ಮನೆಯ ಸಮೀಪ ಈ 5 ಮರಗಳಿದ್ದರೆ ಹಾವಿನ ಎಂಟ್ರಿ ಗ್ಯಾರಂಟಿ !ವಿಷಕಾರಿ ಹಾವುಗಳನ್ನು ಆಕರ್ಷಿಸುತ್ತವೆ ಈ ಗಿಡಗಳು
ಹುಳಿ ಹಣ್ಣುಗಳನ್ನು ಹೊಂದಿರುವ ಮರಗಳ ಕಡೆಗೆ ಹಾವುಗಳು ಆಕರ್ಷಿತವಾಗುತ್ತವೆ. ಏಕೆಂದರೆ ಹುಳಿ ಹಣ್ಣುಗಳನ್ನು ತಿನ್ನಲು ಕೀಟಗಳು ಮತ್ತು ಪಕ್ಷಿಗಳು ಆ ಮರಗಳ ಬಳಿ ಸೇರುತ್ತವೆ.ಹಾವುಗಳು ಕೂಡಾ ಆ ಕೀಟಗಳನ್ನು ತಿನ್ನಲು ಮರಗಳ ಬಳಿ ಕಾಯುತ್ತಿರುತ್ತವೆ.
ಮಲ್ಲಿಗೆ ಬಳ್ಳಿಯನ್ನು ಹಾವುಗಳ ನೆಚ್ಚಿನ ಆಶ್ರಯವೆಂದು ಪರಿಗಣಿಸಲಾಗಿದೆ. ಹಾವುಗಳು ಈ ಬಳ್ಳಿಯ ದಟ್ಟವಾದ ಎಲೆಗಳ ಅಡಿಯಲ್ಲಿ ಅಡಗಿಕೊಳ್ಳಲು ಸುರಕ್ಷಿತ ಸ್ಥಳವನ್ನು ಕಂಡುಕೊಳ್ಳುತ್ತವೆ.ಮಲ್ಲಿಗೆಯ ಸುವಾಸನೆಯು ಯಾವಾಗಲೂ ಹಾವುಗಳನ್ನು ತನ್ನತ್ತ ಆಕರ್ಷಿಸುತ್ತದೆ.
ಈ ಮರದ ಎಲೆಗಳು ತುಂಬಾ ದಟ್ಟವಾಗಿರುತ್ತವೆ.ಈ ಮರದ ಎಲೆಗಳ ಅಡಿಯಲ್ಲಿ ಹಾವುಗಳು ಅವಿತುಕೊಂಡು ತಮ್ಮ ಆಹಾರವನ್ನು ಬೇಟೆಯಾಡುತ್ತವೆ.
ಶ್ರೀಗಂಧದ ಮರವು ವಿಷಕಾರಿ ಹಾವುಗಳನ್ನು ಹೆಚ್ಚು ಆಕರ್ಷಿಸುತ್ತದೆ.ಈ ಮರದ ಸುಗಂಧದಿಂದಾಗಿ ಅದರ ಮೇಲೆ ಹೇರಳವಾಗಿ ಪಕ್ಷಿಗಳು ಮತ್ತು ಇತರ ಕೀಟಗಳು ಕುಳಿತಿರುತ್ತವೆ. ಆ ಪಕ್ಷಿಗಳು ಮತ್ತು ಕೀಟಗಳನ್ನು ಬೇಟೆಯಾಡಲು, ವಿಷಕಾರಿ ಹಾವುಗಳು ಶ್ರೀಗಂಧದ ಮರಗಳ ಬಳಿ ಗುಂಪು ಗುಂಪಾಗಿ ಸೇರುತ್ತವೆ.
ದೇವದಾರು ಮರದ ಕಡೆಗೆ ಹಾವುಗಳು ಆಕರ್ಷಿತವಾಗುತ್ತವೆ. ಇದು ಸುಂದರ ಕಂಪು ಸೂಸುವ ಮರ. ಈ ಮರದಲ್ಲಿ ಕೂಡಾ ಕೀಟಗಳ ವಾಸ ಜಾಸ್ತಿ. ಪರಿಣಾಮ ಕೀಟಗಳನ್ನು ಅರಸಿಕೊಂಡು ಹಾವುಗಳು ಕೂಡಾ ಬಂದು ಸೇರುತ್ತವೆ.