ಕಣ್ಣಿನ ಆರೋಗ್ಯಕ್ಕೆ ಸಂಜೀವನಿ ಈ ಕೆಂಪು ರಸಭರಿತ ಹಣ್ಣು... ವರ್ಷದಲ್ಲಿ ಒಂದೇ ಬಾರಿ ತಿಂದರೂ ಜೀವಮಾನವಿಡೀ ಕನ್ನಡಕ ಬರೋದೇ ಇಲ್ಲ! ಮಧುಮೇಹಕ್ಕಂತೂ ದಿವೌಷಧಿ

Sat, 26 Oct 2024-7:58 pm,

ಪ್ಲಮ್ ಹಣ್ಣು ಸಿಹಿ ಮತ್ತು ಹುಳಿ ರುಚಿಯಲ್ಲಿರುತ್ತದೆ. ಟೊಮೆಟೊದಂತೆ ಕಾಣುವ ಈ ಹಣ್ಣು ಒಳಗಿನಿಂದ ರಸಭರಿತವಾಗಿರುತ್ತದೆ. ಕೆಂಪು ಮತ್ತು ನೇರಳೆ ಮುಂತಾದ ಬಣ್ಣಗಳನ್ನು ಹೊಂದಿರುವ ಈ ಹಣ್ಣನ್ನು ಪ್ಲಮ್ ಎಂದು ಕರೆಯಲಾಗುತ್ತದೆ.   

ಪ್ಲಮ್ ಹಣ್ಣು ಮಲಬದ್ಧತೆ ಮತ್ತು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ನೋಡಲು ಕೆಂಪಾಗಿ ಕಂಡರೂ ರುಚಿಯಲ್ಲಿ ಸ್ವಲ್ಪ ಹುಳಿಯಾಗಿರುತ್ತದೆ. ಇದರ ಸೇವನೆಯಿಂದ ದೇಹಕ್ಕೆ ಹತ್ತಾರು ಪ್ರಯೋಜನಗಳಿವೆ. 

ಪ್ಲಮ್ ಹಣ್ಣು ಕಣ್ಣಿನ ಆರೋಗ್ಯಕ್ಕೆ ಪ್ರಯೋಜನಕಾರಿ. ಇದು ಫೈಬರ್ ಮತ್ತು ವಿಟಮಿನ್ ಎ ಸಮೃದ್ಧವಾಗಿದ್ದು, ರೆಟಿನಾವನ್ನು ಆರೋಗ್ಯಕರವಾಗಿಡುತ್ತದೆ. ಪ್ಲಮ್​ ಯುವಿ ಕಿರಣಗಳಿಂದ ಉಂಟಾಗುವ ಹಾನಿಯಿಂದ ಕಣ್ಣುಗಳನ್ನು ರಕ್ಷಿಸಿ ಕನ್ನಡಕ ಬರದಂತೆ ತಡೆಯುತ್ತದೆ.  

ಪ್ಲಮ್ ಹಣ್ಣು ಬೊಜ್ಜು ಕಡಿಮೆ ಮಾಡಲು ಸಹಕಾರಿ. ಕಡಿಮೆ ಕ್ಯಾಲೊರಿ ಕಂಡುಬರುವ ಕಾರಣದಿಂದಾಗಿ, ತೂಕವನ್ನು ನಿಯಂತ್ರಿಸುವಲ್ಲಿ ಇದು ಸಹಾಯಕವಾಗಿದೆ. 

ಫೈಬರ್‌ ಸಮೃದ್ಧವಾಗಿರುವ ಪ್ಲಮ್ ಹಣ್ಣು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಇದು ಅತಿಯಾದ ತೂಕವನ್ನು ಕಡಿಮೆ ಮಾಡಲು ಪ್ರಯೋಜನಕಾರಿ. ಇದನ್ನು ಸೇವಿಸುವುದರಿಂದ ಬೊಜ್ಜು ಕರಗಿಸಬಹುದಾಗಿದೆ. 

ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುವಲ್ಲಿ ಪ್ಲಮ್ ಸಹಕಾರಿ. ಇದರ ಸೇವನೆಯಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು. ಅಧಿಕ ರಕ್ತದೊತ್ತಡವು ರಕ್ತನಾಳಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ, ಇದು ಹೃದಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.   

ಪ್ಲಮ್ ಹಣ್ಣು ಅಪಧಮನಿಕಾಠಿಣ್ಯವನ್ನು ತಡೆಗಟ್ಟುವಲ್ಲಿ ಸಹಾಯಕವಾಗಿವೆ. ಇದು ಹಾರ್ಟ್‌ ಬ್ಲಾಕೇಜ್‌ನ್ನು ತಡೆದು ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತಿದೆ. ರಕ್ತದ ಸರಾಗ ಹರಿವಿಗೆ ಸಹಕಾರಿಯಾಗಿದೆ.  

ಪ್ಲಮ್ ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ. ಇದರಿಂದಾಗಿ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆ ಬರುವುದಿಲ್ಲ. 

ಮಲಬದ್ಧತೆಯಿಂದ ಬಳಲುತ್ತಿರುವ ಜನರು ಒಣಗಿದ ಪ್ಲಮ್ ಅನ್ನು ತಿನ್ನಲು ಸಲಹೆ ನೀಡಲಾಗುತ್ತದೆ. ಏಕೆಂದರೆ ಇದು ಫೀನಾಲಿಕ್ ಅಂಶವನ್ನು ಹೊಂದಿರುತ್ತದೆ ಅದು ಕರುಳಿನ ಚಲನೆಯಲ್ಲಿನ ಸಮಸ್ಯೆಯನ್ನು ನಿವಾರಿಸುತ್ತದೆ.

ಮಧುಮೇಹ ರೋಗಿಗಳಾಗಿದ್ದರೆ ಪ್ಲಮ್‌ ಸೇವನೆ ತಪ್ಪದೇ ಮಾಡಬೇಕು. ಇದರಲ್ಲಿರುವ ಜೈವಿಕ ಸಕ್ರಿಯ ಅಂಶಗಳು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಮಧುಮೇಹ ಬರದಂತೆಯೂ ತಡೆಯಬಹುದು. 

ಒಣ ಪ್ಲಮ್ ಸೇವನೆಯು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ನಿಯಮಿತ ಸೇವನೆಯಿಂದ, ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಡಿಮೆ ಮಾಡಬಹುದು. ‌

ಪ್ಲಮ್ ಹಣ್ಣು ಫೈಬರ್ನಲ್ಲಿ ಸಮೃದ್ಧವಾಗಿದೆ, ಇದರಿಂದಾಗಿ ಇದು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link