Pooja Hegde : ಸತತ ಫ್ಲಾಪ್‌ಗಳ ನಡುವೆಯೂ ಸಖತ್ ಹಾಟ್ ಫೋಟೋ ಶೂಟ್..! ಪೂಜಾ ಫೋಟೋಸ್ ವೈರಲ್
ಪೂಜಾ ಹೆಗ್ಡೆ ತಮಿಳಿನ 'ಮೂಗಮುಡಿ' ಎಂಬ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸಾಧಾರಣ ಯಶಸ್ಸನ್ನು ಕಂಡಿತು.
ನಾಗ ಚೈತನ್ಯ ಅಭಿನಯದ 'ಓ ಲೈಲಾ ಮೋರೋ' ಚಿತ್ರದ ಮೂಲಕ ಪೂಜಾ ಹೆಗ್ಡೆ ಟಾಲಿವುಡ್‌ಗೆ ಪರಿಚಯವಾದರು.
ನಂತರ ವರುಣ್ ತೇಜ್ ಹೀರೋ ಆಗಿ ಪರಿಚಯವಾದ 'ಮುಕುಂದ' ಸಿನಿಮಾದಲ್ಲಿ ಗೋಪಿಕಮ್ಮನಾಗಿ ಉತ್ತಮ ಅಭಿನಯ ನೀಡಿ, ಜನಮನ ಗೆದ್ದರು.
ಹರೀಶ್ ಶಂಕರ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ಅಭಿನಯದ 'ದುವ್ವಾಡ ಜಗನ್ನಾಥಂ' ಚಿತ್ರದ ಮೂಲಕ ಪೂಜಾ ಹೆಗ್ಡೆ ಸ್ಟಾರ್ ಹೀರೋಯಿನ್ ಆದರು.
ನಂತರ ಸಲ್ಮಾನ್ ಖಾನ್ ಜೊತೆಗಿನ ಹಿಂದಿ ಚಿತ್ರಗಳಾದ 'ಸರ್ಕಸ್' ಮತ್ತು 'ಕಿಸಿ ಕಾ ಭಾಯ್ ಕಿಸಿ ಕಾ ಜಾನ್' ಫ್ಲಾಪ್‌ಗಳಿಂದ ಬಾಲಿವುಡ್‌ನಲ್ಲಿ ಸ್ಟಾರ್‌ಡಮ್ ಕಡಿಮೆಯಾಯಿತು.
ಸದ್ಯ ಪೂಜಾ ಹೆಗಡೆ ಕೈಯಲ್ಲಿ ಸರಿಯಾದ ಚಿತ್ರಗಳಿಲ್ಲ ಎಂದೇ ಹೇಳಬೇಕು. ಇತ್ತೀಚಿನ ಸರಣಿ ಫ್ಲಾಪ್‌ಗಳಿಂದ ಆಕೆಗೆ ಅವಕಾಶಗಳು ಕಡಿಮೆಯಾಗಿವೆ.
ಸತತ ಪ್ಲಾಪ್‌ಗಳ ನಡುವೆಯೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ನಟಿ ಗ್ಲಾಮರ್ ಶೋ ಮೂಲಕ ಸದಾ ಸುದ್ದಿಯಲ್ಲಿದ್ದಾರೆ.