Tokyo Olympicsಗೂ ಮುನ್ನ ಪಿವಿ ಸಿಂಧೂಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಪ್ರಧಾನಿ ಮೋದಿ
ಟೋಕಿಯೊ ಒಲಿಂಪಿಕ್ಸ್‌ನ ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಭಾರತೀಯ ಕುಸ್ತಿಪಟುಗಳನ್ನು ಭೇಟಿ ಮಾಡಿದರು.ಕುಸ್ತಿಯಲ್ಲಿ ಭಾರತವು 2 ಪದಕಗಳನ್ನು ಗೆದ್ದಿದೆ.
ಭಾರತೀಯ ಪುರುಷರ ಹಾಕಿ ತಂಡ ಕೂಡಾ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಉಪಹಾರ ಕೂಟದಲ್ಲಿ ಭಾಗಿಯಾಗಿತ್ತು.
41 ವರ್ಷಗಳ ನಂತರ ಹಾಕಿಯಲ್ಲಿ ಒಲಿಂಪಿಕ್ ಪದಕ ಗೆದ್ದ ಭಾರತದ ಪುರುಷರ ಹಾಕಿ ತಂಡದ ನಾಯಕ ಮನ್ ಪ್ರೀತ್ ಸಿಂಗ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಜೊತೆ ಐಸ್ ಕ್ರೀಂ ತಿನ್ನುವುದಾಗಿ ಈ ಹಿಂದೆ ನೀಡಿದ್ದ ಮಾತನ್ನು ಪ್ರಧಾನಿ ನೆರವೇರಿಸಿದ್ದಾರೆ.
ಇದರೊಂದಿಗೆ ಪಿವಿ ಸಿಂಧು ಪಿಎಂ ಮೋದಿಗೆ ರಿಯೋ ಒಲಿಂಪಿಕ್ಸ್ 2016 ರ ಬೆಳ್ಳಿ ಪದಕ ಮತ್ತು ಟೋಕಿಯೊ ಒಲಿಂಪಿಕ್ಸ್ ನ ಕಂಚಿನ ಪದಕವನ್ನು ತೋರಿಸಿದರು.