`ನನ್ನ ಮಗಳ ಬಗ್ಗೆ ಭಯವಿದೆ... ಆಕೆಗೆ ಸೆಕೆಂಡ್‌ಗೆ ಒಬ್ಬ ಬೇಕಂತೆ; ಇವತ್ತು ಇವನ ಜೊತೆ, ನಾಳೆ ಮತ್ತೊಬ್ಬ...` ಮಗಳ ಬಗ್ಗೆಯೇ ಖ್ಯಾತ ನಟಿ ಶ್ವೇತಾ ಶಾಕಿಂಗ್ ಹೇಳಿಕೆ!
ಗಲಾಟಾ ಇಂಡಿಯಾ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಕಿರುತೆರೆಯ ಖ್ಯಾತ ನಟಿ ಶ್ವೇತಾ ತಿವಾರಿ, ತಮ್ಮ ಮಗಳ ಬಗ್ಗೆ ಹರಿದಾಡುತ್ತಿರುವ ವದಂತಿಗಳು ಮತ್ತು ಸುಳ್ಳು ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
"ಪಾಲಕ್ ಬಹಳ ಗಟ್ಟಿಗಿತ್ತಿ. ಆದರೆ ಆಕೆ ಬಗ್ಗೆ ಹರಿದಾಡುತ್ತಿರುವ ವದಂತಿ ನೋಡಿದರೆ ಮುಂದೇನಾಗುತ್ತದೆ ಎಂಬುದು ತಿಳಿದಿಲ್ಲ. ಕೆಲವೊಂದು ವದಂತಿಗಳು ಆಕೆಯ ವಿಶ್ವಾಸವನ್ನೇ ಅಲುಗಾಡಿಸಬಹುದು ಎಂಬ ಭಯ ನನ್ನನ್ನು ಕಾಡುತ್ತಿದೆ" ಎಂದು ಹೇಳಿದ್ದಾರೆ.
“ಅವಳು ಎಷ್ಟು ಬಲಶಾಲಿ ಎಂಬುದು ನನಗೆ ಗೊತ್ತಿದೆ. ಅವಳ ಬಗ್ಗೆ ಸತ್ಯ ತಿಳಿದಿರುವವರಿಗೆ ಯಾರು ಏನೆಂದರೂ ಲೆಕ್ಕಕ್ಕೆ ಬರುವುದಿಲ್ಲ. ಆದರೆ ಆಕೆ ಇನ್ನೂ ಸಣ್ಣವಳು, ಒಂದು ದಿನ ಏನಾದರೂ ತಪ್ಪಾಗಬಹುದೋ ಎಂಬ ಭಯವಿದೆ. ಇದನ್ನೆಲ್ಲಾ ಅವಳು ಎಷ್ಟು ದಿನ ಸಹಿಸಿಕೊಳ್ಳುತ್ತಾಳೆ ಎಂದು ನನಗೆ ಅರ್ಥವಾಗುತ್ತಿಲ್ಲ" ಎಂದಿದ್ದಾರೆ.
"ಇದೇ ವಿಷಯದಲ್ಲಿ ನನಗೆ ಭಯವಾಗುತ್ತದೆ. ನಾಳೆ ಕೆಲವು ಕಾಮೆಂಟ್, ಕೆಲವು ಲೇಖನಗಳನ್ನು ಓದಿದಾಗ ಆತ್ಮವಿಶ್ವಾಸವನ್ನು ಅಲುಗಾಡಿಸಬಹುದು. ಅವಳು ಇನ್ನೂ ಮಗು. ಆಕೆ ಬಗ್ಗೆ ಎಂತೆಂಥಾ ಸುದ್ದಿಗಳು ಹರಿದಾಡುತ್ತಿವೆ ಎಂದರೆ, ಆಕೆಗೆ ನಿಮಿಷಕ್ಕೊಬ್ಬ ಬಾಯ್ ಫ್ರೆಂಡ್, ಇವತ್ತು ಇವನೊಂದಿಗೆ, ನಾಳೆ ಮತ್ತೊಬ್ಬನೊಂದಿಗೆ.. ಹೀಗೆಲ್ಲಾ ಹರಡುತ್ತಿವೆ. ಇದನ್ನೆಲ್ಲಾ ಎಷ್ಟು ದಿನ ಸಹಿಸಿಕೊಳ್ಳುತ್ತಾಳೆ. ಯಾವುದೂ ಕೂಡ ಆಕೆಗೆ ಮುಳ್ಳಾಗದಿರಲಿ" ಎಂದು ಹೇಳಿದ್ದಾರೆ.
ಪಾಲಕ್ ತಿವಾರಿ ಶ್ವೇತಾ ಮತ್ತು ರಾಜಾ ಚೌಧರಿ ಅವರ ಪುತ್ರಿ. ಶ್ವೇತಾ ಮತ್ತು ರಾಜಾ 1998 ರಲ್ಲಿ ವಿವಾಹವಾಗಿದ್ದು, ಪಾಲಕ್ 8 ಅಕ್ಟೋಬರ್ 2000 ರಂದು ಜನಿಸಿದರು. ಆದರೆ ಶ್ವೇತಾ ಮತ್ತು ರಾಜಾ 2007 ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಇನ್ನು ಕೆಲ ವದಂತಿಗಳನ್ನು ಕೇಳುವುದಾದರೆ, ಪಾಲಕ್ ಸೈಫ್ ಅಲಿ ಖಾನ್ ಅವರ ಮಗ ಇಬ್ರಾಹಿಂ ಅಲಿ ಖಾನ್ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಹೇಳುತ್ತಿವೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.