ಆರೋಗ್ಯಕ್ಕೆ ವರದಾನಕ್ಕಿಂತ ಕಡಿಮೆ ಇಲ್ಲ ದಾಳಿಂಬೆ
ದಾಳಿಂಬೆ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಇದು ನಿದ್ರಾಹೀನತೆ ಸಮಸ್ಯೆ ಇರುವವರಿಗೆ ತುಂಬಾ ಪ್ರಯೋಜನಕಾಗಿ ಎಂದು ಹೇಳಲಾಗುತ್ತದೆ. ದಾಳಿಂಬೆಯಲ್ಲಿರುವ ಮೆಗ್ನೀಸಿಯಮ್ ಅಂಶವು ನಿಮಗೆ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.
ದಾಳಿಂಬೆ ಸೇವನೆಯು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ತುಂಬಾ ಸಹಕಾರಿ. ದಾಳಿಂಬೆಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ.
ದಾಳಿಂಬೆಯಲ್ಲಿರುವ ವಿಟಮಿನ್ ಸಿ ಚರ್ಮದಲ್ಲಿ ಕಾಲಜನ್ ರಚನೆಯ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಚರ್ಮದ ಪಿಗ್ಮೆಂಟೇಶನ್ ಮತ್ತು ಸುಕ್ಕುಗಳಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಮುಖದ ಹೊಳಪನ್ನು ಹೆಚ್ಚಿಸುತ್ತದೆ.
ರೋಗನಿರೋಧಕ ಶಕ್ತಿ ವೃದ್ಧಿಸಲು : ದಾಳಿಂಬೆ ಉತ್ಕರ್ಷಣ ನಿರೋಧಕಗಳ ನಿಧಿ ಎಂದು ಹೇಳಲಾಗುತ್ತದೆ. ಇದರಲ್ಲಿರುವ ಕೆಲವು ಅಂಶಗಳು ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದಲ್ಲದೆ, ದಾಳಿಂಬೆ ವಿಟಮಿನ್ ಸಿ ಮತ್ತು ಆಂಟಿವೈರಲ್ ಗುಣಗಳನ್ನು ಹೊಂದಿದೆ. ಇವು ವೈರಲ್ ಸೋಂಕುಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ದಾಳಿಂಬೆ ಜ್ಯೂಸ್ ಅನ್ನು ಬೆಳಗಿನ ಉಪಾಹಾರದೊಂದಿಗೆ ಅಥವಾ ಊಟದ ನಂತರ ಸೇವಿಸಬಹುದು.