Portable Table Fans: ವಿದ್ಯುತ್ ಇಲ್ಲದೆಯೂ ತಂಪು ಗಾಳಿ ನೀಡುವ ಟೇಬಲ್ ಫ್ಯಾನ್ ಗಳಿವು

Thu, 05 May 2022-3:02 pm,

 ಗೀಕ್ ರೀಚಾರ್ಜೇಬಲ್ ಮಿನಿ ಫ್ಯಾನ್ : ಮಿನಿ ರೀಚಾರ್ಜ್ ಮಾಡಬಹುದಾದ ಫ್ಯಾನ್ ಲೆಡ್ ಲೈಟ್‌ನೊಂದಿಗೆ ಬರುತ್ತದೆ. ಅಂದರೆ, ರಾತ್ರಿಯಲ್ಲಿ ಇದು ಬಲ್ಬ್‌ನಂತೆ ಕೆಲಸ ಮಾಡುತ್ತದೆ. ಇದು 4000mAh ನ ಪ್ರಬಲ ಬ್ಯಾಟರಿಯನ್ನು ಹೊಂದಿದ್ದು, ಉತ್ತಮ ಬ್ಯಾಕ್ಅಪ್ ನೀಡುತ್ತದೆ. ಇದನ್ನು 90 ಡಿಗ್ರಿಗಳವರೆಗೆ ಮಡಚಬಹುದು. ಇದು 5 ಬ್ಲೇಡ್ಗಳನ್ನು ಹೊಂದಿದೆ. ಇದು ಅತ್ಯುತ್ತಮ ಕೂಲಿಂಗ್ ಅನ್ನು ಒದಗಿಸುತ್ತದೆ. ಫ್ಯಾನ್‌ನಲ್ಲಿ ನಾಲ್ಕು ವೇಗದ ಸೆಟ್ಟಿಂಗ್‌ಗಳು ಲಭ್ಯವಿದೆ.  ಈ ಫ್ಯಾನ್ ಅನ್ನು Amazon ನಲ್ಲಿ 2975 ರೂ.ಗೆ ಖರೀದಿಸಬಹುದು.

ಬಲ್ಫಿಸ್ USB ರೀಚಾರ್ಜೇಬಲ್ ಟೇಬಲ್ ಏರ್ ಫ್ಯಾನ್ : ಈ ರೀಚಾರ್ಜೇಬಲ್ ಟೇಬಲ್ ಏರ್ ಫ್ಯಾನ್ ಬಳಸಿ ವಿದ್ಯುತ್ ಇಲ್ಲದಾಗಲೂ ಗಾಳಿಯನ್ನುಪಡೆಯಬಹುದು. ಅದನ್ನು ಸುಲಭವಾಗಿ ಮೇಜಿನ ಮೇಲೆ ಇರಿಸಬಹುದು. ಅಡುಗೆಮನೆಯಲ್ಲಿಯೂ ಇದನ್ನು ಸುಲಭವಾಗಿ ಬಳಸಬಹುದು. ಈ ಫ್ಯಾನ್ ಅನ್ನು Amazon ನಲ್ಲಿ 1,299 ರೂ.ಗೆ ಖರೀದಿಸಬಹುದು.

ಹ್ಯಾವೆಲ್ಸ್ ಕ್ರೆಸೆಂಟ್ 250mm ಪರ್ಸನಲ್ ಫ್ಯಾನ್ : ಈ ಟೇಬಲ್ ಫ್ಯಾನ್ ತುಂಬಾ ಸೊಗಸಾದ ನೋಟದಲ್ಲಿ ಬರುತ್ತದೆ. ಇದರಲ್ಲಿ 180 ಡಿಗ್ರಿ ಹೆಡ್ ಮೂವ್ಮೆಂಟ್ ಸಿಗುತ್ತದೆ.  ಕೇವಲ 38 ವ್ಯಾಟ್ ವಿದ್ಯುತ್ ಅನ್ನು ಬಳಸುತ್ತದೆ. ಅಂದರೆ ಗಂಟೆಗಟ್ಟಲೆ ಆನ್ ಮಾಡಿದರೂ,  ವಿದ್ಯುತ್ ಬಿಲ್ ತುಂಬಾ ಕಡಿಮೆ ಬರುತ್ತದೆ. ಈ ಫ್ಯಾನ್ ಅನ್ನು Amazon ನಲ್ಲಿ 2,829 ರೂ.ಗೆ ಖರೀದಿಸಬಹುದು.

Forty4 10000mAh 8-ಇಂಚಿನ ಪೋರ್ಟಬಲ್ ಕ್ಲಿಪ್-ಆನ್ ಫ್ಯಾನ್: ಈ ಪೋರ್ಟಬಲ್ ಫ್ಯಾನ್ 10000mAh ನ ಪ್ರಬಲ ಬ್ಯಾಟರಿಯೊಂದಿಗೆ ಬರುತ್ತದೆ. ಈ ಫ್ಯಾನ್ 4 ಸ್ಪೀಡ್ ಕಂಟ್ರೋಲರ್ 360 ಡಿಗ್ರಿ ತಿರುಗುವಿಕೆಯೊಂದಿಗೆ ಬರುತ್ತಿದೆ. ಈ ಫ್ಯಾನ್ ಅನ್ನು ಕಚೇರಿಯ ಮೇಜಿನ ಮೇಲೆ, ಕಾರಿನಲ್ಲಿ, ಅಡುಗೆಮನೆಯಲ್ಲಿ ಅಥವಾ ಅಧ್ಯಯನ ಮಾಡುವಾಗಲೂ ಬಳಸಬಹುದು. ಈ ಫ್ಯಾನ್ ಅನ್ನು Amazon ನಲ್ಲಿ 3,224 ರೂ.ಗೆ ಖರೀದಿಸಬಹುದು.

ಸನ್ ಕಿಂಗ್ ಪೆಡೆಸ್ಟಲ್ ಸೈಲೆಂಟ್ ಮತ್ತು ಪೋರ್ಟಬಲ್ ಹೈ ಸ್ಪೀಡ್ ಟೇಬಲ್ ಫ್ಯಾನ್ : ಇದು ವಿದ್ಯಾರ್ಥಿಗಳಿಗೆ ಉತ್ತಮ ಟೇಬಲ್ ಫ್ಯಾನ್ ಆಗಿದೆ. ಈ ಫ್ಯಾನ್ ನ ವಿಶೇಷತೆ ಏನೆಂದರೆ ಇದನ್ನು ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ 24 ಗಂಟೆಗಳ ಕಾಲ ತಡೆರಹಿತವಾಗಿ ಬಳಸಬಹುದಾಗಿದೆ.  ಇದು 2000 rpm ಹೈ ಸ್ಪೀಡ್ ಮೋಟಾರ್‌ನೊಂದಿಗೆ ಬರುತ್ತದೆ ಅದಈ  ಫ್ಯಾನ್ ಅನ್ನು Amazon ನಲ್ಲಿ 3,224 ರೂ.ಗೆ ಖರೀದಿಸಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link