US ನಲ್ಲಿ Modi Magic, ವಂದೇ ಮಾತರಂ, ಭಾರತ್ ಮಾತಾ ಕೀ ಜೈ ಜಯಘೋಷ

Sat, 25 Sep 2021-10:26 pm,

1. ಪ್ರಧಾನಿ ಮೋದಿಗೆ ಭಾರಿ ಸ್ವಾಗತ - ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಯಾರ್ಕ್ ತಲುಪಿದ್ದಾರೆ, ಅವರು ಇಲ್ಲಿಗೆ ತಲುಪುತ್ತಿದ್ದಂತೆ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಪಿಎಂ ಮೋದಿ ತಂಗಿರುವ ಹೋಟೆಲ್‌ನ ಹೊರಗೆ ಭಾರತೀಯ ಮೂಲದ ಜನರ ದೊಡ್ಡ ಗುಂಪು  ಪ್ರಧಾನಿ ಮೋದಿಯವರನ್ನು ಸ್ವಾಗತಿಸಲು 'ವಂದೇ ಮಾತರಂ' ಮತ್ತು 'ಭಾರತ್ ಮಾತಾ ಕಿ ಜೈ' ಘೋಷಣೆಗಳನ್ನು  ಮೊಳಗಿಸಿದ್ದಾರೆ. (ಚಿತ್ರಕೃಪೆ- ANI)

2. ಅಮೇರಿಕಾದ ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಅವರನ್ನು ಭೇಟಿಯಾದ ಪ್ರಧಾನಿ - ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿಯವರನ್ನು ವಾಷಿಂಗ್ಟನ್‌ನಲ್ಲಿ ಅದ್ದೂರಿಯಾಗಿ  ಸ್ವಾಗತಿಸಲಾಗಿದೆ. ಅಲ್ಲಿ ಅವರು ಅಧ್ಯಕ್ಷ ಜೋ ಬಿಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಭೇಟಿಯಾಗಿದ್ದಾರೆ. (ಚಿತ್ರಕೃಪೆ- ANI)

3. ಬಿಡೆನ್ ಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ - ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ನಡೆದ ದ್ವಿಪಕ್ಷೀಯ ಶೃಂಗಸಭೆ ತುಂಬಾ ಮಹತ್ವದ್ದಾಗಿತ್ತು ಎಂದು ಹೇಳಿದ್ದಾರೆ ಮತ್ತು ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ನೀಡಿರುವ ಸ್ವಾಗತಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಈ ವರ್ಷದ ಜನವರಿಯಲ್ಲಿ ಬಿಡೆನ್ ಯುಎಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಉಭಯ ನಾಯಕರ ನಡುವಿನ ಮೊದಲ ಭೇಟಿ ಇದಾಗಿದೆ. (ಚಿತ್ರಕೃಪೆ- ANI)  

4. ಪ್ರಧಾನಿ ನರಂದ್ರ ಮೋದಿ ಅವರ 7ನೇ ಅಮೇರಿಕ ಭೇಟಿ ಇದಾಗಿದೆ - 2014 ರಲ್ಲಿ ಅಧಿಕಾರ ಸ್ವೀಕರಿಸಿದ ನಂತರ 7 ನೇ ಅಮೇರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, "ಈ ದಶಕವನ್ನು ಉತ್ತಮವಾಗಿಸಲು ನಿಮ್ಮ ನಾಯಕತ್ವವು ಖಂಡಿತವಾಗಿಯೂ ಪ್ರಮುಖ ಪಾತ್ರ ವಹಿಸುತ್ತದೆ" ಎಂದು ಯುಎಸ್ ಅಧ್ಯಕ್ಷ ಬಿಡೆನ್ ಅವರಿಗೆ ಹೇಳಿದ್ದಾರೆ. ಭಾರತ ಮತ್ತು ಅಮೆರಿಕ ನಡುವಿನ ಸ್ನೇಹವನ್ನು ಇದು ಇನ್ನಷ್ಟು ಬಲಪಡಿಸಲಿದೆ (ಚಿತ್ರಕೃಪೆ- ANI)

5. ಅಮೇರಿಕಾ ಹಾಗೂ ಅಮೆರಿಕಾದ ಸಂಬಂಧಗಳು ಬಲವಾಗಿವೆ - ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, 'ಅಧ್ಯಕ್ಷ ಜೋ ಬಿಡೆನ್ ಗಾಂಧೀಜಿಯವರ ಜನ್ಮ ದಿನಾಚರಣೆಯನ್ನು ಉಲ್ಲೇಖಿಸಿದ್ದಾರೆ. ಗಾಂಧೀಜಿ ಟ್ರಸ್ಟೀಶಿಪ್ ಬಗ್ಗೆ ಮಾತನಾಡಿದ್ದಾರೆ. ಅವರ ಈ ಪರಿಕಲ್ಪನೆಯು ನಮ್ಮ ಜಗತ್ತಿಗೆ ಬಹಳ ಮುಖ್ಯವಾಗಿದೆ. ಅವರು ಎರಡು ದೇಶಗಳ ನಡುವಿನ ವ್ಯಾಪಾರಕ್ಕೆ ಒತ್ತು ನೀಡಿದ್ದಾರೆ' ಎಂದಿದ್ದಾರೆ. ಮೋದಿ ತಮ್ಮ ಭಾಷಣದಲ್ಲಿ, "ವ್ಯಾಪಾರದಲ್ಲಿ ಮಾಡಬೇಕಾದ್ದು ಬಹಳಷ್ಟಿದೆ, ಮುಂಬರುವ ದಶಕದಲ್ಲಿ ಭಾರತ-ಅಮೆರಿಕ ಸಂಬಂಧಗಳಲ್ಲಿ ವ್ಯಾಪಾರವು ಒಂದು ಪ್ರಮುಖ ಅಂಶವಾಗಿರುತ್ತದೆ" ಎಂದು ಹೇಳಿದ್ದಾರೆ. (ಚಿತ್ರಕೃಪೆ- ANI)

ZEENEWS TRENDING STORIES

By continuing to use the site, you agree to the use of cookies. You can find out more by Tapping this link