ದರ್ಶನ್ ವಿರುದ್ಧ ಸಿಕ್ಕೇ ಬಿಡ್ತು ಬಹು ಮುಖ್ಯ ಸಾಕ್ಷಿ! ʻಕರಿಯʼನ ಕರಿಯರ್ ಕತೆ ಇಲ್ಲಿಗೆ ಮುಗೀತಾ?
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಕರಿಯರ್ ಮುಗಿದೇ ಹೋಯ್ತಾ ಎಂಬ ಆತಂಕ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ನನಗೇನೂ ಗೊತ್ತಿಲ್ಲ ಅಂತಿದ್ದ ದರ್ಶನ್ ಇದೀಗ ಈ ಸಾಕ್ಷಿಗಳನ್ನು ಕಂಡು ಮೌನಕ್ಕೆ ಜಾರಿದ್ದಾರಂತೆ ಎನ್ನಲಾಗಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ವಿರುದ್ಧ ಕೆಲವು ಪ್ರಮುಖ ಸಾಕ್ಷಿಗಳು ಸಿಕ್ಕಿವೆಯಂತೆ. ಕೊಲೆಯಾದ ಸ್ಥಳದಲ್ಲಿ ದರ್ಶನ್, ಪವಿತ್ರಾಗೌಡ, ನಾಗರಾಜ್, ವಿನಯ್, ಸೇರಿ ಆರು ಮಂದಿ ಮೊಬೈಲ್ ಇತ್ತು ಎಂಬ ಬಹುದೊಡ್ಡ ಸಾಕ್ಷಿ ಇದೀಗ ಪೊಲೀಸರ ಕೈ ಸೇರಿದೆ.
ರೇಣುಕಾ ಸ್ವಾಮಿ ತನಗೆ ಅಶ್ಲೀಲ ಮೆಸೇಜ್ ಮಾಡುತ್ತಿದ್ದ ವಿಚಾರವನ್ನು ದರ್ಶನ್ ಅವರ ಬಳಿ ಹೇಳಿಕೊಂಡಿದ್ದಾಗಿ ಪವಿತ್ರಾ ಗೌಡ ಅಧಿಕಾರಿಗಳ ಬಳಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಕೊಲೆ ನಡೆದಿತ್ತು ಎನ್ನಲಾದ ಆರ್.ಆರ್ ನಗರ ಶೆಡ್‌ನಲ್ಲಿ ಮೃತ ರೇಣುಕಾ ಸ್ವಾಮಿಯ ರಕ್ತದ ಕಲೆ, ಕೂದಲು ಹಾಗೂ ಬೆವರಿನ ಸ್ಯಾಂಪಲ್ಸ್ ಸಿಕ್ಕಿದೆಯಂತೆ ಎನ್ನಲಾಗಿದೆ.
ರೇಣುಕಾಸ್ವಾಮಿ ಕೊಲೆಯ ನಂತರ ಇಬ್ಬರು ಆರೋಪಿಗಳು ಕೃತ್ಯದ ಬಗ್ಗೆ ಚರ್ಚಿಸಿದ ಕಾಲ್ ಡಿಟೇಲ್ಸ್ ಅಧಿಕಾರಿಗಳ ಬಳಿಯಿದೆ ಎಂದು ಹೇಳಲಾಗ್ತಿದೆ. ಆರೋಪಿಗಳಾದ ವಿನಯ್, ಪವನ್, ಪ್ರದೋಶ್ ವಿಚಾರಣೆ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ಬಹುದೊಡ್ಡ ಹೇಳಿಕೆಯೊಂದನ್ನ ನೀಡಿದ್ದಾರಂತೆ ಎನ್ನಲಾಗಿದೆ.
ಆರೋಪಿಗಳಾದ ಕಾರ್ತಿಕ್, ಕೇಶವ್, ನಿಖಿಲ್ ನಾಯ್ಕ್ ತಾವೇ ಕೊಲೆ ಮಾಡಿದ್ದಾಗಿ ಪೊಲೀಸರ ಮುಂದೆ ಸರೆಂಡರ್ ಆಗಿದ್ದಾರೆ. ಅಲ್ಲದೇ ಈ ಮೂರು ಜನರಿಗೂ ಮೃತದೇಹ ಬಿಸಾಡಲು ತಲಾ ಐದು ಲಕ್ಷ ನೀಡಲಾಗಿದೆ ಎನ್ನಲಾಗಿದ್ದು, ಈಗ ಆ ಹಣ ಜಪ್ತಿ ಮಾಡಲಾಗಿದೆ ಎಂದು ಹೇಳಲಾಗ್ತಿದೆ.
ಶೆಡ್ ಒಳಗಡೆ, ಹೊರಗಡೆ ಸೇರಿ ಒಟ್ಟು 15ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಡಿವಿಆರ್ ಸಮೇತ ಪೊಲೀಸ್ ಅಧಿಕಾರಿಗಳು ಸೀಜ್ ಮಾಡಿದ್ದಾರೆ ಎನ್ನಲಾಗಿದೆ. ಈ ಸಿಸಿ ಕ್ಯಾಮರಾ ದೃಶ್ಯಗಳೇ ದರ್ಶನ್‌ರನ್ನು ಇಕ್ಕಟ್ಟಿಗೆ ಸಿಲುಕಿಸಬಹುದಾಗಿದೆ. ದರ್ಶನ್ ಬರೋದು, ಹೋಗೋದು ಎಲ್ಲವೂ ಈ ಸಿಸಿಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗಿದೆಯಂತೆ ಎಂದು ಹೇಳಲಾಗಿದೆ.
ಇಷ್ಟೆಲ್ಲ ಸಾಕ್ಷಿಗಳನ್ನು ಇಟ್ಟುಕೊಂಡಿರುವ ಪೊಲೀಸರು ಅದೊಂದು ವೇಳೆ ದರ್ಶನ್ ಮೇಲಿನ ಕೊಲೆ ಆರೋಪವನ್ನು ಸಾಬೀತು ಮಾಡೇ ಬಿಟ್ಟರೆ, ಕಾಟೇರಾ ದರ್ಶನ್ ವೃತ್ತಿಜೀವನದ ಕೊನೆಯ ಸಿನಿಮಾ ಆಗಬಹುದು.
ಕೊಲೆ ಪ್ರಕರಣದಲ್ಲಿ ಆರೋಪಿಯಾದ ದರ್ಶನ್ ಮೇಲೆ ಈಗಾಗಲೆ ಸಾಕಷ್ಟು ಅಸಮಾಧಾನವನ್ನು ಇಂಡಸ್ಟ್ರಿಯಲ್ಲಿನ ಜನ ಹೊರ ಹಾಕುತ್ತಿದ್ದಾರೆ. ಹೀಗಿರುವಾಗ ಈ ಕೊಲೆ ಪ್ರಕರಣ ದಾಸ ದರ್ಶನ್ ಕರಿಯರ್‌ಗೆ ಬಹುದೊಡ್ಡ ಹೊಡೆತ ನೀಡಿದೆ ಎಂದರೆ ತಪ್ಪಾಗಲಾರದು.