ನಾಗರಹಾವಿಗಿಂತಲೂ ವಿಷಕಾರಿ ಈ ಸಸ್ಯಗಳು ! ಒಂದೇ ಸ್ಪರ್ಶ ಉಸಿರು ನಿಲ್ಲಿಸಿ ಬಿಡುತ್ತದೆ ! ಎಚ್ಚರ ಮನೆ ಸುತ್ತ ಮುತ್ತಲೇ ಬೆಳೆದು ನಿಂತಿರುತ್ತವೆ ಈ ಗಿಡಗಳು

Thu, 02 Jan 2025-11:34 am,

ಈ ಸಸ್ಯದ ಪ್ರತಿಯೊಂದು ಭಾಗವು ವಿಷಕಾರಿಯಾಗಿದೆ. Belladonna ಸಸ್ಯದ ಈ ಹಣ್ಣನ್ನು ಹೆಚ್ಚಿನವರು ಬ್ಲೂ ಬೆರಿ ಎಂದು ಭಾವಿಸಿ ಸೇವಿಸಿ ಬಿಡುತ್ತಾರೆ. ಆದರೆ ಇದು ನಮ್ಮ ಉಸಿರನ್ನೇ ನಿಲ್ಲಿಸಿ ಬಿಡುತ್ತವೆ. 

ಈ ಸಸ್ಯವನ್ನು ಸಾಮಾನ್ಯವಾಗಿ ಕ್ಯಾಸ್ಟರ್ ಎಂದೂ ಕರೆಯುತ್ತಾರೆ. ರಿಸಿನ್ ಎಂಬ ಅಪಾಯಕಾರಿ ವಿಷವು ಇದರ ಬೀಜಗಳಲ್ಲಿ ಕಂಡುಬರುತ್ತದೆ. ಅದನ್ನು ಆಕಸ್ಮಿಕವಾಗಿ ಸ್ಪರ್ಶಿಸಿದರೆ ಅಥವಾ ತಿಂದರೆ, ಅತ್ಯಂತ ಅಪಾಯಕಾರಿ.  

Giant Hogweed ಸಸ್ಯವು ಅದರ ಮೇಲ್ಮೈಯಲ್ಲಿ ಫ್ಯೂರನೊಕೌಮರಿನ್ ಎಂಬ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಇದು ಚರ್ಮದ ಮೇಲೆ ತೀವ್ರವಾದ ಕಿರಿಕಿರಿ ಮತ್ತು ಗುಳ್ಳೆಗಳನ್ನು ಉಂಟುಮಾಡುತ್ತದೆ. ಈ ರಾಸಾಯನಿಕವು ದೀರ್ಘಕಾಲದವರೆಗೆ ದೇಹದ ಮೇಲೆ ಇದ್ದರೆ  ಅತ್ಯಂತ ಹಾನಿಕಾರಕ.  

ಇದನ್ನು ಮಂಕಿ ಬ್ರೆಡ್ (Manchineel Tree) ಎಂದು ಕರೆಯುತ್ತಾರೆ. ಇದರ ತೊಗಟೆ, ಎಲೆಗಳು ಮತ್ತು ಹಣ್ಣುಗಳು ತುಂಬಾ ವಿಷಕಾರಿಯಾಗಿದೆ. ಈ ಮರದ ಕೆಳಗೆ ನಿಂತರೂ ಸಾಕು  ಚರ್ಮದ ಕಿರಿಕಿರಿ ಉಂಟಾಗಿ ವಿಷವು ಹರಡುತ್ತದೆ. 

ಈ ಅಲಂಕಾರಿಕ ಸಸ್ಯವು ಅತ್ಯಂತ ವಿಷಕಾರಿಯಾಗಿದೆ.ನೋಡುವುದಕ್ಕೆ ಇದರ ಹೂವು  ತುಂಬಾ ಸುಂದರವಾಗಿರುತ್ತದೆ. ಅದರ ಎಲೆಗಳು, ಹೂವುಗಳು ಮತ್ತು ಬೀಜಗಳನ್ನು ಆಕಸ್ಮಿಕವಾಗಿ ಸ್ಪರ್ಶಿಸಿದರೆ ಅಥವಾ ತಿಂದರೆ ಅದು ಮಾರಣಾಂತಿಕವಾಗಬಹುದು.  

ಈ ಸಸ್ಯಗಳೊಂದಿಗೆ ಸಂಪರ್ಕವನ್ನು ತಪ್ಪಿಸಲು ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅವಶ್ಯಕ. ಆಕಸ್ಮಿಕವಾಗಿ ಈ ಸಸ್ಯಗಳ ಸಂಪರ್ಕಕ್ಕೆ ಬಂದರೆ, ತಕ್ಷಣ ವೈದ್ಯಕೀಯ ಸಹಾಯವನ್ನು ಪಡೆಯಬೇಕು.

ಸೂಚನೆ :ಅಂತರ್ಜಾಲದಲ್ಲಿ ಲಭ್ಯವಿರುವ ವಿಷಯದ ಆಧಾರದ ಮೇಲೆ ಈ ಮಾಹಿತಿಯನ್ನು ನೀಡಲಾಗಿದೆ. ಜೀ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link