ಯಶ್ ಜೊತೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಾರಾ ಪೂಜಾ ಹೆಗ್ಡೆ!

Sun, 12 Jun 2022-5:56 pm,

ಮೂಲತಃ ಕರ್ನಾಟಕದವರೇ ಆಗಿರುವ ನಟಿ ಪೂಜಾ ಹೆಗ್ಡೆ ಇದೂವರೆಗೂ ಒಂದೂ ಕನ್ನಡ ಸಿನಿಮಾ ಮಾಡಿಲ್ಲ. ಇದೀಗ ಈ ಬೆಡಗಿಯ ಬಗ್ಗೆ ಗಾಸಿಪ್‌ ಒಂದು ಹುಟ್ಟಿಕೊಂಡಿದೆ. ಅದೇನೆಂದರೆ ನಟಿ ಪೂಜಾ ಹೆಗ್ಡೆ ಕನ್ನಡದ ರಾಕಿಂಗ್ ಸ್ಟಾರ್​ ಯಶ್‌ಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. 

ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿ, ವಿಶ್ವಾದ್ಯಂತ ಜನರ ಮನಗೆದ್ದ ಕೆಜಿಎಫ್-2 ಚಿತ್ರದ ಬಳಿಕ ಯಶ್ ಯಾವ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿದೆ. ಈ ಬೆನ್ನಲ್ಲೆ ಅವರು ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಅದು ಕೂಡ ಮಾಸ್ ಚಿತ್ರ ನಿರ್ದೇಶಕ ನರ್ತನ್ ಅವರದ್ದು, ಎಂಬುದು ವಿಶೇಷ. 

ಸ್ಯಾಂಡಲ್​ವುಡ್​ನಲ್ಲಿ ಮಫ್ತಿ ಹೆಸರಿನ ಬ್ಲಾಕ್ ಬ್ಲಸ್ಟರ್ ಚಿತ್ರ ನೀಡಿದ್ದ ಡೈರೆಕ್ಟರ್‌ ನರ್ತನ್ ಈಗಾಗಲೇ ಯಶ್​ಗಾಗಿ ಕಥೆ ರೆಡಿ ಮಾಡಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಹೊಸ ಸಿನಿಮಾದ ಚಿತ್ರಕಥೆಯನ್ನು ಯಶ್‌ ಕೇಲಿದ್ದು, ಇದಕ್ಕೆ ಗ್ರೀನ್ ಸಿಗ್ನಲ್ ಸಹ ನೀಡಿದ್ದಾರಂತೆ. 

ಈ ಸಿನಿಮಾದ ಮೂಲಕವೇ ಕರುನಾಡ ಬೆಡಗಿ ಪೂಜಾ ಹೆಗ್ಡೆ ಚಂದನವನಕ್ಕೆ ಕಾಲಿಡಲಿದ್ದಾರೆ ಎಂಬ ಗಾಸಿಪ್‌ ಒಂದು ಬಲು ಜೋರಾಗಿದೆ. ಯಶ್‌ ಅಭಿನಯದ ಈ ಹೊಸ ಚಿತ್ರದಲ್ಲಿ ಸೌತ್ ಸುಂದರಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಟಾಲಿವುಡ್​ನಿಂದ ಕೇಳಿ ಬಂದಿದೆ. ಮೂಲಗಳ ಪ್ರಕಾರ, ಪೂಜಾ ಹೆಗ್ಡೆ ಅವರನ್ನು ಚಿತ್ರ ತಂಡ ಈಗಾಗಲೇ ಭೇಟಿಯಾಗಿ ಮಾತುಕತೆ ಕೂಡ ನಡೆಸಿದೆಯಂತೆ. 

ಪೂಜಾ ಹೆಗ್ಡೆ ಕೈಯಲ್ಲಿ ಸದ್ಯ ನಾಲ್ಕು ಚಿತ್ರಗಳಿವೆ. ಎರಡು ಬಾಲಿವುಡ್ ಚಿತ್ರಗಳಲ್ಲಿ ನಟಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳುತ್ತಿದ್ದಾರೆ. ಹಿಂದಿಯಲ್ಲಿ ನಿರ್ಮಾಣವಾಗುತ್ತಿರುವ ಸರ್ಕಸ್ ಚಿತ್ರದಲ್ಲಿ ರಣಬೀರ್ ಕಪೂರ್​ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಜೊತೆಗೆ ಕಭಿ ಈದ್, ಕಭಿ ದಿವಾಳಿ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಪೂಜಾ ಹೆಗ್ಡೆ ಅಭಿನಯಿಸಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link