Mussoorie Tour: ಚಾರಣಪ್ರಿಯರೇ.. ಪ್ರವಾಸದ ಪ್ಲಾನ್ ಹಾಕಿದ್ರೆ ಈ ಸ್ಥಳಗಳು ಬೆಸ್ಟ್
ಇದೊಂದು ಮಾಲ್ ರೋಡ್. ಮಸ್ಸೂರಿಯ ಹೃದಯಭಾಗದಲ್ಲಿದೆ. ಎರಡೂ ಕಡೆ ಹಲವು ಬಗೆಯ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಈ ರಸ್ತೆಯಲ್ಲಿ ರಾತ್ರಿ ಸಮಯದಲ್ಲಿ ಸಾಕಷ್ಟು ಚಟುವಟಿಕೆಗಳು ನಡೆಯುತ್ತದೆ, ಹೀಗಾಗಿ ಆ ಸಮಯದಲ್ಲಿ ಇಲ್ಲಿ ತಿರುಗಾಡುವುದು ತುಂಬಾ ಸಂತೋಷಕರವಾಗಿರುತ್ತದೆ.
ಜಬರ್ಖೇತ್ ನೇಚರ್ ರಿಸರ್ವ್ ಬಗ್ಗೆ ನೀವು ಅಷ್ಟೇನೂ ಕೇಳಿಲ್ಲ ಎಂದರೆ ಈ ಸುದ್ದಿ ಓದಿ. ಇದು ಮಸ್ಸೂರಿಯಿಂದ 8 ಕಿ.ಮೀ ದೂರದಲ್ಲಿದೆ. ನೀವು ಇಲ್ಲಿಗೆ ಬಂದರೆ ಪ್ರಕೃತಿಯ ರಮ್ಯತೆಯನ್ನು ಅನುಭವಿಸಬಹುದು. ನಿಶ್ಶಬ್ದವಾಗಿರುವ ಪರಿಸರ ಇದಾಗಿದ್ದು, ಹವಾಮಾನ ಉತ್ತಮವಾಗಿರುತ್ತದೆ. ಹಿಮದಿಂದ ಆವೃತವಾದ ಪ್ರದೇಶ ಇದಾಗಿದ್ದು, ಹಿಮಾಲಯದಂತೆ ಭಾಸವಾಗುತ್ತದೆ. ಇಲ್ಲಿ ನೀವು ವಿವಿಧ ರೀತಿಯ ಪ್ರಾಣಿಗಳು ಮತ್ತು ಪಕ್ಷಿಗಳನ್ನು ಸುಲಭವಾಗಿ ನೋಡಬಹುದು.
ಸೈಂಜಿ ಗ್ರಾಮವನ್ನು ಕಾರ್ನ್ ವಿಲೇಜ್ ಎಂದೂ ಕರೆಯುತ್ತಾರೆ. ಈ ಗ್ರಾಮವು ಮಸ್ಸೂರಿಯಿಂದ ಸ್ವಲ್ಪ ದೂರದಲ್ಲಿದೆ. ಈ ಗ್ರಾಮದ ವಿಶೇಷವೆಂದರೆ ಇಲ್ಲಿನ ಮನೆಗಳೆಲ್ಲ ಮೆಕ್ಕೆಜೋಳದಿಂದ ಕಂಗೊಳಿಸುತ್ತಿವೆ. ಜೋಳ ಇಲ್ಲಿನ ಮುಖ್ಯ ಆಹಾರ. ಇಲ್ಲಿನ ಮನೆಗಳು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತವೆ.
ನೀವು ಚಾರಣ ಮಾಡಲು ಬಯಸಿದರೆ, ನಾಗ್ ಟಿಬ್ಬಾ ಟ್ರೆಕ್ ಉತ್ತಮ ಆಯ್ಕೆ, ಇದು ಮಸ್ಸೂರಿಯ ಅತ್ಯಂತ ಕಠಿಣವಾದ ಚಾರಣಗಳಲ್ಲಿ ಒಂದಾಗಿದೆ. ಈ ಚಾರಣವನ್ನು ಪೂರ್ಣಗೊಳಿಸಲು ನಿಮಗೆ ಎರಡು ದಿನಗಳು ಬೇಕಾಗುತ್ತದೆ. ಚಾರಣವನ್ನು ಪೂರ್ಣಗೊಳಿಸಿದ ನಂತರ ನೀವು ನೋಡುವ ಪ್ರಕೃತಿಯ ಸೌಂದರ್ಯ ನಿಮ್ಮ ಎಲ್ಲಾ ಆಯಾಸವನ್ನು ಮರೆಮಾಡುತ್ತದೆ.
ಲ್ಯಾಂಡರ್ ಎಂಬ ಪ್ರದೇಶ ಮಸ್ಸೂರಿಯಿಂದ 8 ಕಿಮೀ ದೂರದಲ್ಲಿದೆ. ಲ್ಯಾಂಡರ್ ಬಗ್ಗೆಯೂ ಕೆಲವೇ ಜನರಿಗೆ ತಿಳಿದಿದೆ. ಅದೊಂದು ಕಂಟೋನ್ಮೆಂಟ್ ಪ್ರದೇಶ. ಇಲ್ಲಿನ ಒಟ್ಟು ಜನಸಂಖ್ಯೆ 4 ಸಾವಿರಕ್ಕಿಂತ ಕಡಿಮೆ. ನೀವು ಶಾಂತವಾದ ಸ್ಥಳಕ್ಕೆ ಹೋಗಲು ಬಯಸಿದರೆ, ಇದು ಅತ್ಯುತ್ತಮ ಆಯ್ಕೆಯಾಗಿದೆ. ಖ್ಯಾತ ಬರಹಗಾರ ರಸ್ಕಿನ್ ಬಾಂಡ್ ಕೂಡ ಲ್ಯಾಂಡೂರ್‌ನಲ್ಲಿ ಮನೆಯನ್ನು ಹೊಂದಿದ್ದಾರೆ. ಇಲ್ಲಿ ನೀವು ಸುಲಭವಾಗಿ ಬಾಡಿಗೆಗೆ ಹೋಮ್‌ಸ್ಟೇಗಳನ್ನು ಕಾಣಬಹುದು.
ದಟ್ಟ ಅರಣ್ಯಗಳ ನಡುವೆ ಇರುವ ಈ ಜಲಪಾತದ ಸೌಂದರ್ಯವನ್ನು ಇಲ್ಲಿ ಕಣ್ತುಂಬಿಕೊಳ್ಳಲಾಗುತ್ತದೆ. ಈ ಜಲಪಾತವು ಮಸ್ಸೂರಿಯಿಂದ ಬಾಲಾ ಹಿಸಾರ್‌ಗೆ ಹೋಗುವ ಮಾರ್ಗದಲ್ಲಿದೆ. ಇದು ಕೇವಲ 7 ಕಿಮೀ ದೂರದಲ್ಲಿದೆ. ನೀವು ಈ ಜಲಪಾತದಲ್ಲಿ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಮಾತ್ರ ಎಂಜಾಯ್ ಮಾಡಬಹುದು.