Photo Gallery: ಬಂಡೀಪುರದಲ್ಲಿ ಪ್ರಧಾನಿ ಮೋದಿ ಸಫಾರಿ ಹೇಗಿತ್ತು ನೋಡಿ
ಹುಲಿ ಸಂರಕ್ಷಣಾ ಯೋಜನೆ 50 ವರ್ಷ ಪೂರೈಸಿದ ಹಿನ್ನೆಲೆ ಬಂಡೀಪುರಕ್ಕೆ ಭೇಟಿ ನೀಡಿ ಪ್ರಧಾನಿ ಮೋದಿಯವರು ಕಾಡು ಸುತ್ತುವ ಮೂಲಕ ಸಫಾರಿ ನಡೆಸಿದರು.
ಶನಿವಾರ ರಾತ್ರಿಯೇ ಮೈಸೂರಿಗೆ ಆಗಮಿಸಿದ ಪ್ರಧಾನಿ ಮೋದಿ ಖಾಸಗಿ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ದರು. ಭಾನುವಾರ ಬೆಳ್ಳಂಬೆಳಗ್ಗೆ ವಿಶೇಷ ಸೇನಾ ಹೆಲಿಕಾಫ್ಟರ್‍ನಲ್ಲಿ ಆಗಮಿಸಿ ಬಳಿಕ ವಿಶೇಷ ಕಾರಿನ ಮೂಲಕ ಬಂಡೀಪುರ ಕ್ಯಾಂಪ್‍ಗೆ ತೆರಳಿದರು.
ಪ್ರಧಾನಿ ಮೋದಿಯವರು ಸಫಾರಿ ತೊಡುಗೆಯಲ್ಲಿ ವಿಶೇಷವಾಗಿ ಕಾಣುತ್ತಿದ್ದರು. ಖಾಕಿ ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ಹ್ಯಾಟ್, ಗಾಗಲ್ಸ್, ಟೀ ಶರ್ಟ್ ಹಾಗೂ ಅರಣ್ಯ ಇಲಾಖೆ ಜಾಕೆಟ್ ಧರಿಸಿದ್ದರು.
ಬಂಡೀಪುರಕ್ಕೆ ಬಂದ ಪ್ರಧಾನಿ ಮೋದಿಯವರು ಬೈನಾಕುಲರ್‍ನಲ್ಲಿ ಕಾಡು ವೀಕ್ಷಿಸಿದರು. ಇದೇ ವೇಳೆ ಹುಲಿ ಚಿತ್ರದ ಜೊತೆ ಪೋಸ್ ನೀಡಿದ ಪ್ರಧಾನಿ ಮೋದಿಯವರ ಫೋಟೋ ಸಖತ್ ವೈರಲ್ ಆಗಿವೆ.
ಹುಲಿ ಸಂರಕ್ಷಣಾ ಯೋಜನೆ ಘೋಷಣೆಯ ಬಳಿಕ ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ದೇಶದಲ್ಲೇ ಕರ್ನಾಟಕ ಅತಿಹೆಚ್ಚು ಹುಲಿಗಳಿರುವ ರಾಜ್ಯವಾಗಿ ಹೊರಹೊಮ್ಮಿದೆ.