ಈಕೆ ಭಾರತದ ಅತ್ಯಂತ ಶ್ರೀಮಂತ ಬಾಲನಟಿ: 17ರ ಹರೆಯದಲ್ಲೇ 10 ಕೋಟಿ ಸಂಭಾವನೆ ಪಡೆಯುತ್ತಾಳೆ ಈ ಬಾಲೆ

Sat, 09 Sep 2023-10:07 am,

ಸಿನಿರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹಿರಿಯ ಕಲಾವಿದರಿಗೆಯೇ ಸೆಡ್ಡು ಹೊಡೆಯುವಂತಹ ಸಾಮಾರ್ಥ್ಯವುಳ್ಳ ಬಾಲ ಕಲಾವಿದರಿದ್ದಾರೆ. ಅದು ಅಭಿನಯದಲ್ಲಾಗಲಿ, ಸಂಭಾವನೆಯಲ್ಲಾಗಲಿ, ಸ್ಪರ್ಧೆ ಅಂದ್ರೆ ಸ್ಪರ್ಧೆ.

ಅಂದಹಾಗೆ ನಾವಿಂದು ಹೇಳಹೊರಟಿರೋ ವಿಷಯ ಏನಂದ್ರೆ, ಇಲ್ಲೊಬ್ಬ ಬಾಲನಟಿ ಭಾರತದ ಅತ್ಯಂತ ಶ್ರೀಮಂತ ಬಾಲನಟಿಯಂತೆ. ಈಕೆಯ ಸಂಭಾವನೆ 10 ಕೋಟಿ ರೂ. ಇದೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಅಷ್ಟಕ್ಕೂ ಯಾರೀಕೆ? ಎಂದು ಆಲೋಚಿಸುತ್ತಿದ್ದೀರಾ.. ಈ ವರದಿ ಓದಿ. .

ತಮಿಳುನಾಡಿನ ಸ್ಟಾರ್ ಕಿಡ್ ಸಾರಾ ಅರ್ಜುನ್ 2023 ರಲ್ಲಿ ಅಂದಾಜು 10 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯದೊಂದಿಗೆ ಭಾರತದ ಅತ್ಯಂತ ಶ್ರೀಮಂತ ಬಾಲನಟಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಸಾರಾ ಹಲವಾರು ಹಿಟ್ ಚಿತ್ರಗಳ ಭಾಗವಾಗಿದ್ದಾರೆ. 17 ವರ್ಷದ ಸಾರಾ ದೈವ ತಿರುಮಗಲ್ ಸಿನಿಮಾ ಮೂಲಕ ತಮಿಳಿನಲ್ಲಿ ವೃತ್ತಿಜೀವನ ಪ್ರಾರಂಭಿಸಿದರೆ, 404 ಚಿತ್ರದ ಮೂಲಕ ತನ್ನ 5ನೇ ವಯಸ್ಸಿನಲ್ಲಿ ಹಿಂದಿ ಸಿನಿರಂಗದಲ್ಲಿ ಲಕ್ ಟೆಸ್ಟ್ ಮಾಡಿದ್ದರು.

ಸಾರಾ ಅರ್ಜುನ್, ಎರಡು ದಶಕಗಳಿಂದ ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಹೆಸರು ಮಾಡಿರುವ ಹಿರಿಯ ನಟ ರಾಜ್ ಅರ್ಜುನ್ ಅವರ ಮಗಳು. 2021 ರಲ್ಲಿ ಬಿಡುಗಡೆಯಾದ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ಕಿರಿಯ ನಂದಿನಿ (ಐಶ್ವರ್ಯ ರೈ ಹಿರಿಯಳಾಗಿ ನಿರ್ವಹಿಸಿದ ಪಾತ್ರ) ಪಾತ್ರದಲ್ಲಿ ಸಾರಾ ಅಭಿನಯಿಸಿದ್ದು, ಅವರಿಗೆ ದೊಡ್ಡ ಬ್ರೇಕ್ ಕೊಟ್ಟಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link