ಬಿಗ್ ಬಾಸ್‌ನಲ್ಲಿ ಬಾಡಿಬಿಲ್ಡ್ ಮಾಡ್ಕೊಂಡು ಫೋಸ್ ಕೊಡ್ತಿದ್ದ ಖ್ಯಾತ ಸ್ಪರ್ಧಿಯ ಪತ್ನಿ ಅರೆಸ್ಟ್... ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಾಕೊಂಡ ಸುಂದ್ರಿ! ಮನೆಯಲ್ಲಿ ಸಿಕ್ತು ರಾಶಿ ಡ್ರಗ್ಸ್
ಜನಪ್ರಿಯ ಬಾಲಿವುಡ್ ನಟ ಏಜಾಜ್ ಖಾನ್ ಅವರನ್ನು ವಿವಾದಗಳ ಸುಳಿ ಬೆಂಬಿಡುವಂತೆ ಕಾಣಿಸುತ್ತಿಲ್ಲ. ಇತ್ತೀಚೆಗಷ್ಟೇ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದ ನಟ, ನೋಟಾಕ್ಕಿಂತ ಕಡಿಮೆ ಮತ ಪಡೆದು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದ್ದ ಮುಂಬೈ ಡ್ರಗ್ಸ್ ಪ್ರಕರಣದಲ್ಲಿ ಏಜಾಜ್ ಖಾನ್ ಪತ್ನಿ ಫಲನ್ ಗುಲಿವಾಲಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಜೋಗೇಶ್ವರಿಯಲ್ಲಿರುವ ಆಕೆಯ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು ಫಲನ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ವರ್ಷ ಅಕ್ಟೋಬರ್ 8 ರಂದು ಕಸ್ಟಮ್ಸ್ ಇಲಾಖೆ ಏಜಾಜ್ ಖಾನ್ ಕಚೇರಿ ಮೇಲೆ ದಾಳಿ ನಡೆಸಿತ್ತು. 35 ಲಕ್ಷ ಮೌಲ್ಯದ 10 ಗ್ರಾಂ ಎಂಡಿಎಂಎಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇತ್ತೀಚಿನ ಮಾಹಿತಿಯ ಪ್ರಕಾರ, ಈ ಪ್ರಕರಣದಲ್ಲಿ ಫಲನ್ ಭಾಗಿಯಾಗಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಏಜಾಜ್ ಖಾನ್ ಅವರ ಪತ್ನಿ ಫಲನ್ ಅವರನ್ನು ಬಂಧಿಸಿದ ನಂತರ ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಡ್ರಗ್ ಪ್ರಕರಣದ ತನಿಖೆಗಾಗಿ ಫಲನ್ ಅವರ ಮನೆ ಮತ್ತು ಕಚೇರಿಯನ್ನು ತನಿಖೆ ನಡೆಸಲಾಯಿತು. ನಟನ ಪತ್ನಿಯನ್ನು ವಿಚಾರಣೆಗಾಗಿ ಬಂಧಿಸಲಾಗಿದೆ. ಏಜಾಜ್ ಖಾನ್ ಅವರನ್ನು ಇನ್ನೂ ವಿಚಾರಣೆಗೆ ಕರೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಏಜಾಜ್ ಖಾನ್ ಈ ಹಿಂದೆ ಡ್ರಗ್ಸ್ ಪ್ರಕರಣಗಳಲ್ಲಿ ಹಲವು ಬಾರಿ ಬಂಧಿತನಾಗಿದ್ದರು. 2021 ರಲ್ಲಿ, ಈ ನಟನ ಬಳಿ 31 ಅಲ್ಪ್ರಜೋಲಮ್ ಮಾತ್ರೆಗಳು ಪತ್ತೆಯಾಗಿತ್ತು. ಆಗ ಕ್ರಮ ಕೂಡ ಕೈಗೊಳ್ಳಲಾಗಿತ್ತು. ಮಾದಕ ದ್ರವ್ಯ ಪ್ರಕರಣದಲ್ಲಿ 2 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ ಬಳಿಕ ಏಜಾಜ್ ಖಾನ್ ಬಿಡುಗಡೆಗೊಂಡಿದ್ದರು. ಅಷ್ಟೇ ಅಲ್ಲ, ಆಕ್ಷೇಪಾರ್ಹ ಪೋಸ್ಟ್‌ಗಳು ಮತ್ತು ಅಶ್ಲೀಲ ಕಾಮೆಂಟ್‌ಗಳಿಗಾಗಿ ನಟ ಹಲವಾರು ಬಾರಿ ಜೈಲು ಶಿಕ್ಷೆ ಕೂಡ ಗುರಿಯಾಗಿದ್ದರು.
ಹಿಂದಿ ಬಿಗ್ ಬಾಸ್ 7 ಮತ್ತು 8ನೇ ಸೀಸನ್ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಏಜಾಜ್ ಖಾನ್ ಹಲವು ಹಿಂದಿ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ರಕ್ತ ಚರಿತ್ರ 2 ಚಿತ್ರದ ಮೂಲಕ ಅವರು ಟಾಲಿವುಟ್‌ಗೆ ಪ್ರವೇಶಿಸಿದ್ದ ಅವರು, ಅದಾದ ನಂತರ ಹಲವಾರು ಚಿತ್ರಗಳಲ್ಲಿ ವಿಲನ್ ಆಗಿ ನಟಿಸಿದ್ದರು.