡಬೇಕು. ಹೀಗೆ ಮಾಡುವುದರಿಂದ ಪತಿ-ಪತ್ನಿಯರ  ಸಂಬಂಧದಲ್ಲಿ ಮಧುರತೆ ಬರುತ್ತದೆ.ವೈವಾಹಿಕ ಜೀವನದಲ್ಲಿ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ.  

ಗ್ರಹ ದೋಷಗಳ ಅಶುಭ ಪರಿಣಾಮಗಳನ್ನು ತಪ್ಪಿಸಲು,ಗ್ರಹ ಮಂತ್ರವನ್ನು 21 ಬಾರಿ ಜಪಿಸಬೇಕು.ಇದಾದ ನಂತರ ನವಿಲು ಗರಿಗೆ ನೀರು ಚಿಮುಕಿಸಿ ಶುಭ ಸ್ಥಳದಲ್ಲಿ ಇಡುವುದರಿಂದ ಗ್ರಹಗಳ ಅಶುಭ ನಿವಾರಣೆಯಾಗುತ್ತದೆ.ಮನೆಯೊಳಗೆ ಸಂಪತ್ತು ಹರಿದು ಬರುತ್ತದೆ.   

ನವಿಲು ಗರಿಗಳನ್ನು ಮನೆಯಲ್ಲಿ ಇಡುವಾಗ ಯಾವಾಗಲೂ ಎಲ್ಲರಿಗೂ ಕಾಣುವ ಸ್ಥಳದಲ್ಲಿ ಇಡಬೇಕು. ಮನೆಯಲ್ಲಿಟ್ಟ ನವಿಲುಗರಿ ಎಲ್ಲರ ಕಣ್ಣಿಗೆ ಬಿದ್ದರೆ ಅದರ ಪರಿಣಾಮ ಹೆಚ್ಚು.     

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ   

ZEENEWS TRENDING STORIES

By continuing to use the site, you agree to the use of cookies. You can find out more by Tapping this link