ನೆಹರೂ ಸ್ಮರಣೆಯಲ್ಲಿ ಮಕ್ಕಳ ದಿನಾಚರಣೆ: ಪ್ರಧಾನಿ, ಸಿಎಂ ಗಣ್ಯರ ಶುಭಾಶಯ
ಪ್ರಧಾನಿ ನರೇಂದ್ರ ಮೋದಿಯವರು ಇಂದು ನೆಹರೂ ಅವರನ್ನು ನೆನೆದಿದ್ದು ಅವರ ಜನ್ಮಜಯಂತಿಗೆ ಗೌರವ ನಮನ ಸಲ್ಲಿಸಿದ್ದಾರೆ. ‘ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮದಿನದಂದು ಅವರಿಗೆ ನಮನಗಳು’ ಎಂದು ಟ್ವೀಟ್ ಮಾಡುವ ಮೂಲಕ ಶುಭಾಶಯ ತಿಳಿಸಿದ್ದಾರೆ.
Tributes to Pandit Jawaharlal Nehru Ji on his birth anniversary.
— Narendra Modi (@narendramodi) November 14, 2021
‘ನಮಗೆ ಬೇಕಾಗಿರುವುದು ಶಾಂತಿಯ ಪೀಳಿಗೆ’ ಎಂಬ ಪಂಡಿತ್ ಜವಾಹರಲಾಲ್ ನೆಹರೂ ಅವರ ಹೇಳಿಕೆಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ‘ಸತ್ಯ, ಏಕತೆ ಮತ್ತು ಶಾಂತಿಯನ್ನು ಹೆಚ್ಚು ಗೌರವಿಸಿದ ಭಾರತದ ಮೊದಲ ಪ್ರಧಾನಿಯನ್ನು ಸ್ಮರಿಸುತ್ತಿದ್ದೇನೆ’ ಎಂದು ಶುಭಾಶಯ ತಿಳಿಸಿದ್ದಾರೆ.
“What we need is a generation of peace.” - Pandit Jawaharlal Nehru Remembering India’s first Prime Minister who greatly valued truth, unity and peace. pic.twitter.com/h89MpL39Ph
— Rahul Gandhi (@RahulGandhi) November 14, 2021
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಜವಾಹರಲಾಲ್ ನೆಹರೂ ಅವರನ್ನು ನೆನೆದು ಮಕ್ಕಳ ದಿನಾಚರಣೆಗೆ ಶುಭಕೋರಿದ್ದಾರೆ. ‘ದೇಶದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಜಯಂತಿಯಂದು ಅವರಿಗೆ ಗೌರವಪೂರ್ವಕ ಪ್ರಣಾಮಗಳು. ಅವರ ಸಂಸ್ಮರಣೆಗಳ ಜೊತೆಗೆ ನಾಡಿನ ಎಲ್ಲ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಪ್ರೀತಿಪೂರ್ವಕ ಶುಭಕಾಮನೆಗಳು’ ಎಂದು ಟ್ವೀಟ್ ಮಾಡಿದ್ದಾರೆ ಹೇಳಿದ್ದಾರೆ.
ದೇಶದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರ ಜಯಂತಿಯಂದು ಅವರಿಗೆ ಗೌರವಪೂರ್ವಕ ಪ್ರಣಾಮಗಳು. ಅವರ ಸಂಸ್ಮರಣೆಗಳ ಜೊತೆಗೆ ನಾಡಿನ ಎಲ್ಲ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಪ್ರೀತಿಪೂರ್ವಕ ಶುಭಕಾಮನೆಗಳು. #ChildrensDay2021 #JawaharlalNehru pic.twitter.com/xvG4Yprauc
— CM of Karnataka (@CMofKarnataka) November 14, 2021
‘ಸ್ವಾತಂತ್ರ್ಯ ಚಳವಳಿಯ ಮುಂಚೂಣಿ ನಾಯಕ, ಪ್ರಥಮ ಪ್ರಧಾನಮಂತ್ರಿ, ಭಾರತರತ್ನ ಪಂಡಿತ್ ಜವಾಹರಲಾಲ್ ನೆಹರೂ ಅವರ ಜಯಂತಿಯಂದು ಅವರ ಸಂಸ್ಮರಣೆಗಳ ಜೊತೆಗೆ ಎಲ್ಲ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಸದೃಢ, ಸಶಕ್ತ, ಸಮೃದ್ಧ ಭಾರತಕ್ಕಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆ ನಮ್ಮೆಲ್ಲರ ಹೊಣೆಗಾರಿಕೆ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಸ್ವಾತಂತ್ರ್ಯ ಚಳವಳಿಯ ಮುಂಚೂಣಿ ನಾಯಕ, ಪ್ರಥಮ ಪ್ರಧಾನಮಂತ್ರಿ, ಭಾರತರತ್ನ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಜಯಂತಿಯಂದು, ಅವರ ಸಂಸ್ಮರಣೆಗಳ ಜೊತೆಗೆ ಎಲ್ಲ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಸದೃಢ, ಸಶಕ್ತ, ಸಮೃದ್ಧ ಭಾರತಕ್ಕಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆ ನಮ್ಮೆಲ್ಲರ ಹೊಣೆಗಾರಿಕೆ. pic.twitter.com/MHcTvoypx7
— B.S. Yediyurappa (@BSYBJP) November 14, 2021
ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ‘ಆಧುನಿಕ, ಜಾತ್ಯತೀತ ಮತ್ತು ಶಕ್ತಿಶಾಲಿ ಭಾರತವನ್ನು ಅಭಿವೃದ್ಧಿಯ ಮುನ್ನೋಟದಿಂದ ಕಟ್ಟಿದ ಜವಾಹರಲಾಲ್ ನೆಹರೂ ಅವರನ್ನು ನವ ಭಾರತದ ಫಲಾನುಭವಿಗಳಾದ ನಾವು ಗೌರವ ಮತ್ತು ಕೃತಜ್ಞತೆಗಳಿಂದ ನೆನೆಯೋಣ. ಕಾಂಗ್ರೆಸ್ ಪಕ್ಷದ ಹೆಮ್ಮೆಯ ನಾಯಕ ಪಂಡಿತ್ ನೆಹರೂ ಅವರ ಚಿಂತನೆ ಮತ್ತು ಸಾಧನೆಗಳನ್ನು ಪಸರಿಸೋಣ’ ಎಂದು ಶುಭಾಶಯ ತಿಳಿಸಿದ್ದಾರೆ.
ಆಧುನಿಕ, ಜಾತ್ಯತೀತ ಮತ್ತು ಶಕ್ತಿಶಾಲಿ ಭಾರತವನ್ನು ಅಭಿವೃದ್ಧಿಯ ಮುನ್ನೋಟದಿಂದ ಕಟ್ಟಿದ ಜವಾಹರಲಾಲ ನೆಹರೂ ಅವರನ್ನು ನವ ಭಾರತದ ಫಲಾನುಭವಿಗಳಾದ ನಾವು ಗೌರವ ಮತ್ತು ಕೃತಜ್ಞತೆಗಳಿಂದ ನೆನೆಯೋಣ. ಕಾಂಗ್ರೆಸ್ ಪಕ್ಷದ ಹೆಮ್ಮೆಯ ನಾಯಕ ಪಂಡಿತ್ ನೆಹರೂ ಅವರ ಚಿಂತನೆ ಮತ್ತು ಸಾಧನೆಗಳನ್ನು ಪಸರಿಸೋಣ.#Nehru #ChildrensDay pic.twitter.com/xzQLzCJSnm
— Siddaramaiah (@siddaramaiah) November 14, 2021